ಸಂಸದರ ಕಾರಿಗೆ ಬೊಲೆರೋ ಡಿಕ್ಕಿ-Bolero collides with MP's car

 SUDDILIVE || SHIVAMOGGA

ಸಂಸದರ ಕಾರಿಗೆ ಬೊಲೆರೋ ಡಿಕ್ಕಿ-Bolero collides with MP's car    

Belero, Mpcar


ಸಂಸದ ಬಿ.ವೈ. ರಾಘವೇಂದ್ರ ಅವರ ಇನ್ನೋವಾ ಕಾರಿಗೆ ಮತ್ತೊಂದು ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಶಿಕಾರಿಪುರದಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.

ಕುಂಚೇನಹಳ್ಳಿ ಗ್ರಾಮದ ಸಮೀಪ ಸಂಸದರ ಕಾರಿನ ಎಸ್ಕಾರ್ಟ್ ಹಂಪ್ಸ್ ಬಂತು ಎಂದು ಸ್ಲೋ ಮಾಡಲಾಗಿದೆ. ಎಸ್ಕಾರ್ಟ್ ಹಿಂದೆ ಇದ್ದ ಸಂಸದರಿದ್ದ ಕಾರು ಸಹ ನಿಧಾನ ಚಲಿಸುತ್ತಿದ್ದಾಗ ಹಿಂದಿನಿಂದ ಬಂದ ಬೊಲೇರೊ ಕಾರು ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದೆ. 


ಅಪಘಾತದ ರಭಸಕ್ಕೆ ಸಂಸದರ  ಕಾರು ಹಿಂದು ಮುಂದು ನುಜ್ಜುಗುಜ್ಜಾಗಿದೆ. ಸಂಸದ ರಾಘವೇಂದ್ರ ಸೇರಿದಂತೆ ಕಾರಿನಲ್ಲಿದ್ದ ಸಂಸದರ ಕಚೇರಿ ಸಿಬ್ಬಂದಿ ಅಪಾಯದಿಂದ ಪಾರಾಗಿದ್ದಾರೆ. ಸಂಸದರ ಇನ್ನೋವಾ ಮತ್ತು ಬೊಲೆರೋ ಕಾರನ್ನ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ತಂದಿರಿಸಲಾಗಿದೆ. ಎಫ್ಐಆರ್ ದಾಖಲಾಗುವ ಸಾಧ್ಯತೆಯಿದೆ. ಸಂಸದರು ಎಸ್ಕಾರ್ಟ್ ನಲ್ಲಿ ಶಿವಮೊಗ್ಗಕ್ಕೆ ಚಲಿಸಿದ್ದಾರೆ.

Bolero collides with MP's car 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close