ಜಕ್ರೀಯ ಆತ್ಮಹತ್ಯೆ ಪ್ರಕರಣ-ಅಸ್ವಾಭಾವಿಕ ಸಾವೆಂದು ದೂರು ದಾಖಲು-Zakriya suicide case - complaint filed for unnatural death

 SUDDILIVE || SHIVAMOGGA

ಜಕ್ರೀಯ ಆತ್ಮಹತ್ಯೆ ಪ್ರಕರಣ-ಅಸ್ವಾಭಾವಿಕ ಸಾವೆಂದು ದೂರು ದಾಖಲು-Zakriya suicide case - complaint filed for unnatural death   

Zakriya, UDR


ಶಿವಮೊಗ್ಗದ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೊಹಮದ್ ಜಕ್ರಿಯ ಅವರ ಆತ್ಮಹತ್ಯೆ ಪ್ರಕರಣ ಅಸ್ವಭಾವಿಕ ಸಾವು ಎಂದು ಮೃತರ ಪುತ್ರ ನೀಡಿರುವ ದೂರಿನ ಆಧಾರದ ಮೇರೆಗೆ ದೂರು ದಾಖಲಾಗಿದೆ.‌

ಹಗ್ಗವನ್ನ ತಂದಿಟ್ಟುಕೊಂಡು ಠಾಣೆಯ ಹಿಂಭಾಗದ ಮರಕ್ಕೆ ನೇಣು ಬಿಗಿದುಕೊಂಡ ಜಕ್ರಿಯಾ ಒಂದು ಡೆತ್ ನೋಟ್ ಮತ್ತು ವಾಟ್ಸಪ್ ಮೆಸೆಜ್ ಮಾಡಿದ್ದರು. ವಾಟ್ಸಪ್ ಮೆಸೆಜ್ ನಲ್ಲಿ ಜಕ್ರಿಯಾ ಠಾಣೆಯಲ್ಲಿದ್ದ ಮತ್ತೋರ್ವ ಹೆಡ್ ಕಾನ್ ಸ್ಟೇಬಲ್ ನಾಸಿರ್ ಅಹಮದ್  ಮಾನಸಿಕ ಕಿರುಕುಳ ನೀಡುತ್ತಿದ್ದಾನೆ. 26 ವರ್ಷದಿಂದ ಕೆಲಸ ಮಾಡಿಕೊಂಡಿದ್ದೇನೆ. 

ಪಿಎಂ ಬಂದೋಬಸ್ತ್ ಗೆ ಹೋದಾಗಲೂ ನಾಸಿರ್ ತುಂಬ ಅವಮಾನಿಸಿದ್ದು, ನನಗೆ ಡ್ಯೂಟಿ ಹಾಕಿದಾಗ ನಾಸಿರ್ ತನ್ನ ಡ್ಯೂಟಿ ಹಂಚಿದ ಮಹಿಳ ಸಿಬ್ಬಂದಿಗಳನ್ನ ನನಿಗೆ ಡ್ಯೂಟಿ ಹಂಚಿದ ಬಗ್ಗೆ ಆತನಿಗೆ ಯಾಕೆ ಅಲ್ಲಿ ಹಾಕಿದ್ದೀರಿ ಅಂತ ಕೇಳುತ್ತಿದ್ದ.  ದಪ್ಪ ಇರುವ ಬಗ್ಗೆ ಸಾರ್ವಜನಿಕವಾಗಿ ಹೇಳುತ್ತಿರುವುದುದಾಗಿ ವಾಟ್ಸಪ್ ಮೆಸೇಜ್ ನಲ್ಲಿ ಹೇಳಿದರೆ, ಕೈಯಲ್ಲಿ ಬರೆದ ಡೆತ್ ನೋಟ್ ನಲ್ಲಿ ನನ್ನ ಸಾವು ನನ್ನ ಪತ್ನಿಗೆ ಹುಷಾರಿಲ್ಲ. ನನ್ನ ಸಾವಿನ ಸುದ್ದಿಯನ್ನ ಆಕೆಗೆ ನಿಧಾನವಾಗಿ ತಿಳಿಸಿ ಮೊದಲು ನನ್ನ ಸಂಬಂಧಿಕರಿಗೆ ತಿಳಿಸಿ ಎಂದು ಬರೆದಿದ್ದಾರೆ. ಈ  ಹಿನ್ನಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ. 

Zakriya suicide case - complaint filed for unnatural death

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close