ಬಜೆಟ್ ನಲ್ಲಿ ಸಮಗ್ರ ಶಿವಮೊಗ್ಗದ ಅಭಿವೃದ್ಧಿಗೆ ಹಣ ತೆಗೆದಿಡಲು ಸಂಘಟನೆ ಮನವಿ- Organization requests to allocate funds for comprehensive Shivamogga development in the budget

 SUDDILIVE || SHIVAMOGGA

ಬಜೆಟ್ ನಲ್ಲಿ ಸಮಗ್ರ ಶಿವಮೊಗ್ಗದ ಅಭಿವೃದ್ಧಿಗೆ ಹಣ ತೆಗೆದಿಡಲು ಸಂಘಟನೆ ಮನವಿ- Organization requests to allocate funds for comprehensive Shivamogga development in the budget   

Organization, request

ರಾಜ್ಯ ಸರ್ಕಾರದ 2026 27 ನೇ ಸಾಲಿನಲ್ಲಿ ಮಂಡಳಿಸಲಿರುವ ಬಜೆಟ್ ನಲ್ಲಿ ಶಿವಮೊಗ್ಗ ನಗರದ ತುರ್ತು ಯೋಜನೆಗಳಿಗೆ ಸಾಕಷ್ಟು ಹಣವನ್ನು ಒದಗಿಸಬೇಕೆಂದು ನಾಗರಿಕ ಹಿತರಕ್ಷಣ ವೇದಿಕೆಗಳು ಒಕ್ಕೂಟ ಇಂದು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದೆ.

ಶಿವಮೊಗ್ಗ ನೀರು ಸರಬರಾಜು ಘಟಕವು ಹಳೆಯದಾಗಿದ್ದು ಈ ಘಟಕದ ಸಾಮರ್ಥ್ಯವು ನಗರದ ನೀರಿನ ಅವಶ್ಯಕತೆಗಳನ್ನು ಪೂರೈಸುತ್ತಿಲ್ಲ ಆದ್ದರಿಂದ 50 ವರ್ಷಗಳ ನೀರಿನ ಅವಶ್ಯಕತೆಯನ್ನು ಜನಸಂಖ್ಯೆಗೆ ಅನುಗುಣವಾಗಿ ಪೂರೈಸ ಬೇಕೆಂದು ಒಕ್ಕೂಟ ಆಗ್ರಹಿಸಿದೆ

ನನಗರದ ಯುಜಿಡಿಯ ಕೊಳಕು ನೀರು ತುಂಗಾ ನದಿಗೆ ನೇರವಾಗಿ ಸೇರುತ್ತಿದ್ದು ನದಿಯ ನೀರನ್ನು ಮಾನವ ಬಳಕೆಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದರಿಂದ ಈ ಬಾರಿ ಬಜೆಟ್ ನಲ್ಲಿ ಈ ಯೋಜನೆಗೆ ಅಗತ್ಯ ಹಣವನ್ನು ಒದಗಿಸಬೇಕು ಜನಸಂದನೆ ಮತ್ತು ವಾಹನ ಸಂಬಳ ಹೆಚ್ಚಗುತ್ತಿರುವುದರಿಂದ ಜಲ್ ರಸ್ತೆ ಕುವೆಂಪು ರಸ್ತೆ ವಿಜಯನಗರ ರಸ್ತೆ ಮೊದಲಾದ ಮುಖ್ಯ ರಸ್ತೆಗಳು ಅಗಲೀಕರಣಕ್ಕೆ ಬಜೆಟ್ ನಲ್ಲಿ ಹಣವನ್ನು ಒದಗಿಸಬೇಕೆಂದು ಸಂಘಟನೆ ಆಗ್ರಹಿಸಿದೆ 

ಬೊಮ್ಮನಕಟ್ಟೆಯಲ್ಲಿ ರೈಲ್ವೆ ಅಂಡರ್ ಪಾಸ್ ಮಾರ್ಗವನ್ನು  ಎರಡು ವರ್ಷಗಳ ಹಿಂದೆ ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದರೂ ಇದುವರೆಗೆ ಕಾಮಗಾರಿ ಕೈಗೆತ್ತಿಕೊಂಡಿಲ್ಲ ಮುಂದಿನ ಬಜೆಟ್ ನಲ್ಲಿ ಯೋಜನೆಗೆ ಸಾಕಷ್ಟು ಹಣವನ್ನು ಒದಗಿಸಬೇಕು ಸಂಚಾರ ಒದಗಿಸಲು ಮುಖ್ಯಮಂತ್ರಿಯನ್ನು ಒದಗಿಸಬೇಕೆಂದ ಸಂಘಟನೆ ಆಗ್ರಹಿಸಿದೆ. ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಸಂತ್ ಕುಮಾರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. 

Organization requests to allocate funds for comprehensive Shivamogga development in the budget

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close