ಜಾತ್ರೆಗೆ ಯಶವಂತಪುರ – ತಾಳಗುಪ್ಪ ನಡುವೆ ವಿಶೇಷ ರೈಲುಗಳು-Special trains between Yeshwantpur and Talaguppa for the fair

SUDDILIVE || SHIVAMOGGA

ಜಾತ್ರೆಗೆ ಯಶವಂತಪುರ – ತಾಳಗುಪ್ಪ ನಡುವೆ ವಿಶೇಷ ರೈಲುಗಳು-Special trains between Yeshwantpur and Talaguppa for the fair    

Special, train


ಸಾಗರ ತಾಲ್ಲೂಕಿನಲ್ಲಿ ನಡೆಯಲಿರುವ ಮಾರಿಕಾಂಬಾದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ಸಂಚಾರವನ್ನು ನಿಭಾಯಿಸುವ ಉದ್ದೇಶದಿಂದ, ನೈರುತ್ಯ ರೈಲ್ವೆ ಯಶವಂತಪುರ ಮತ್ತು ತಾಳಗುಪ್ಪ ನಡುವಿನಲ್ಲಿ ವಿಶೇಷ ಎಕ್ಸಪ್ರೆಸ್ ರೈಲುಗಳನ್ನು ಓಡಿಸಲಿದೆ.

ರೈಲು ಸಂಖ್ಯೆ 06585 / 06586 – ಯಶವಂತಪುರ – ತಾಳಗುಪ್ಪ – ಯಶವಂತಪುರ ವಿಶೇಷ ಎಕ್ಸಪ್ರೆಸ್ (04 ಟ್ರಿಪ್ ಗಳು)ರೈಲು ಸಂಖ್ಯೆ 06585 – ಯಶವಂತಪುರ - ತಾಳಗುಪ್ಪ ವಿಶೇಷ ಎಕ್ಸಪ್ರೆಸ್ ಈ ರೈಲು 03.02.2026, 05.02.2026, 08.02.2026 ಮತ್ತು 10.02.2026 (ಮಂಗಳವಾರ, ಗುರುವಾರ, ಭಾನುವಾರ ಮತ್ತು ಮಂಗಳವಾರ) ದಿನಗಳಲ್ಲಿ ಸಂಚರಿಸಲಿದೆ. ಈ ರೈಲು ಯಶವಂತಪುರದಿಂದ ರಾತ್ರಿ 22:45ಕ್ಕೆ ಹೊರಟು, ಮರುದಿನ ಬೆಳಿಗ್ಗೆ 05:05ಕ್ಕೆ ತಾಳಗುಪ್ಪಕ್ಕೆ ತಲುಪಲಿದೆ.

ರೈಲು ಸಂಖ್ಯೆ 06586  ತಾಳಗುಪ್ಪ - ಯಶವಂತಪುರ ವಿಶೇಷ ಎಕ್ಸಪ್ರೆಸ್ ರೈಲು 04.02.2026, 06.02.2026, 09.02.2026 ಮತ್ತು 11.02.2026 (ಬುಧವಾರ, ಶುಕ್ರವಾರ, ಸೋಮವಾರ ಮತ್ತು ಬುಧವಾರ) ದಿನಗಳಲ್ಲಿ ಸಂಚರಿಸಲಿದೆ. ಈ ರೈಲು ತಾಳಗುಪ್ಪದಿಂದ ಬೆಳಿಗ್ಗೆ 09:30ಕ್ಕೆ ಹೊರಟು, ಸಂಜೆ 17:15ಕ್ಕೆ ಯಶವಂತಪುರಕ್ಕೆ ತಲುಪಲಿದೆ.

ಕೋಚ್ ಸಂಯೋಜನೆ: 07 ಸ್ಲೀಪರ್ ಕ್ಲಾಸ್ ಕೋಚ್ ಗಳು, 06 ಸಾಮಾನ್ಯ ದ್ವಿತೀಯ ದರ್ಜೆ ಕೋಚ್ ಗಳು ಮತ್ತು 02 ಎಸ್ಎಲ್ಆರ್/ಡಿ ಕೋಚ್ ಗಳು.ರೈಲು ಸಂಖ್ಯೆ 06587 / 06588 ಯಶವಂತಪುರ – ತಾಳಗುಪ್ಪ – ಯಶವಂತಪುರ ವಿಶೇಷ ಎಕ್ಸಪ್ರೆಸ್ (01 ಟ್ರಿಪ್)

ರೈಲು ಸಂಖ್ಯೆ 06587 ಯಶವಂತಪುರ - ತಾಳಗುಪ್ಪ ವಿಶೇಷ ಎಕ್ಸಪ್ರೆಸ್ ಈ ರೈಲು 06.02.2026 (ಶುಕ್ರವಾರ) ರಂದು ಸಂಚರಿಸಲಿದೆ. ಈ ರೈಲು ಯಶವಂತಪುರದಿಂದ ರಾತ್ರಿ 22:45ಕ್ಕೆ ಹೊರಟು, ಮರುದಿನ ಬೆಳಿಗ್ಗೆ 05:05ಕ್ಕೆ ತಾಳಗುಪ್ಪಕ್ಕೆ ತಲುಪಲಿದೆ.


ರೈಲು ಸಂಖ್ಯೆ 06588  ತಾಳಗುಪ್ಪ - ಯಶವಂತಪುರ ವಿಶೇಷ ಎಕ್ಸಪ್ರೆಸ್ ರೈಲು 07.02.2026 (ಶನಿವಾರ) ರಂದು ಸಂಚರಿಸಲಿದೆ. ಈ ರೈಲು ತಾಳಗುಪ್ಪದಿಂದ ಬೆಳಿಗ್ಗೆ 09:30ಕ್ಕೆ ಹೊರಟು, ಸಂಜೆ 17:15ಕ್ಕೆ ಯಶವಂತಪುರಕ್ಕೆ ತಲುಪಲಿದೆ. ಕೋಚ್ ಸಂಯೋಜನೆ: 01 ಎಸಿ ಟು ಟಯರ್ ಕೋಚ್, 02 ಎಸಿ ತ್ರಿ ಟಯರ್ ಕೋಚ್ ಗಳು, 10 ಸ್ಲೀಪರ್ ಕ್ಲಾಸ್ ಕೋಚ್ ಗಳು,05 ಸಾಮಾನ್ಯ ದ್ವಿತೀಯ ದರ್ಜೆ ಕೋಚ್ ಗಳು ಮತ್ತು 02 ಎಸ್ಎಲ್ಆರ್/ಡಿ ಕೋಚ್ ಗಳನ್ನ ಈ ರೈಲು ಹೊಂದಿದೆ. 

ಈ ರೈಲುಗಳು ಎರಡೂ ಮಾರ್ಗವಾಗಿ ಸಂಚರಿಸಲಿದೆ. ಅಂದರೆ  ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಕೊನಗವಳ್ಳಿ ಹಾಲ್ಟ್, ಹಾರನಹಳ್ಳಿ, ಕುಂಸಿ, ಅರಸಾಳು, ಕೆಂಚನಾಲ ಹಾಲ್ಟ್, ಆನಂದಪುರಂ, ಅಡ್ಡೇರಿ ಮತ್ತು ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿವೆ. ಎಂದು ರೈಲ್ವೆ ಇಲಾಖೆ ತಿಳಿಸಿದೆ. 

Special trains between Yeshwantpur and Talaguppa for the fair


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close