ಊಟ ಆದ ಮೇಲೆ ಸರ್ಕಾರಿ ಶಾಲಾ ಮಕ್ಕಳು ಅಸ್ವಸ್ಥ-ಆಸ್ಪತ್ರೆಗೆ ದಾಖಲು- Government primary school children fall ill after meal, admitted to hospital

 SUDDILIVE || BHADRAVATHI

ಊಟ ಆದ ಮೇಲೆ ಸರ್ಕಾರಿ ಶಾಲಾ ಮಕ್ಕಳು ಅಸ್ವಸ್ಥ-ಆಸ್ಪತ್ರೆಗೆ ದಾಖಲು- Government primary school children fall ill after meal, admitted to hospital    

Children, government


ಭದ್ರಾವತಿ ತಾಲೂಕಿನ ಅರಳಹಳ್ಳಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ವಾಂತಿ ಬೇದಿ ಹಿನ್ನಲೆಯಲ್ಲಿ ಅಸ್ವಸ್ಥರಾಗಿ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. 


ಊಟ ಆದ ಮೇಲೆ ನೀಡಿದ ರಕ್ತ ಅಭಿವೃದ್ಧಿಗೆ ನೀಡುವ ಟಾನಿಕ್ ನಿಂದ ಮಕ್ಕಳು ಅಸ್ವಸ್ಥವಾಗಿರುವುದಾಗಿ ಹೇಳಲಾಗುತ್ತಿದ್ದು, 6ನೇ ತರಗತಿ ಮಕ್ಕಳೆ ಹೆಚ್ಚು ಅಸ್ವಸ್ಥರಾಗಿರುವುದಾಗಿ ಹೇಳಲಾಗುತ್ತಿದೆ. 59 ಜನ ಶಾಲಾ ಮಕ್ಕಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಊಟದ ಮೇಲೆ ಮಕ್ಕಳಿಗೆ ರಕ್ತ ಅಭಿವೃದ್ಧಿಗಾಗಿ ಎಫ್ ಎಕ್ಸ್ ಟಾನಿಕ್ ನೀಡಬೇಕೆಂದು ಸರ್ಕಾರದ ಆದೇಶವಿದೆ. 

ಸರ್ಕಾರಿ ಆದೇಶದ ಹಿನ್ನಲೆಯಲ್ಲಿ ಟಾನಿಕ್ ನೀಡಿದ ಮೇಲೆ ಈ ಅವಘಡ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಯಾವುದಕ್ಕೂ ಶಿಕ್ಷಣ ಮತ್ತು ಆರೋಗ್ಯ ಮತ್ತು ಕುಟುಂಬ ಇಲಾಖೆ ಸ್ಪಷ್ಟಪಡಿಸಬೇಕಿದೆ. ಅಸ್ವಸ್ಥಗೊಂಡ ಮಕ್ಕಳಿಗೆ ಶಾಲೆಯಲ್ಲಿ ಮೊದಲು ಫಸ್ಟ್ ಏಡ್ ಮಾಡಿ ನಂತರ ಭದ್ರಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. 

Government primary school children fall ill after meal, admitted to hospital

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close