ವಿಎ ಲೋಕಯುಕ್ತ ಬಲೆಗೆ-VA Lokayukta Trap

 SUDDILIVE || SHIVAMOGGA

ವಿಎ ಲೋಕಯುಕ್ತ ಬಲೆಗೆ-VA Lokayukta Trap

VA, trap


ಶಿಕಾರಿಪುರದಲ್ಲಿ ವಿಠ್ಠಲ ಕೋಲ್ಹರ ಎಂಬ ವಿಲೇಜ್ ಅಕೌಂಟೆಂಟ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಖಾತಾ ಮಾಡಿಕೊಡಲು 1 ಲಕ್ಷ ರೂ. ಹಣ ಸ್ವೀಕರಿಸುವಾಗ ಲೋಕಯುಕ್ತರ ಬಲೆಗೆ ಬಿದ್ದಿದ್ದಾರೆ.

ಶಿಕಾರಿಪುರ ತಾಲೂಕಿನ ಚಿಕ್ಕಬಂಜೂರಿನಲ್ಲಿರುವ ಜಮೀನಿನ ಖಾತೆ ಮಾಡಿಸಲು ಶಿಕಾರಿಪುರದ ತಾಲೂಕು ಕಚೇರಿಯ ಕಂದಾಯ ಇಲಾಖೆಗೆ ಜಮೀನಿನ ಮಾಲೀಕರಾದ ಜಕ್ರಿಯಾ ಬೇಗ್ ಎಂಬುವರು ವಿಠ್ಠಲ ಕೋಲ್ಹರ ಎಂಬ ವಿಎ ನ್ನ ಭೇಟಿಯಾಗಿದ್ದರು. ವಿಎ ಖಾತೆ ಬದಲಾವಣೆಗೆ 4 ಲಕ್ಷ ರೂ. ಬೇಡಿಕೆ ಇಟ್ಟಿದ್ದ. ಜಕ್ರಿಯಾ ಬೇಗ್ ಅವರಿಗೆ 4 ಲಕ್ಷ ಕೊಡಲು ಮನಸ್ಸಿಲ್ಲದ ಕಾರಣ ಲೋಕಾಯುಕ್ತರನ್ನ ಭೇಟಿ ನೀಡಿದ್ದರು. 

ಇಂದು ವಿಎ ಕೊಲ್ಹರ 1 ಲಕ್ಷ ರೂ. ಹಣ ಸ್ವೀಕರಿಸುವಾಗ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ. 

VA Lokayukta Trap

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close