ಮರಗಳ ಹತ್ಯೆಗೆ ಮೊದಲು ನನಗೆ ದಯಾಮರಣ ನೀಡಿ-ವಿಶುಕುಮಾರ್- Give me euthanasia before killing trees - Vishukumar

SUDDILIVE || SHIVAMOGGA

ಮರಗಳ ಹತ್ಯೆಗೆ ಮೊದಲು ನನಗೆ ದಯಾಮರಣ ನೀಡಿ-ವಿಶುಕುಮಾರ್- Give me euthanasia before killing trees - Vishukumar   

Euthanasia, trees



ಶಿವಮೊಗ್ಗ: ಶ್ರೀಗಂಧ ಮರಗಳನ್ನು ಕಡಿತಲೆ ಮಾಡುವುದಕ್ಕಿಂತ ಮೊದಲು ನನಗೆ ದಯಾಮರಣ ದಯಪಾಲಿಸಿ” ಎಂದು ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೆ ಭೂಸ್ವಾಧೀನ ಪ್ರಾಧಿಕಾರದ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದಾರೆ.

ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೆ ಫೆ.2ಕ್ಕೆ ಶ್ರೀಗಂಧ ಮರಗಳನ್ನು ಕಡಿತಲೆ ಮಾಡಲಾಗುವುದು ಎಂದು ಜ.27ಕ್ಕೆ ನೋಟಿಸ್ ನೀಡುತ್ತಾರೆ. ಆದರೆ ಈ ವಿಷಯ ಈಗಾಗಲೇ ನ್ಯಾಯಾಲಯದ ವಿಚಾರಣೆಯಲ್ಲಿರುವ ಸಂದರ್ಭದಲ್ಲಿ ಅಧಿಕಾರಿಗಳು ಮರ ಕಡಿತಲೆ ಮುಂದಾಗಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ತಾವು ಸುಮಾರು 30 ವರ್ಷಗಳಿಂದ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಶ್ರೀಗಂಧ ಬೆಳೆ ಬೆಳೆಸಿಕೊಂಡು ಬಂದಿರುವುದಾಗಿ ತಿಳಿಸಿದರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಜಾಹೀರಾತು ನೀಡಿ ಶ್ರೀಗಂಧ ಬೆಳೆಸಲು ರೈತರನ್ನು ಪ್ರೋತ್ಸಾಹಿಸಿತ್ತು. ಸರ್ಕಾರದ ಪ್ರೇರಣೆಯ ಮೇರೆಗೆ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಶ್ರೀಗಂಧ ಮರಗಳನ್ನು ಬೆಳೆಸಿದ್ದೇವೆ. ಆದರೆ ಈಗ ಅದಕ್ಕೆ ತಕ್ಕಂತೆ ಬೆಲೆ ನೀಡಿದೆ ಕಡಿತಲೆ ಮಾಡುವುದಕ್ಕೆ ಮುಂದಾಗಿರುವುದು ಅನ್ಯಾಯ ಎಂದು ಆರೋಪಿಸಿದರು.

ಅಧಿಕಾರಿಗಳ ಲಂಚಗುಳಿತನ ಹಾಗೂ ದೌರ್ಜನ್ಯದಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಈಗಾಗಲೇ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೇನೆ ಎಂದರು. “ಆದರೆ ಈಗ ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಬರುತ್ತಿಲ್ಲ. ಆದ್ದರಿಂದ ಸರ್ಕಾರವೇ ಹೇಳಿದಂತೆ ಶ್ರೀಗಂಧ ಮರಗಳಿಗೆ ವೈಜ್ಞಾನಿಕವಾಗಿ ಯೋಗ್ಯ ಬೆಲೆ ನಿಗದಿ ಮಾಡಿ ಪರಿಹಾರ ನೀಡಿ. ಇಲ್ಲವಾದಲ್ಲಿ ನನ್ನ ಮರಗಳನ್ನು ಉಚಿತವಾಗಿ ತೆಗೆದುಕೊಳ್ಳಿ. ಆದರೆ ಅದಕ್ಕಿಂತ ಮೊದಲು ನನಗೆ ದಯಾಮರಣ ನೀಡಿ” ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೆಲವು ಅಧಿಕಾರಿಗಳು ಶ್ರೀಗಂಧಕ್ಕೆ ಹಾಗೂ ಭೂತಾಯಿಗೆ ಅಪಮೌಲ್ಯ ಮಾಡುತ್ತಿರುವುದನ್ನು ನಾನು ಸಹಿಸಲು ಸಾಧ್ಯವಿಲ್ಲ ಎಂದು ಅವರು ಕಿಡಿಕಾರಿದರು. ಶ್ರೀಗಂಧವು ರಾಷ್ಟ್ರದ ಅಮೂಲ್ಯ ಸಂಪತ್ತು. ಅದನ್ನು ಬೆಳೆಸಿದ ರೈತನಿಗೆ ಗೌರವ ನೀಡದೆ ದೌರ್ಜನ್ಯ ನಡೆಸುತ್ತಿರುವುದು ನೋವಿನ ಸಂಗತಿ ಎಂದು ಹೇಳಿದರು.

ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಸ್ಥಳೀಯರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.
Give me euthanasia before killing trees - Vishukumar   

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close