VISL ಕಾರ್ಖಾನೆಗೆ ಮೊದಲ ಹಂತವಾಗಿ 5000 ಕೋಟಿ ರೂನಲ್ಲಿ ಪುನಶ್ಚೇತನ-ಮಠದಿಂದ 5 ಕೋಟಿ ದೇಣಿಗೆ-ಕುಮಾರ ಸ್ವಾಮಿ-VISL factory to be revived in first phase at Rs 5000 crore - 5 crore donation from Math - Kumaraswamy

 SUDDILIVE || BHADRAVATHI

VISL ಕಾರ್ಖಾನೆಗೆ ಮೊದಲ ಹಂತವಾಗಿ 5000 ಕೋಟಿ ರೂನಲ್ಲಿ ಪುನಶ್ಚೇತನ-ಮಠದಿಂದ 5 ಕೋಟಿ ದೇಣಿಗೆ-ಕುಮಾರ ಸ್ವಾಮಿ-VISL factory to be revived in first phase at Rs 5000 crore - 5 crore donation from Math - Kumaraswamy    

VISL, factory


ಭದ್ರಾವತಿಯಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆದಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಕುಮಾರ ಸ್ವಾಮಿ ಭಾಗಿಯಾಗಿ ಮಾತನಾಡಿದರು. 

ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆ ಅಭಿವೃದ್ಧಿಗೆ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಸ್ವಾಮೀಜಿ  ಸೂಚನೆ ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಟಾಟಾ, ಪ.ಬಂಗಾಳ ಮತ್ತು ಭದ್ರಾವತಿ ಉಕ್ಕಿನ ಕಾರ್ಖಾನೆಗಳಲ್ಲಿ ಸ್ಟೀಲ್ ಪ್ಲಾಂಟ್ ಗಳನ್ನ ತಯಾರಿಸಲಾಗುತ್ತಿತ್ತು. 

ಈ ಕಾರ್ಖಾನೆಯನ್ನ ಪುನಶ್ಚೇತನ ಮಾಡುವ ಸ್ಥಿತಿ ತಲುಪಿವೆ. ತಮ್ಮ ಮಠದ ಭಕ್ತಿರಿಂದ ಪುನಶ್ಚೇತನಕ್ಕೆ 5 ಕೋಟಿ ಕೊಡುವುದಾಗಿ ಸ್ವಾಮೀಜಿ ಹೇಳುತ್ತಿದ್ದಾರೆ.  ವಿಶ್ವಕ್ಕೆ ಸರಿಸಾಟಿಯಾಗಿ‌ ಮುನ್ನುಗ್ಗುತ್ತಿದ್ದೇವೆ. ನನ್ನ ಬೃಹತ್ ಇಲಾಖೆಯಲ್ಲಿ 40 ಯುನಿಟ್ ಇವೆ. ಬಹುತೇಕ‌ ಮುಚ್ಚಲಾಗಿದೆ. ViSL  ಕಾರ್ಖಾನೆಯನ್ನ 2016-17 ರಲ್ಲಿ ಖಾಸಗಿಯವರಿಗೆ ನೀಡಲು ನಿರ್ಧರಿಸಲಾಗಿತ್ತು. 

ಎಂಪಿಯವರು ಈ ಕಾರ್ಖಾನೆ ಬಗ್ಗೆ ಚರ್ಚಿಸಲಿದ್ದಾರೆ. ಬರುವ ಬಜೆಟ್ ಮಂಡನೆಯಲ್ಲಿ visl ಕಾರ್ಖಾನೆಗೆ ಹಣ ಕೊಡಲು ಕಷ್ಟವಿದೆ. ಸೇಲ್ ನಲ್ಲಿ ಚರ್ಚಿಸಿದ್ದೇನೆ. ಹಂತ ಹಂತವಾಗಿ ಹಣ ಬಿಡುಗಡೆ ಮಾಡಿ ಕಾರ್ಖಾನೆ ಅಭಿವೃದ್ಧಿ ಮಾಡಲಾಗುವುದು.  ಮೊದಲನೆ ಹಂತದಲ್ಲಿ 5 ಸಾವಿರ ಕೋಟಿ ರೂ. ಹಣ ನೀಡಲು ನಿರ್ಧರಿಸಲಾಗಿದೆ. ಆರ್ಥಿಕ ಸಚಿವರಿಂದ ಒಪ್ಪಿಗೆ ಮತ್ತು ಸಹಿಬೇಕಿದೆ. ದೇಶದಲ್ಲಿ  ಕಬ್ಬಿಣವನ್ನ  ತಯಾರಿಸೊಲ್ಲ. ಎಲ್ಲವೂ ಆಮದು ಆಗುತ್ತಿದೆ.  ಪ್ರಧಾನಿಗೆ ಮನವಿ ಮಾಡಲಾಗಿದೆ ಭದ್ರಾವತಿಯಲ್ಲಿ ಈ ವಿಶೇಷ ಕಬ್ಬಿಣವನ್ನ ತಯಾರಿಸುವ ಬಗ್ಗೆ ಮನವರಿಕೆ ಮಾಡಲಾಹಿದೆ. ಪ್ರಧಾನಿಯವರು ಒಪ್ಪಿದ್ದಾರೆ ಎಂದರು. 

ವೈಸಾಗ್ ಕಾರ್ಖಾನೆಯನ್ನ 35 ಸಾವಿರ ಕೋಟಿ ರೂ. ಸಾಲದ ಹೊರೆಯಿತ್ತು. ಕಳೆದ ಏಳೆಂಟು ತಿಂಗಳಿಂದ ಪುನಶಚೇತನಗೊಳಿಸಿ  ಆರಂಭಿಸಲಾಗಿದೆ. ಇಂದು  21 ಸಾವಿರ ಮೆಟ್ರಿಕ್ ಟನ್ ಕಬ್ಬಿಣ ಉತ್ಪಾದಿಸಲಾಗುತ್ತಿದೆ. ಹಾಗೆ ಭದ್ರಾವತಿ ಕಾರ್ಖಾನೆಯು ಆರಂಭಿಸಿ ಸ್ಟೀಲನ್ನ ಉತ್ಪಾದಿಸಲಾಗುವುದು ಎಂದರು. 

ಧಾರ್ಮಿಕ ಕಾರ್ಯಕ್ರಮದಲ್ಲಿ ಗ್ಯಾರೆಂಟಿ ಬಗ್ಗೆ ಮಾತನಾಡ ಬಾರದು. ಅದರ ಅವಶ್ಯಕತೆಯೂ ಇಲ್ಲ. ರೈತರು ಬೆಳೆದ ಮೆಕ್ಕೆ ಜೋಳ ನಿರೀಕ್ಷೆ ಮಟ್ಟದಲ್ಲಿ ಈ ವರ್ಷ ಬೆಳೆಯಲಾಗಿದೆ. ಇದನ್ನ ಮಾರಾಟ ಮಾಡಲು ರೈತರು ತಿಂಗಳು ಗಟ್ಟಲೆ ಧರಣಿ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯಸರ್ಕಾರ ಜವಬ್ದಾರಿ ತೋರುತ್ತಿಲ್ಲ. ಕೇಂದ್ರ ಸರ್ಕಾರದ ಕಡೆ ಬೆರಳು ಮಾಡುತ್ತಿದೆ. ರಾಜ್ಯ ಸರ್ಕಾರ ಬೆಲೆ ಸಿಗದಿದ್ದಾಗ ಮದ್ಯಪ್ರವೇಶಿಸಿ ಖರೀದಿ ಕೇಂದ್ರ ತೆರೆದು ನಂತರ ಕೇಂದ್ರಕ್ಕೆ ಎಂಎಸ್ಪಿದರ ನಿಗದಿ ಪಡಿಸಲು ಪತ್ರ ಬರೆಯಬೇಕು. ಅದನ್ನ ಮಾಡದ ರಾಜ್ಯ ಸರ್ಕಾರ ಜವಬ್ದಾರೊಯಿಂದ ನುಣಚಿಕೊಳ್ಳುತ್ತಿದೆ ಎಂದು ದೂರಿದರು. 

ಆರ್ಥಿಕವಾಗಿ ಜಿಡಿಪಿಯಲ್ಲಿ ದೇಶ ಮೂರನೇ ಸ್ಥಾನಕ್ಕೆ ಏರುತ್ತಿದ್ದೇವೆ. ಬೆಳಿಗ್ಗೆ ಎದ್ದರೆ ಒಳ್ಳೆಯ ಸುದ್ದಿಕೇಳುತ್ತಿಲ್ಲ. ಸಂಬಂಧಗಳು ನಶಿಸುತ್ತಿದೆ. ಹಳ್ಳಿ ವಾತಾವರಣ ಕುಸಿಯುತ್ತಿದೆ. ಹಳ್ಳಿಗಳಲ್ಲಿ ಮೂಲಬೂತ ಸೌಕರ್ಯಗಳಿಲ್ಲದಿದ್ದ ಕಾಲದಲ್ಲಿ ನೆಮ್ಮದಿಯಿತ್ತು‌ ಇಂದು ಎಲ್ಲಾ ಸೌಕರ್ಯಗಳು ಇವೆ. ಆದರೆ ನೆಮ್ಮದಿಯಿಲ್ಲ. ಕೆಟ್ಟ ಸುದ್ದಿಗಳಿಂದ ಮನಸ್ಥಿತಿ ಹದಗೆಡುತ್ತಿದೆ. ಇದು ಸರಿಯಾಗಬೇಕಿದೆ. ಮಠಮಾನ್ಯಗಳಿಂದ ಸಮಾಜವನ್ನ ಕಟ್ಟುವ ಕೆಲಸ ಆಗಬೇಕು ಎಂದು ಕರೆ ನೀಡಿದರು. 

VISL factory to be revived in first phase at Rs 5000 crore - 5 crore donation from Math - Kumaraswamy

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close