ನಾವು ಗೋಡ್ಸೆಯನ್ನ ಆರಾಧಿಸಿದರೆ ಕಾಂಗ್ರೆಸ್ ಭಯೋತ್ಪಾದಕತೆಯನ್ನ ಆರಾಧಿಸುತ್ತಿದೆ- ಶಾಸಕ ಚೆನ್ನಿ- If we worship Godse, Congress is worshipping terrorism - MLA Chenni

 SUDDILIVE || SHIVAMOGGA

ನಾವು ಗೋಡ್ಸೆಯನ್ನ ಆರಾಧಿಸಿದರೆ ಕಾಂಗ್ರೆಸ್ ಭಯೋತ್ಪಾದಕತೆಯನ್ನ ಆರಾಧಿಸುತ್ತಿದೆ- ಶಾಸಕ ಚೆನ್ನಿ- If we worship Godse, Congress is worshipping terrorism - MLA Chenni  

Worship, godse

ನರೇಗಾ ಹೆಸರು ತೆಗೆದು ವಿಬಿಜಿ ರಾಮ್ ಜಿ ಹೆಸರಿಗೆ ಬದಲಿಸಿದೆ. ರಾಜ್ಯ ಸರ್ಕಾರ ಗೊಂದಲ ಸೃಷ್ಠಿ ನಿರ್ಮಿಸಲು ಯತ್ನಿಸುತ್ತಿದೆ ಎಂದು ಶಾಸಕ ಚೆನ್ನಬಸಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ವಿಕಾಸಿತ ಭಾರತದ ಅಡಿ ವಿಬಿಜಿ ರಾಮ್ ಜಿ ಹೆಸರನ್ನ ಬದಲಿಸಲಾಗಿದೆ. ನಿರುದ್ಯೋಗಿಗಳಿಗೆ ಕೆಲಸ ಕೊಡುವ ಮೂಲಕ ಸ್ವಾಲಂಭಿ ಭಾರತವಾಗುತ್ತಿದೆ. ನಿರುದ್ದೋಗ ನಿವಾರಣೆ ಇತ್ತು ಆದರೆ ಅದರಿಂದ ಮೌಲ್ಯ ಸೃಷ್ಠಿಸಲಾಗುತ್ತಿದೆ. 2047 ಕ್ಕೆ ಭಾರತ ಹೇಗಿರಬೇಕು ಎಂಬುದರ ಕಲ್ಪನೆ ಅಡಿ ರಾಮ್ ಜಿ ಹೆಸರು ತರಲಾಗಿದೆ ಎಂದರು.

ಗರಾಬಿ ಹಠಾವೋ ಘೋಷಣೆ ಎಷ್ಟುದಿನ ಕಳೆಯಿತು. ಆದರೆ ಗರೀಬಿ ಹಾಗೆ ಇದೆ. ಉದ್ಯೋಗ ಸೃಷ್ಠಿಗೆ ಪುಷ್ಠಿ ನೀಡುವ ಯೋಜನೆಯಾಗಿದೆ. ನರೇಗಾದಿಂದ ಹಣ ಹರಿದು ಬರುತ್ತಿತ್ತು. ಯೋಜನೆಯನ್ನ ಪರಾಮರ್ಷಿಸಿ ಜಾರಿಯಾಗುತ್ತಿದೆ. ಹಾಗಾಗಿ ಕಾಂಗ್ರೆಸ್ ರಾಜಕಾರಣ ಮಾಡಬಾರದು ಎಂದು ಆಗ್ರಹಿಸಿದರು. 

60-40 ರೆಶ್ಯೂ ಚರ್ಚೆಯಾಗುತ್ತಿದೆ. ಚಿದಂಬರ್ ಅವರೆ ಚರ್ಚೆ ಮಾಡಿದ್ದರು. ಇದು ಜಾರಿ ಮಾಡಿದಾಗ 40% ಹಣ ಕೊಡಲು ಕರ್ನಾಟಕ ಸರ್ಕಾರ ಯೋಚನೆ ಮಾಡುವಂತಾಗಿದೆ. ಇದು ಬಿಲ್ ಅಲ್ಲ ಕಾನೂನು ಆಗಿದೆ.  ನಿರ್ದಿಷ್ಠ ಯೋಜನೆಯಾಗಿತ್ತು ನರೆಗಾ ಗ್ರಾಮೀಣಾಭಿವೃದ್ಧಿಯ ಕಲ್ಪನೆ ಹೊತ್ತು ತಂದಿದೆ ವಿಬಿಜಿ ರಾಮ್ ಜಿ ಆಗಿದೆ. ಮೂಲ ಸೌಕರ್ಯಮತ್ತು ಜೀವನ ಸುಧಾರಣೆ ಅಡಗಿದೆ ಎಂದರು‌.

100 ದಿನ ಇದ್ದ ಕೂಲಿ ದಿನ 125 ದಿನಕ್ಕೆ ಹೆಚ್ಚಿಸಲಾಗಿದೆ ರಸ್ತೆ, ಕೆರೆಗೆ ಸೀಮಿತವಾಗಿತ್ತು. ಡಿಜಿಟಲ್ ಗೂ ವಿಸ್ತರಿಸಿದೆ. ರಾಮ ಎಂದಾಕ್ಷಣ ಉರಿದುಕೊಳ್ಳುವ ಕಾಂಗ್ರೆಸ್ ಈ ಬಗ್ಗೆ ವಿಚಾರಿಸಬೇಕಿದೆ. ರಾಮನ ಆದರ್ಶವನ್ನ ಪಾಲಿಸಿದವರು ಗಾಂಧಿಜಿ. ಆ ರಾಮನನ್ನೇ ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ದೂರಿದರು. 

15 ದಿನಗಳ ಒಳಗೆ ಹಣ ಪಾವತಿಯಾಗಲಿದೆ. ಇಷ್ಟುದಿನ  ಹಣ ಬರಲಿಲ್ಲ. ಭ್ರಷ್ಠಾಚಾರದ ಕೂಗು ಕೇಳಿ ಬರುತ್ತಿತ್ತು. ಪಾರದರ್ಶಕತೆಯ ಅಡಿ ತರಲಾಗುತ್ತಿದೆ. ನರೇಗಾ ಹರಟೆ ಹೊಡೆಯುವ ಕಟ್ಟೆಯಾಗಿತ್ತು.  ರಾಮ್ ಜಿ ಯೋಜನೆ ಹಾಗಲ್ಲ. ನರೇಗಾ ಯೋಜನೆಗಿಂತ ಮುಂದೆ ಹೋಗಿದ್ದೇವೆ. ಗ್ರಾಮ ಬದಲಿಸುವ ಯೋಜನೆಯಾಗಿದೆ 125 ರೂ. ಕೂಲಿ ಇತ್ತು. ಹೆಚ್ಚಾಗಲಿದೆ. ಮಹಿಳೆಯರ ಭಾಗವಹಿಸುವಿಕೆ 57% ಪಾಲ್ಗೊಳ್ಳಬೇಕಿದೆ. 2 ಲಕ್ಷ 86 ಕೋಟಿ ಹಣದ ಬಜೆಟ್ ಆಗಿದೆ. ಹರಿಹರಬ್ರಹ್ಮ ಬಂದರು ತಡೆಯಲು ಸಾಧ್ಯವಿಲ್ಲ ಎಂದರು. 

ಗಾಂಧಿ ಹೆಸರು ಎಷ್ಟು ಉಜ್ವಲವಾಗಿದೆಯೋ ರಾಮನ ಹೆಸರಿಗೂ ಅಷ್ಟೇ ಪ್ರಭಾವ ಮತ್ತು ಉಜ್ವಲತೆಯಾಗಿದೆ.‌ ನಾವು ಗೋಡ್ಸೆಯನ್ನ ಆರಾಧಿಸಿದರೆ ಕಾಂಗ್ರೆಸ್ ಭಯೋತ್ಪಾದಕತೆಯನ್ನ ಆರಾಧನೆ ಮಾಡುತ್ತಿದೆ. ಗಾಂಧಿಜಿಗೆ ಪ್ರೀತಿ ಪಾತದರವಾದ ಹೆಸರು ಜೋಡಿಸಲಾಗಿದೆ.  ನರೇಗಾ ಯೋಜನೆಗೆ ಕೊಡಲು  ರಾಜ್ಯದಲ್ಲಿ ಹಣವಿಲ್ಲ. ಅದು ಅವರಿಗೆ ಉರಿ ಬಿದ್ದಿದೆ. ಈಗ ರಾಮನ ಹೆಸರನ್ನ ಇಟ್ಟಿದೆ. ಕೃಷ್ಣನ ಹೆಸರನ್ನೂ ಇಡುತ್ತೇವೆ.  ಸುವರ್ಣ ಚತುಷ್ಪಥ ರಸ್ತೆಗೆ ಅಟಲ್ ಜಿ  ಫೊಟೊ ತೆಗೆದು ಸೋನಿಯಾ ಫೊಟೊ ಹಾಕುವ ಹುನ್ನಾರ ನಡೆದಿತ್ತು. ಇವರು ಬಂದು ನಮಗೆ ಪಾಠ ಮಾಡಲಿಕ್ಕೆ ಬರುತ್ತದಾ ಎಂದು ಆಗ್ರಹಿಸಿದರು.  

ಕ್ರೆಡಿಟ್ ವಾರ್ ಅಸ್ಥಿತ್ವದ ಪ್ರಶ್ನೆಗೆ ನಡೆಯುತ್ತಿದೆ. ಅವರನ್ನ ಪಕ್ಷ ಬಿಟ್ಟು ಹೋಗಲು ನಾವು ಹೇಳಿಲ್ಲ. ಈಶ್ವರಪ್ಪ ಬಗ್ಗೆ ವೈಕ್ತಿಗತ ದ್ವೇಷವಿಲ್ಲ ವೈಚಾರಿಕತೆಯಲ್ಲಿ ಹತ್ತಿರವಿದ್ದೇವೆ. ಕಾಂಗ್ರೆಸ್ ದೂರ ನಡೆದಿದೆ. ದೊಡ್ಡವರು ಸರಿ ಮಾಡುತ್ತಾರೆ ಎಂದರು. 

If we worship Godse, Congress is worshipping terrorism - MLA Chenni

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close