ಡ್ಯೂಟಿಗೆ ಕರೆದಿಲ್ಲವೆಂದಿದ್ದ ಚಾಲಕ ನೇಣಿಗೆ ಶರಣು-Driver hangs himself for not being called for duty

SUDDILIVE || SHIVAMOGGA

ಡ್ಯೂಟಿಗೆ ಕರೆದಿಲ್ಲವೆಂದಿದ್ದ ಚಾಲಕ ನೇಣಿಗೆ ಶರಣು-Driver hangs himself for not being called for duty    

Driver, hangs


ಆತ್ಮಹತ್ಯೆ ಯತ್ನಿಸಿದ್ದ ಸಾಗರದ ಕೆ.ಎಸ್.ಆರ್. ಟಿ. ಸಿ ಬಸ್ ಚಾಲಕ ಸಾವು ಕಂಡಿದ್ದಾನೆ. ಸಾಗರದ ಕೆ .ಎಸ್ .ಆರ್ .ಟಿ ಸಿ. ಬಸ್ ಚಾಲಕ ನಾಗಪ್ಪ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಮ್ಯಾನೇಜರ್ ಡ್ಯೂಟಿ ಗೆ ಹಾಕಿಲ್ಲವೆಂದಿದ್ದ ಚಾಲಕ ಮನೆಯ ಹೊರಗಡೆಯಿದ್ದ ಮರದ ತೊಲೆಗೆ ಕಂಡಕ್ಟರ್ ನೇಣುಗೆ ಕೊರಳು ಒಡ್ಡಿದ್ದರು. 

ಸಾಗರದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ನಾಗಪ್ಪ (55) ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತ್ಯಾಗರ್ತಿ ಮೂಲದವರಾಗಿದ್ದರು. ಮೃತ ನಾಗಪ್ಪ ಎರಡು ತಿಂಗಳಿನಿಂದ ಕರ್ತವ್ಯಕ್ಕೆ ಹೋಗದೆ ಮನೆಯಲ್ಲೇ ಇದ್ದರು.

ಹೆಂಡತಿ ಹಾಗೂ ಮಗ ಕೇಳಿದಾಗ ಮ್ಯಾನೇಜರ್ ಡ್ಯೂಟಿಗೆ ಹಾಕಿಲ್ಲ ಎಂದು ತಿಳಿಸಿದ್ದರು. ಜನವರಿ 5ರ ಸೋಮವಾರ ಸಂಜೆ ವೇಳೆಗೆ ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯ ಹೊರಗಡೆ ಮರದ ತೊಲೆಗೆ ನೇಣಿಗೆ ಯತ್ನಿಸಿದ್ದರು

ತಕ್ಷಣ ನಾಗಪ್ಪ ನ ಹಿರಿಯ ಮಗ ರಾಕೇಶ್ ನೋಡಿ ನೇಣು ಕುಣಿಕೆಯಿಂದ ಕೆಳಗೆ ಇಳಿಸಿ ತಕ್ಷಣ ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಇಂದು ನಾಗಪ್ಪ ಸಾವು ಕಂಡಿದ್ದಾರೆ. ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Driver hangs himself for not being called for duty

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close