ಅಪಘಾತದಲ್ಲಿ ನಾಲ್ವರು ಸಾವು-ಚಾಲಕ ಸಧ್ಯಕ್ಕೆ ಸೇಫ್- Four killed in accident

 SUDDILIVE || THIRTHAHALLI

ಅಪಘಾತದಲ್ಲಿ ನಾಲ್ವರು ಸಾವು-ಚಾಲಕ ಸಧ್ಯಕ್ಕೆ ಸೇಫ್- Four killed in accident

Four, Killed


ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಭಾರತೀಪುರದಲ್ಲಿ ನಿನ್ನೆ ರಾತ್ರಿ ಕಾರು KSRTC ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 

ಚನ್ನಗಿರಿ ತಾಲೂಕಿಗೆ ಕಾರ್ಯಕ್ರಮ ನಿಮಿತ್ತ ಶೃಂಗೇರಿಯ ಬೆಣಸೆಯಿಂದ ಹೊರಟಿದ್ದ ಶ್ವಿಪ್ಟ್ ಕಾರು ತೀರ್ಥಹಳ್ಳಿಯ ಭಾರತೀಪುರದಲ್ಲಿ KSRTC ಬಸ್ ಗೆ ಡಿಕ್ಕಿ ಹೊಡೆದಿದೆ.‌ ಕಾರಿನಲ್ಲಿದ್ದ ಮಕ್ಕಳು ದೊಡ್ಡವರು ಮತ್ತು ಚಾಲಕನೂ ಸೇರಿ 6 ಜನ ಪ್ರಯಾಣಿಸುತ್ತಿದ್ದರು.

ಈಗ ತಿಳಿದು ಬಂದ ಮಾಹಿತಿಯೇನೆಂದರೆ ನಾಲ್ವರು ಈ ಪ್ರಕರಣದಲ್ಲಿ ಮೃತಪಟ್ಟಿದ್ದು, ಉಳಿದಿಬ್ವರು ಸಾವುಬದುಕಿನ ನಡುವೆ ಹೋರಾಡುತ್ತಿದ್ದಾರೆ. ಚಾಲಕ ರಿಯಾಜ್ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಫಾತೀಮಾ (78) ರಿಹಾನ್ (15) ರಾಯಿಲ್ (9) ಮತ್ತು ಜಿಯಾನ್ (12) ಎಂಬುವರು ಘಟನೆಯಲ್ಲಿ ಜೀವ ಕಳೆದುಕೊಂಡಿದ್ದಾರೆ. 

ಅಪಘಾತ ನಡೆದ ಸ್ಥಳಕ್ಕೆ ಶ್ರೀ ಕಾರ್ಯಪ್ಪ ಎ. ಜಿ. ಹೆಚ್ಚುವರಿ ಪೊಲೀಸ್‌ ಅಧೀಕ್ಷಕರು-1, ಶಿವಮೊಗ್ಗ ಜಿಲ್ಲೆ ರವರು ಭೇಟಿ ನೀಡಿ, ಪರಿಶೀಲಿಸಿ, ತನಿಖಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದಾರೆ. 

Four killed in accident

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close