ಶಾಲೆಯಲ್ಲೇ ಶಿಕ್ಷಕ ಆತ್ಮಹತ್ಯೆ- Teacher commits suicide in school

 SUDDILIVE || SHIKARIPURA

ಶಾಲೆಯಲ್ಲೇ ಶಿಕ್ಷಕ ಆತ್ಮಹತ್ಯೆ- Teacher commits suicide in school   



ಶಿಕಾರಿಪುರ ತಾಲೂಕಿನ ಬಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯಲ್ಲೇ ನೇಣು ಬಿಗಿದುಕೊಂಡು ಶಿಕ್ಷಕರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ಆತ್ಮಹತ್ಯೆಗೆ ಶರಣಾದ ಶಿಕ್ಷಕರನ್ನು ಧನಂಜಯಪ್ಪ (51) ಎಂದು ಗುರುತಿಸಲಾಗಿದೆ. ಧನಂಜಯಪ್ಒನವರು ಹೊನ್ನಾಳಿಯಿಮದ ಬಳೂರಿಗೆ ಓಡಾಡುತ್ತಿದ್ದಾರು. 

ತರಗತಿ ಕೊಠಡಿಯಲ್ಲಿ ಇದ್ದ ಮಕ್ಕಳನ್ನು ಹೊರಗೆ ಕಳುಹಿಸಿದ ಬಳಿಕ ಧನಂಜಯಪ್ಪ ಅವರು ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಕೆಲ ಸಮಯದ ಬಳಿಕ ಸಹ ಶಿಕ್ಷಕರು ವಿಷಯ ಗಮನಿಸಿ, ಅವರನ್ನು ಕೂಡಲೇ ಶಿಕಾರಿಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

Teacher, school

ಇತ್ತೀಚೆಗೆ ಸಹದ್ಯೋಗಿಯ ಕಾಟಕ್ಕೆ ಮುಖ್ಯ ಪೇದೆ ಜಕ್ರೀಯ ಠಾಣೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಕೆಲವೇ ದಿನಗಳ ಅಂತರದಲ್ಲೇ ಶಿಕಾರಿಪುರ ತಾಲೂಕಿನ ಬಳೂರಿನಲ್ಲಿ ಸರ್ಕಾರಿ ಶಿಕ್ಷಕ ಆತ್ಮಹತ್ಯೆ ಆತಂಕ ಮೂಡಿಸಿದೆ. ಸರ್ಕಾರಿ ನೌಕರರೆ ಈ ರೀತಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಹಲವು ಪ್ರಶ್ನೆಗಳನ್ನ ಹುಟ್ಟುಹಾಕಿದೆ. 

Teacher commits suicide in school   


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close