ನವುಲೆ ಕೆರೆ ಬಗ್ಗೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಮಗ್ರ ಚರ್ಚೆ-Comprehensive discussion on Navule Lake in pre-budget meeting

 SUDDILIVE || SHIVAMOGGA

ನವುಲೆ ಕೆರೆ ಬಗ್ಗೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಮಗ್ರ ಚರ್ಚೆ-Comprehensive discussion on Navule Lake in pre-budget meeting    

Navule, lake

ಶಿವಮೊಗ್ಗದ ಮಹಾನಗರ ಪಾಲಿಕೆಯಲ್ಲಿ ಬಜೆಟ್ ನ ಪುರ್ವಭಾವಿ ಸಭೆ ನಡೆದಿದೆ. 2026-27 ನೇ ಸಾಲಿನ ಫೂರ್ವಭಾವಿ ಸಭೆಯು ಆಯುಕ್ತ ಮಾಯಣ್ಣ ಗೌಡರ ನೇತೃತ್ವದಲ್ಲಿ  ನಡೆದಿದೆ. ನವುಲೆ ಕೆರೆ ಅಭಿವೃದ್ಧಿಯ ಬಗ್ಗೆ ಸಭೆಯಲ್ಲಿ ಬಹಳ ಸಮಯದ ವರೆಗೆ ಚರ್ಚಿಸಲಾಯಿತು. 

2025 ರವರೆಗೆ ಈ ಹಿಂದೆ ಸಂಗ್ರಹವಾದ ಹಣ ವ್ಯಯ ಮಾಡಿರುವ ಬಗ್ಗೆ ನಾಗರೀಕ ಹಿತರಕ್ಷಣ ವೇದಿಕೆಯ ವಸಂತ್ ಕುಮಾರ್ ಆಕ್ಷೇಪಿಸಿದರು. ಕಳೆದ ಬಾರಿಯ ಬಜೆಟ್ ನಲ್ಲಿ  ಪಾಯಿಟ್ಸ್ ಟು ಪಾಯಿಂಟ್ಸ್ ಚರ್ಚೆ ನಡೆದಿದೆ. ಆಕ್ಷನ್ ಪ್ಲಾನ್ ಮೇಲೆ ಚರ್ಚೆ ನಡೆದರೂ ಈ ಬಗ್ಗೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಆಕ್ಷೇಪಿಸಿದರು.

2025 ನೇ ಸಾಲಿನಲ್ಲಿ ಆಸ್ತಿ ತೆರಿಗೆಯಲ್ಲಿ 43 ಕೋಟಿ ನಿರೀಕ್ಷೆಯಿತ್ತು. ಆಸ್ತಿ ತೆರಿಗೆಯಲ್ಲಿ 45 ಕೋಟಿ ಸಂಗ್ರಹವಾಗಿದೆ. ಒಳಚರಂಡಿ 68 ಕೋಟಿ, ಅಭಿವೃದ್ಧಿ ಶುಲ್ಕದಿಂದ 70 ಕೋಟಿ 83 ಲಕ್ಷ ಹಣ ಸಂಗ್ರಹವಾಗಿದೆ. ದಸರಾ, ರಾಜಸ್ವ ನಿಧಿಯಿಂದ ಹಾಗೂ ವಿಶೇಷ  ಅನುಧಾನದಿಂದ 9.61 ಕೋಟಿ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಕಳೆದ ಬಾರಿಯ ಬಜೆಟ್ ನ ಬಗ್ಗೆ ಸಭೆಗೆ ತಿಳಿಸಿದರು. 

ಸ್ವಚ್ಛ ಭಾರತದಲ್ಲಿ, ಮಹಾತ್ಮಗಾಂಧಿ ಅನುದಾನ ಅಮೃತ್ ಯೋಜನೆಯಿಂದ ಯಾವ ಹಣ ಬಂದಿಲ್ಲ. ಹಣ ನೀಡುರುವ ಬಗ್ಗೆ ದಾಖಲೆಯಲ್ಲಿ ದಾಖಲಾಗಿದೆ. ಫಂಡೇ ಬಾರದೆ ಹೇಗೆ ಎಂದು ನಾಗರೀಕ ಹಿತರಕ್ಷಣ ವೇದಿಕೆ ಆಕ್ಷೇಪಿಸಿತು.  2000 ಕೋಟಿ 9 ಪಾಲಿಕೆಗೆ ರಾಜ್ಯ ಸರ್ಕಾರ ಅನುದಾನ ನೀಡುವುದಾಗಿ ಹೇಳಿದೆ. ತಲಾ 200 ಕೋಟಿ ಪಾಲಿಕೆಗೆ ಸಿಗಲಿದೆ. ಎನ್ ಜಿಟಿಯಿಂದ ತ್ಯಜ್ಯ ವಸ್ತುಗಳ ವಿಲೆಗೆ 40 ಕೋಟಿ ಹಣ ನೀಡಲಾಗಿದೆ.  ಯುಜಿಡಿ, ತ್ಯಾಜ್ಯಗಳಿಗೆ ಡಿಪಿಆರ್ ಮಾಡಿ ವರ್ಕ್ ಆರ್ಡರ್ ಮಾಡಿದ್ದಾರೆ. ಇದಕ್ಕೆ ಮಹಾತ್ಮ ಗಾಂಧಿ ಯೋಜನೆಗೆ 120 ಕೋಟಿ ಸೇರಿ 160 ಕೋಟಿ ಹಣ ಕರ್ಚಾದಂತಾಗಿದೆ. ಕೆರೆ ಅಭಿವೃಧ್ಧಿಯಲ್ಲಿ ತ್ಯಾವರಚಟ್ನಹಳ್ಳಿ ಪುರಲೆ, ನವುಲೆ ಕೆರೆ ಸೇರಿ ನಾಲ್ಕು ಕೆರೆಗೆ 25 ಕೋಟಿ,  ಅಮೃತ್ 2 ನಲ್ಲಿ ಪಾರ್ಕ್ ಡೆವೆಲಪ್ ಮೆಂಟ್ ಗೆ ನಾಲ್ಕು ಪಾರ್ಕ್ ತೆಗೆದುಕೊಳ್ಳಲಾಗಿದೆ. ಇದು ಹಣ ಬರಬೇಕಿದೆ ಎಂದು ಆಯುಕ್ತರು ಸಃಎಗೆ ತಿಳಿಸಿದರು. 

ಬಜೆಟ್ ಕೊರತೆಯಿದೆಯಾ ಅಥವಾ ಸಮವಾಗಿ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು ಇನ್ನೂ ಮೂರು ತಿಂಗಳು ಇದೆ. ಇದು ನೋಡಿದ ಮೇಲೆ ಬಜೆಟ್ ಏನಾಗಿದೆ ಗೊತ್ತಾಗಲಿದೆ ಎಂದರು. ನವುಲೆ ಕೆರೆಯಲ್ಲಿ ನೀರು ನಿಲ್ಲದೆ ಚಾನೆಲ್ ಗೆ ಮೂರು ಇಂಚು ಪೈಪ್ ಅಳವಡಿಸಿ ಕನೆಕ್ಷನ್ ಆಗಿದೆ ಇದರ ಬಗ್ಗೆ ಮೂಲ ಉದ್ದೇಶವೇನು ಎಂದು ಪಾಲಿಕೆ ಸ್ಪಷ್ಟಪಡಿಸಲು ರಾಗಿಗುಡ್ಡದ ರಮೇಶ್ ಆಗ್ರಹಿಸಿದರು. 

ಆಯುಕ್ತ ಮಾಯಣ್ಣಗೌಡ ಮಾತನಾಡಿ ಕೆಎಸ್ ಸಿಎ ಅಭಿವೃದ್ಧಿ ಮಾಡಬೇಕಿದೆ. ಪಾಲಿಕೆ ಮತ್ತು  KSCA ಜೊತೆ ಕೆರೆ ಎಂಒಯು 30 ವರ್ಷದ ಹಿಂದೆ ಆಗಿದೆ ಅದರ ಬಗ್ಗೆ ಮಾಹಿತಿಯಿಲ್ಲ. ಇದರ ಬಗ್ಗೆ ಬಾಧ್ಯತೆಯಿದ್ದರೆ ಕ್ರಮ ಜರುಗಿಸಲಾಗುವುದು. ನವುಲೆ ಕೆರೆಗೆ ತ್ಯಾಜ್ಯ ನೀರು ಸಂಗ್ರಹವಾಗುತ್ತಿತ್ತು ಎಂದು ಆಕ್ಷೇಪಣೆವಿತ್ತು. ಮಳೆಗಾಲ ಬಂದಾಗ ಡ್ರೈಔಟ್ ಮಾಡಲು ಸಾಧ್ಯವಿದೆ. ಸೂಡಾ. ಪಾಲಿಕೆ ಮತ್ತು ಕೇಸ್ಸಿಎಯಿಂದ ಅಭಿವೃಧ್ಧಿಗೆ ಸಂಯೋಜನೆ ಮಾಡಲಾಗುತ್ತಿದೆ ಎಂದು ಆಯುಕ್ತರು ಸಭೆಗೆ ತಿಳಿಸಿದರು. 

12 ಅಡಿ ಆಳದಲ್ಲಿ ಮೂರು ಇಂಚು ರಿಂಗ್ ಪೈಪ್  ಇದೆ. ಡ್ರೈಔಟ್ ಗೆ ಸ್ಟೇಡಿಯಂಗೆ ಪೈಪ್ ರಿಂಗ್  ಅಳವಡಿಸಬೇಕಿತ್ತು. ಆದರೆ ಕೆರೆಯನ್ನೇ ಡ್ರೈಔಟ್ ಮಾಡಲಾಗುತ್ತಿದೆ ಎಂದು ನಾಗರೀಕ ಹಿತರಕ್ಷಣೆ ವೇದಿಕೆ ಆಕ್ಷೇಪಿಸಿದೆ. ಪಾಲಿಕೆ ಇಂಜಿನಿಯರ್ ಮಾತನಾಡಿ, ಒಂದು ಲೈನ್ ಆಳದಲ್ಲಿತ್ತು. ಅದಕ್ಕೆ ಪರ್ಯಾಯವಾಗಿ ಮಾಡಲಾಗಿದೆ ಎಂದಾಗ ನಾಗರೀಕ ಹಿತರಕ್ಷಣ ವೇದಿಕೆ ಆಕ್ಷೇಪಿಸಿದರು. ನವುಲೆ ಕೆರೆಯಲ್ಲಿ ನೀರು ನಿಲ್ತಾಯಿಲ್ಲ. ಡ್ರೈಔಟ್ ಆಗ್ತಾಯಿದೆ. ಕೆರೆ ಉಳಿಸುವ ಕೆಲಸ ಆಗ್ತಾಯಿಲ್ಲ ಎಂದರು. 

ಆಯುಕ್ತರು ಮಾತನಾಡಿ, ನವುಲೆ ಮತ್ತು ನಾಲ್ಕು ಕೆರೆ ಅಭಿವೃದ್ಧಿಗೆ ಎಇಇ ರಜತ್ ಗೆ ನೀಡಲಾಗಿದೆ.  ಬೆಸ್ಟ್ ಏನು ಮಾಡಬಹುದು ಎಂದು ಸ್ಥಳ ಪರಿಶೀಲನೆ ನಡೆಸಿ ಡಿಪಿಆರ್ ರಚಿಸೋಣ, ಪುರಲೆ, ತ್ಯಾವರೆ ಚಟ್ನಹಳ್ಳಿ, ನವುಲೆ ಗೋಪಾಳ ಕೆರೆಗೆ ಡಿಪಿಆರ್ ಮಾಡುವ ಮೊದಲು ಪೂರ್ವ ಸಭೆ ನಡೆಸೋಣ ಎಂದರು. 

ಬಸ್ ಓಡಾಡದ ಜಾಗದಲ್ಲಿ ಬಸ್ ಶೆಲ್ಟರ್ ಕಮಾಡಲಾಗಿದೆ. ಫ್ರೀಡಂಪಾರ್ಕ್ ನಲ್ಲಿ ಜಿಮ್ ಉಪಕರಣವನ್ನ ತುಕ್ಕು ಹಿಡಿಯುವಂತಾಗಿದೆ. 25 ಲಕ್ಷ ಹಣ ಹಾಳಾಗಿದೆ ಎಂದು ಸಾರ್ವಜನಿಕರಾದ ಜನಾರ್ಧನ್ ಪೈ ಆಕ್ಷೇಪಿಸಿದರು. 

196 ಪಾರ್ಕ್ ಇದೆ. ಪೆನ್ಸಿಂಗ್ ಹಾಕದೆ 40 ಪಾರ್ಕ್ ಇದೆ. 98 ಫೆನ್ಸಿಂಗ್ ಇದೆ. 2013 ರವರೆಗೆ ತೋಟಗಾರಿಕ ವಿಭಾಗ ಇರಲಿಲ್ಲ. ಮಧುನಾಯಕ್,  ಸಂತೋಷ್ ಪ್ರವೀಣ್ 75 ಪಾರ್ಕ್ ಗುರುತಿಸಲಾಗಿದೆ. ಮೂರು ವಲಯ ಗುರುತಿಸಿ ನೀರು, ಸ್ವಚ್ಛತೆಗಾಗಿ 75 ವಲಯ ಟೆಂಡರ್ ಕರೆಯಲಾಗಿದೆ. ಟೆಂಡರ್ ಒಪನಿಂಗ್ ಆಗ್ತಯಿದೆ ಎಂದು ತಿಳಿಸಿದರು. 

Comprehensive discussion on Navule Lake in pre-budget meeting

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close