ಕೇರಳ ಸಿಎಂ ಪ್ರತಿಕೃತಿ ದಹಿಸಿ ಪ್ರತಿಭಟನೆ-ಕರ್ನಾಟಕದ ಕೇರಳಿಗರಿಗೆ ಎಚ್ಚರಿಕೆ-Kerala CM's effigy burned in protest - warning to Keralites in Karnataka

SUDDILIVE || SHIVAMOGGA

ಕೇರಳ ಸಿಎಂ ಪ್ರತಿಕೃತಿ ದಹಿಸಿ ಪ್ರತಿಭಟನೆ-ಕರ್ನಾಟಕದ ಕೇರಳಿಗರಿಗೆ ಎಚ್ಚರಿಕೆ-Kerala CM's effigy burned in protest - warning to Keralites in Karnataka    

Kerala, CM


ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳನ್ನ ತಡೆದು ದಾಷ್ಟ್ಯತನ‌ಮೆರೆದಿದ್ದ ಕೇರಳ ಸರ್ಕಾರದ ವಿರುದ್ಧ ಕನ್ನಡಿಗರ ಕಾರ್ಮಿಕ ರಕ್ಷಣ ವೇದಿಕೆಯ ವಾಟಾಳ್ ಮಂಜು ಅವರ ನೇತೃತ್ವದಲ್ಲಿ ಎಸ್ ಎನ್ ಪ್ರತಿಮೆ ಬಳಿ ಪ್ರತಿಕೃತಿ ದಹಿಸಿ ಪ್ರತಿಭಟಿಸಲಾಯಿತು. 

ನಿನ್ನೆ ಕೇರಳದ ಏರಿಮಲೆಯಲ್ಲಿ ಕರ್ನಾಟಕದ ಶಬರಿಮಲೆಧಾರಿಗಳನ್ನ ತಡೆದು ಪಂಪದ ವರೆಗೆ ಕೇರಳದ ಬಸ್ ನಲ್ಲಿ ಸಾಗಲು ಸೂಚಿಸಿರುವುದನ್ನ ವಿರೋಧಿಸಿ ಕನ್ನಡಿಗ ಮಾಲಾಧಾರಿಗಳು ಪ್ರತಿಭಟನೆ ನಡೆಸಿದ್ದವು. ಕನ್ನಡಿಗರ ಸಂಕಷ್ಟಕ್ಕೆ ಧಾವಿಸಿದ ಕನ್ನಡಿಗರ ಕಾರ್ಮಿಕ ರಕ್ಷಣ ವೇದಿಕೆಯ ವಾಟಾಳ್ ಮಂಜು ಕೇರಳದ ಸಿಎಂ ವಿರುದ್ಧ ಮತ್ತು ರಕ್ಷಣೆಗೆ ಧಾವಿಸದ ಕರ್ನಾಟಕದ ಸಿಎಂ ವಿರುದ್ಧವೂ ದಿಕ್ಕಾರ ಕೂಗಲಾಯಿತು. 

ನಂತರ ಕೇರಳ ಸಿಎಂ ಪಿಣರಾಯ್ ವಿಜಯನ್ ಅವರ ಪ್ರತಿಕೃತಿ ದಹಿಸಲಾಯಿತು‌. ನಂತರ ಮಾಧ್ಯಮಗಳಿಗೆ ಮಾತನಾಡಿದ ವಾಟಾಳ್  ಮಂಜು ಕರ್ನಾಟಕದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಮತ್ತು ಕೇರಳದ ಕಾಸರಗೋಡು ಕನ್ನಡಿಗರಿಗೆ ಒತ್ತಡ ಹಾಕಲು ಅಲ್ಲಿನ ಸರ್ಕಾರ ಯತ್ನಿಸುತ್ತಿದೆ. ಇದೇ ರೀತಿ ಪದೇ ಪದೇ ಕೇರಳ ಸರ್ಕಾರ ಮೂಗು ತೂರಿಸಿದರೆ ಕರ್ನಾಟಕದಲ್ಲಿ ನೆಲೆಸಿರುವ ಕೇರಳಿಗರು ಜಾಗ ಖಾಲಿ ಮಾಡಿಸುವ ಎಚ್ಚರಿಕೆಯನ್ನು ನೀಡಿದರು.  

Kerala CM's effigy burned in protest - warning to Keralites in Karnataka


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close