ಪಾತ್ರೆಗೆ ಪಾಲಿಶ್ ಹಾಕುವ ನೆಪದಲ್ಲಿ ಬಂದ ಅಪರಿಚಿತರು ಕದ್ದಿದ್ದು ಬರೋಬ್ಬರಿ 36 ಗ್ರಾಂ ಚಿನ್ನಾಭರಣ-A total of 36 grams of gold jewelry was stolen

 SUDDILIVE || SHIVAMOGGA

ಪಾತ್ರೆಗೆ ಪಾಲಿಶ್ ಹಾಕುವ ನೆಪದಲ್ಲಿ ಬಂದ ಅಪರಿಚಿತರು ಕದ್ದಿದ್ದು ಬರೋಬ್ಬರಿ 36 ಗ್ರಾಂ ಚಿನ್ನಾಭರಣ-A total of 36 grams of gold jewelry was stolen by strangers who came under the pretext of polishing the character.

Jewellary, stolen


ಪಾತ್ರೆಗೆ ಪಾಲಿಶ್ ಹಾಕಿ ಕೊಡುವುದಾಗಿ ಬಂದಿದ್ದ ಇಬ್ಬರು ಅಪರಿಚಿತರಿಂದ 36 ಗ್ರಾಂ ಚಿನ್ನದ ಆಭರಣಗಳನ್ನು ಕಳುವು ಮಾಡಿರುವ ಘಟನೆ ವರದಿಯಾಗಿದೆ. 

ಸಿದ್ದೇಶ್ವರ ಸರ್ಕಲ್ ಅಲ್ ಹರಿಂ ಲೇಔಟ್ ನ ಕಾಲಭೈರೇಶ್ವರ ನಿಲಯದಲ್ಲಿ ವಾಸವಾಗಿದ್ದ ಅತ್ತೆ ಶಹತಜ್ ಬೇಗಂ ಮತ್ತು ಮೂರು ಜನ ಮಕ್ಕಳೊಂದಿಗೆ ವಾಸವಾಗಿದ್ದ ಸಲ್ಮ ಎಂಬ ಗೃಹಿಣಿ ಯ ಮನೆಗೆ ಬಂದ ಇಬ್ಬರು ಅಪರಿಚಿತರು ಮೊದಲಿಗೆ ಪಾತ್ರೆ ಪಾಲಿಶ್ ಮಾಡಿಕೊಡುತ್ತೇವೆ ಎಂದು ಹೇಳಿ ಕುಕ್ಕರ್ ಪಾಲಿಶ್ ಮಾಡಿ ಕೊಟ್ಟಿದ್ದಾರೆ. 

ನಂತರ ಬೆಳ್ಳಿ ಕಾಲುಂಗುರವನ್ನು ಪಾಲಿಶ್ ಮಾಡಿ ಕೊಟ್ಟಿದ್ದಾರೆ.  ಇದಾದ ನಂತರ ಬಂಗಾರಗಳಿಗೂ ಪಾಲಿಶ್ ಮಾಡಿಕೊಡುವುದಾಗಿ ಹೇಳಿದ ಅಪರಿಚಿತರು ಬಂಗಾರವನ್ನು ಕೊಡಿ ಎಂದು ಬಾಯಿಬಿಟ್ಟು ಕೇಳಿದ್ದಾರೆ. ಈ ವೇಳೆ ಅತ್ತೆ ಶಹತಜ್ ಬೇಗಂ ತಮ್ಮ ಕುತ್ತಿಗೆಯಲ್ಲಿದ್ದ ಚೈನನ್ನು, ಬಂಗಾರದ ಬಳೆಯನ್ನು, ಕಿವಿಯಲ್ಲಿದ್ದ ಕಿವಿಯೋಲೆಯನ್ನು ಹಾಗೂ ಉಂಗುರವನ್ನು ಬಿಚ್ಚಿ ಕೊಟ್ಟಿದ್ದಾರೆ.

ಈ ಎಲ್ಲಾ ಬಂಗಾರಗಳನ್ನ ಪಾಲಿಶ್ ಗಾಗಿ ತಂದಿದ್ದ ಸ್ಟೀಲ್ ಊಟದ ಬಾಕ್ಸ್ ನಲ್ಲಿ ನೀರಿನೊಂದಿಗೆ ಹಾಕಿ ಪೌಡರ್ ಅನ್ನು ಮಿಕ್ಸ್ ಮಾಡಿದ್ದಾರೆ.  ಈ ಡಬ್ಬಿಯನ್ನ ಒಲೆ ಮೇಲೆ ಇಟ್ಟು ಬಿಸಿ ಮಾಡಿ ಬಂಗಾರ ಪಾಲಿಶ್ ಆಗುತ್ತದೆ ಎಂದು ಹೇಳಿ ಜಾಗ ಖಾಲಿ ಮಾಡಿದ್ದಾರೆ.  ಅವರು ಹೇಳಿದಂತೆ ಡಬ್ಬಿಯನ್ನು ಬಿಸಿ ಮಾಡಿದ ನಂತರ ತೆಗೆದು ನೋಡಿದ ಗೃಹಣಿಗೆ ಶಾಕ್ ಆಗಿದೆ ಟಿಫನ್ ಬಾಕ್ಸ್ ನಲ್ಲಿದ್ದ ಒಟ್ಟು 36 ಗ್ರಾಂ ಚಿನ್ನಾಭರಣಗಳು ಕಳುವಾಗಿದೆ.  ಈ ಬಗ್ಗೆ ತುಂಗ ನಗರ ಪೊಲೀಸ್  ಠಾಣೆಯಲ್ಲಿ ದೂರು ನೀಡಲಾಗಿದೆ. ಮತ್ತೊಮ್ಮೆ ಪಾಲಿಶ್ ನೆಪದಲ್ಲಿ ಗ್ಯಾಂಗ್ ವೊಂದು ಆಕ್ಟಿವ್ ಆಗಿದೆ.

A total of 36 grams of gold jewelry was stolen       

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close