ಎಡದಂಡೆಯಲ್ಲಿ ಕೊಚ್ಚಿಕೊಂಡು ಹೋಗಿದ್ದವರ ಪೈಕಿ ಓರ್ವರ ಮೃತದೇಹ ಪತ್ತೆ, ಶೋಧಕಾರ್ಯ ನಾಳೆಗೆ ಮುಂದೂಡಿಕೆ-Body of one of those washed up on the left bank found, search postponed until tomorrow

 SUDDILIVE || BHADRAVATHI

ಎಡದಂಡೆಯಲ್ಲಿ ಕೊಚ್ಚಿಕೊಂಡು ಹೋಗಿದ್ದವರ ಪೈಕಿ ಓರ್ವರ ಮೃತದೇಹ ಪತ್ತೆ, ಶೋಧಕಾರ್ಯ ನಾಳೆಗೆ ಮುಂದೂಡಿಕೆ-Body of one of those washed up on the left bank found, search postponed until tomorrow     

Body, found

ಬಟ್ಟೆ ತೊಳೆಯಲು ಹೊಳೆಹೊನ್ನೂರು ಪೊಲೀಸ್ ಠಾಣ ವ್ಯಾಪ್ತಿಯ ಅರೆಬಿಳಚಿ ಗ್ರಾಮದ ಭದ್ರ ಎಡದಂಡೆ ನಾಲೆಗೆ ತೆರಳಿದ್ದ ಒಂದೇ ಕುಟುಂಬಸ್ಥರ ನಾಲ್ವರ ಪೈಕಿ ನೀರುಪಾಲು ಆಗಿದ್ದು, ಅದರಲ್ಲಿ ಓರ್ವರ ಮೃತದೇಹ ಪತ್ತೆಯಾಗಿದೆ. ನೀರುಪಾಲಾಗಿದ್ದ ಇಬ್ವರು ಪುರುಷರು ಮತ್ತು ಇಬ್ಬರು ಮಹಿಳೆಯರ ಪೈಕಿ ಓರ್ವ ಪುರುಷನ ಮೃತದೇಹ ಪತ್ತೆಯಾಗಿದೆ.

ಭದ್ರ ಎಡದಂಡೆ ನಾಲೆಯಲ್ಲಿ ಕಳೆದ 27 ಗಂಟೆಯಲ್ಲಿ ನಡೆದ ದುರ್ಘಟನೆಯಲ್ಲಿ ತಾಯಿ, ಮಗ, ಮಗಳು ಮತ್ತು ಅಳಿಯನ ಸಮೇತ ನೀರು ಪಾಲಾಗಿರುವ ಘಟನೆ ನಡೆದಿತ್ತು. ಕಳೆದ 24 ಗಂಟೆಯ ಶೋಧ ಕಾರ್ಯದಲ್ಲಿ ಓರ್ವನ ಮೃತ ದೇಹ ಪತ್ತೆಯಾಗಿದೆ.


ಭದ್ರ ಎಡದಂಡೆಯಲ್ಲಿ ಇಂದು ಬೆಳಗ್ಗಿನಿಂದ ಅಗ್ನಿಶಾಮಕದಳ ಎಎಸ್ಒ ಹುಲಿಯಪ್ಪ ಮತ್ತು ಈಶ್ವರ್ ಮಲ್ಪೆಯವರ ನೇತೃತ್ವದಲ್ಲಿ 8 ಕಿಮಿ ದೂರದ ವರೆಗೆ ಶೋಧಕಾರ್ಯ ನಡೆದಿದೆ. ಆದರೆ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ನಿನ್ನೆ ನೀರುಪಾಲಾದ ಸ್ಥಳದಿಂದ ಒಂದು ಕಿಮಿ ದೂರದ ಅಂತರದಲ್ಲಿ ರವಿ ಎಂಬಾತನ ಮೃತ ದೇಹ ಪತ್ತೆಯಾಗಿದೆ. 

ಈಶ್ವರ್ ಮಲ್ಪೆಯವರಿಗೆ ಈ ಮೃತ ದೇಹ ಪತ್ತೆಯಾಗಿದೆ. ಆದರೆ ನಿನ್ನೆ ನಾಲ್ಕೈದು ಗಂಟೆಗಳ ಕಾಲ ಅಗ್ನಿಶಾಮಕ ದಳ ಇದೇ ಸ್ಥಳದಲ್ಲಿ ಈಜಾಡಿತ್ತು. ಆದರೆ ಪ್ರಕರಣ ಬೆಳಕಿಗೆ ಬಂದಿಲ್ಲ. ಇವತ್ತಿಗೆ ಶೋಧಕಾರ್ಯ ಮುಗಿದಿದೆ. ಮತ್ತೆ ನಾಳೆ ಆರಂಭವಾಗಲಿದೆ.  

Body of one of those washed up on the left bank found, search postponed until tomorrow

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close