ಬೆನ್ನಿಗೆ ಚೂರಿ ಹಾಕಿದ ಆರೋಪಿಗಳಿಗೆ ನ್ಯಾಯಲಯದಿಂದ ತೀರ್ಪು-Court sentences backstabbing accused

 SUDDILIVE || SHIVAMOGGA

ಬೆನ್ನಿಗೆ ಚೂರಿ ಹಾಕಿದ ಆರೋಪಿಗಳಿಗೆ ನ್ಯಾಯಲಯದಿಂದ ತೀರ್ಪು-Court sentences backstabbing accused

Court, sentences


ಕೊಲೆ ಮಾಡುವ ಉದ್ದೇಶದಿಂದ ಯುವಕನ‌ಮೇಲೆ ಚಾಕುವುನಿಂದ ಬೆನ್ನಿಗೆ ಇರಿದಿದ್ದ ಮೂವರು ಆರೋಪಿಗಳಿಗೆ 5 ವರ್ಷ ಕಠಿಣ ಕಾರಾವಾಸ ಮತ್ತು 12,000 ರೂ ದಂಡವನ್ನು ವಿಧಿಸಿ ಘನ 1 ನೇ ಹೆಚ್ಚುವರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. 

ಜ.20 ರಂದು ರಾತ್ರಿ ಶಿವಮೊಗ್ಗ ನಗರ ಮಂಜುನಾಥ ಬಡಾವಣೆ ಮಹಾನಗರ ಪಾಲಿಕೆಯ ಖಾಲಿ ಜಾಗದಲ್ಲಿ  ಬಾಬು ಕಿರಣ ರವರು ತಾನು ಕೆಲಸ ಮಾಡಿದ ಹಣವನ್ನು ಪಡೆದುಕೊಂಡು ವಾಪಸ್ ಮನೆಗೆ ಹೋಗುವಾಗ, ಸಂತೋಷ್ @ ಸಂತು, ಶರತ್ ಮತ್ತು ಪ್ರಶಾಂತ್ ಎಂ ಅವ್ಯಾಚ್ಯಶಬ್ದಗಳಿಂದ ಬೈದು  ಕೊಲೆ ಮಾಡುವ ಉದ್ದೇಶದಿಂದ ಬೆನ್ನಿಗೆ ಚುಚ್ಚಿದ್ದು, ಹಾಗೂ ಹೊಟ್ಟೆ ಮತ್ತು ಮೈಕೈಗೆ ಕೈಯಿಂದ ಹೊಡೆದು ನೋವುಂಟು ಮಾಡಿ, ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಘಟನೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. 

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಆಗಿನ ಪಿಎಸ್ಐ ತಿಮ್ಮಪ್ಪ(ನಿವೃತ್ತ) ರವರು ಪ್ರಕರಣದ ತನಿಖೆ ಪೂರೈಸಿ, ಘನ ನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು. ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಶ್ರೀ ಮಮತಾ ಬಿ.ಎಸ್ ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದರು.  

ಘನ 1 ನೇ ಹೆಚ್ಚುವರಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆಸಿದ್ದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಧೀಶರಾದ ಶ್ರೀ ಅಭಯ್ ಧನಪಾಲ್ ಚೌಗಲ ರವರು ಇಂದು ಎ1 ಸಂತೋಷ್ @ ಸಂತು, 27 ವರ್ಷ, ಮಂಜುನಾಥ್ ಬಡಾವಣೆ ಶಿವಮೊಗ್ಗ. ಎ2 ಶರತ್, 24 ವರ್ಷ, ಮಂಜುನಾಥ್ ಬಡಾವಣೆ ಶಿವಮೊಗ್ಗ ಮತ್ತು ಎ3 ಪ್ರಶಾಂತ್ ಎಂ, 24 ವರ್ಷ, ಬುದ್ದಾನಗರ ಶಿವಮೊಗ್ಗ. ಇವರುಗಳಿಗೆ 5 ವರ್ಷ ಕಠಿಣ ಕಾರಾವಾಸ ಮತ್ತು 12,000 ರೂ ದಂಡವನ್ನು ವಿಧಿಸಿದ್ದು, ತಪ್ಪಿದ್ದಲ್ಲಿ 1 ವರ್ಷ ಸಾಧಾರಣ ಸಜೆಯನ್ನು ಆದೇಶಿಸಿದ್ದಾರೆ. 

Court sentences backstabbing accused

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close