ಭದ್ರತೆ ಹೆಚ್ಚಿಸುವಂತೆ ಈಶ್ವರಪ್ಪ ಮನವಿ- Eshwarappa appeals for increased security

 SUDDILIVE || SHIVAMOGGA

ಭದ್ರತೆ ಹೆಚ್ಚಿಸುವಂತೆ ಈಶ್ವರಪ್ಪ ಮನವಿ- Eshwarappa appeals for increased security   

Eshwarappa, appeals

ವಿದೇಶಿ ಮೂಲದಿಂದ ಅಂತರಾಷ್ಟ್ರೀಯ ಕರೆ ಬಂದಿರುವ ಕಾರಣ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಹಾಗೂ ರಾಷ್ಟ್ರಭಕ್ತರ ಬಳಗದ ವತಿಯಿಂದ ಎಸ್ಪಿ ನಿಖಿಲ್ ಬಿ ಅವರಿಗೆ ಮನವಿ ಸಲ್ಲಿಸಲಾಯಿತು.

ಈಶ್ವರಪ್ಪನವರ ಅಧಿಕೃತ ಮೊಬೈಲ್ ದೂರವಾಣಿ ಸಂಖ್ಯೆ 9880030004 ಗೆ ಜನವರಿ 7ರಂದು ವಿದೇಶಿ ಮೂಲದಿಂದ ಅಂತರಾಷ್ಟ್ರೀಯ ಮೊಬೈಲ್ ದೂರವಾಣಿ ಸಂಖ್ಯೆ+358465445069 ಇಂದ ಕರೆ ಬಂದಿದೆ. ಈ ಮೊದಲು ಅಂತರಾಷ್ಟ್ರೀಯ ಸಂಖ್ಯೆಯಿಂದ ಜೀವ ಬೆದರಿಕೆ ಕರೆಗಳು ಬಂದಿದ್ದವು ಆದ್ದರಿಂದ ಈ ವಿಷಯವಾಗಿ ಸೂಕ್ತ ತನಿಖೆ ಮಾಡುವುದಲ್ಲದೆ ಜೀವನ ಬೆದರಿಕೆ ಇರುವ ಕಾರಣ ಹೆಚ್ಚಿನ ಭದ್ರತೆಯನ್ನು ಒದಗಿಸುವಂತೆ ಈಶ್ವರಪ್ಪನವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಈ ಹಿಂದೆ ಈಶ್ವರಪ್ಪನವರಿಗೆ ವೈ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿತ್ತು ಆದರೆ ಸಕಾರಣವನ್ನು ನೀಡದೆ ಭದ್ರತೆಯನ್ನು ಎಕ್ಸ್ ಶ್ರೇಣಿಗೆ ಇಳಿಸಲಾಗಿದೆ. ಈಗಲೂ ಸಹ ನನ್ನ ಪ್ರಾಣಕ್ಕೆ ಬೆದರಿಕೆ ಇರುವ ಕಾರಣ ವೈ ಶ್ರೇಣಿಯ ಭದ್ರತೆಯನ್ನು ಮರು ಸ್ಥಾಪಿಸಲು ತುರ್ತಾಗಿ ಕ್ರಮ ವಹಿಸಬೇಕೆಂದು ಮನವಿಯಲ್ಲಿ ಅವರು ಆಗ್ರಹಿಸಿದ್ದಾರೆ.

ಆನಂತರ ಮಾತನಾಡಿರುವ ಮಾಜಿ ಟಿ ಸಿ ಎಂ ಈ ಕರಗಳಿಂದ ಬಂದಿರುವುದು ಯಾವುದೇ ಒಂದು ತನಿಖೆ ಆಗಬೇಕು. ಈ ಕರೆಗಳು ಯಾವ ಸಂಘಟನೆಯದು ಎಂಬುದು ಮೊದಲು ಸ್ಪಷ್ಟವಾಗಬೇಕು. ನಾನು ಮೊದಲು ಕರೆಯನ್ನ ಸ್ವೀಕರಿಸಲಿಲ್ಲ. ನಂತರ ಆ ನಂಬರ್ ಗೆ ಕರೆ ಮಾಡಿದರೆ ಕರೆ ಸ್ವೀಕೃತವಾಗಿಲ್ಲ.  ಹಾಗಾಗಿ ತನಗೆ ನೀಡಿರುವ ಭದ್ರತೆಯನ್ನು ಸರ್ಕಾರ ಹೆಚ್ಚಿಸಬೇಕು ಎಂದು ತಿಳಿಸಿದರು.

Eshwarappa appeals for increased security 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close