heartfelt words of the outgoing DC || ಶಿವಮೊಗ್ಗಕ್ಕೆ ಬಂದಿರಲಿಲ್ಲ ಎಂದರೆ ಕಲಿಕೆ ಮಿಸ್ ಆಗುತ್ತಿತ್ತು-ನಿರ್ಗಮಿತ ಡಿಸಿಯ ಮನದಾಳದ ಮಾತು

 SUDDILIVE || SHIVAMOGGA

ಶಿವಮೊಗ್ಗಕ್ಕೆ ಬಂದಿರಲಿಲ್ಲ ಎಂದರೆ ಕಲಿಕೆ ಮಿಸ್ ಆಗುತ್ತಿತ್ತು-ನಿರ್ಗಮಿತ ಡಿಸಿಯ ಮನದಾಳದ ಮಾತು-If I hadn't come to Shivamogga, I would have missed out on learning - heartfelt words of the outgoing DC

Heartfelt, dc


2 ವರ್ಷ ಸೇವೆ. ಪ್ರೇರಣೆ ನೀಡಿದ ಜಾಗ ಶಿವಮೊಗ್ಗ, ಕವಿಮನೆ, ಸಾಗರ ಸ್ವಂತ ಇಷ್ಟಪಟ್ಟು ಬಂದ ಜಾಗವಿದು. ಮಲೆನಾಡ ಜಾಗ ವಿಶೇಷ ವಾದ ಜಾಗವಾಗಿದೆ. ಜನಪ್ರತಿನಿಧಿಗಳ ಸಹಕಾರವಿದೆ. ಸವಾಲಿನ ಜಾಗವಿರುವುದರಿಂದ ಶಿವಮೊಗ್ಗದಲ್ಲಿ ಸಾಕಷ್ಟು ಕಲಿತಿದ್ದೇನೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. 

ಪತ್ರಿಕಾಭವನದಲ್ಲಿ ಏರ್ಪಡಿಸಲಾಗಿದ್ದ ಚಹಕೂಟದಲ್ಲಿ ಭಾಗಿಯಾದ ಅವರು ಅರಣ್ಯ ಮತ್ತು ಕಂದಾಯ ಇಲಾಖೆಯ ಗ್ರ್ಯಾಂಟ್ಸ್ ರಿಲೇಟೆಡ್ ಸಮಸ್ಯೆಯಿದೆ. ಭೂಸ್ವಾಧೀನ ಮಾಡಲು ಸಾಕಷ್ಟು ಸವಾಲು ಶಿವಮೊಗ್ಗದಲ್ಲಿದೆ.  ಪ್ರವಾಸಾದ್ಯೋಮ, ರೈಲ್ವೆಗೆ ಭೂಸ್ವಾಧೀನ ಆಗುತ್ತಿದೆ. ಬಿಹೆಚ್ ರಸ್ತೆ ನಿರ್ಮಾಣಕ್ಕೆ  30 ಜಾಗ ಸಮಸ್ಯೆಯಿತ್ತು ಈಗ ಒಂದು ಉಳಿದಿದಿದೆ. ಸಮಸ್ಯೆ ಬಗೆಹರಿಸಿದ ಸಮಾಧಾನವಿದೆ ಎಂದರು. 

ಶರಾವತಿ ಸಂತ್ರಸ್ತರಿಗೆ ಭೂಮಿಯನ್ನ ಮುಂದಿನ ಡಿಸಿ ಬಗೆಹರಿಸುತ್ತಾರೆ ಎಂಬ ಭರವಸೆಯಿದೆ. 40 ಕ್ಕೂ ಹೆಚ್ಚು ಟೂರಿಸಂ ಪ್ಲೇಸ್ ಗಳಲ್ಲಿ ಜಿಲ್ಲಾಡಳಿತದ ಫ್ಲೆಕ್ಸ್ ಹಾಕುತ್ತಿದ್ದೇವೆ. ಎಕೋ ಟೂರಿಸಂ ಮಾಡಲಾಗುತ್ತಿದೆ. ಲಾ ಅಂಡ್ ಅರ್ಡರ್ ನಲ್ಲಿ ಡಿಸಿಗೆ ಅವಕಾಶವಿರಲಿಲ್ಲ. ಈ ಅವಕಾಶ ಶಿವಮೊಗ್ಗ ಜಿಲ್ಲೆಯಲ್ಲಿ ಸಿಕ್ಕಿದೆ. 

ಈ ಜಿಲ್ಲೆಗೆ ಬರಲಿಲ್ಲ ಎಂದಿದ್ದರೆ ಕಲಿಯಲು ಆಗುತ್ತಿರಲಿಲ್ಲ ಎಂಬ ಮನದಾಳದ ಮಾತನ್ನ ಅವರು ತಿಳಿಸಿದರು. ಕಾವಲು ಸಮಿತಿ, ಬಾಲ್ಯ ವಿವಾಹ ಮತ್ತು ಅಪ್ರಪ್ತವಯಸ್ಸಿನಲ್ಲಿ ಗರ್ಭಧಾರಣೆ ತಡೆಗಟ್ಟಲು ಸಹಕಾರವಾಗಿದೆ. ಜನ ನಮ್ಮೊಂದಿಗೆ ಸಹಕರಿಸಿದ್ದಾರೆ. ಮಾಧ್ಯಮಗಳು ನಮಗೆ ಸಹಕರಿಸಿದ್ದಾರೆ. ಕನ್ಸಟ್ರಕ್ಟಿವ್ ಪತ್ರಿಕೋದ್ಯಮ ಶಿವಮೊಗ್ಗದಲ್ಲಿದೆ. ಕಡಿಮೆ ಸಮಯದಲ್ಲಿ ವರ್ಗಾವಣೆ ಆಗಿದ್ದು ಒಳ್ಳೆಯದೆ. ಮೂರು ವರ್ಷ ಇರಬಾರದು ನಾವು ಜಡಗಟ್ಟಿಬಿಡುತ್ತೇವೆ ಎಂಬ ಮಾತನ್ನ ಹೇಳಲು ಅವರು ಮರೆಯಲಿಲ್ಲ. 

ಬೇಜಾರಾಗಿದ್ದು ಯಾವುದೂ ಇಲ್ಲ. ಪರ್ಸನಲ್ ನಾನು ಯಾವ ವಿಷಯವನ್ನ ತೆಗೆದುಕೊಳ್ಳಲ್ಲ. ಬೆಂಬಲ ಸಿಕ್ಕಿದೆ. ಧಾರವಾಡ ಮತ್ತು ಶಿವಮೊಗ್ಗದಲ್ಲಿ ಪಾಠ ಕಲಿತ್ತಿದ್ದೇವೆ. ಜಿಲ್ಲೆಯಲ್ಲಿ 800 ಮುಜರಾಯಿ ದೇವಸ್ಥಾನವಿದೆ. ಶರಾವತಿ ಮುಳುಗಡೆ ಸಂತ್ರಸ್ತರ 9900 ಎಕರೆ ಸರ್ವೆ ಆಗಿದೆ ಡಿಜಿಟಲ್ ವರದಿ ನೀಡಲಾಗಿದೆ. 800 ಜನರು ಭೂಮಿ ಬಿಟ್ಟುಹೋಗಿದೆ ಎಂದು ಆಕ್ಷೇಪಿಸಿದ್ದರು. ಗುಣಮಟ್ಟದ ಸರ್ವೆ ಮಾಡಲಾಗಿದೆ. ತಕರಾರು ಬಂದವರ ಪಟ್ಟಿ ಮಾಡಲಾಗುತ್ತಿದೆ. ಒಂದು ವಾರ 10 ದಿನಗಳಲ್ಲಿ ಸರಿಪಡಿಸಲಿದ್ದೇವೆ. ಸರ್ಕಾರಕ್ಕೆ ವರದಿ ನೀಡಲಿದ್ದೇವೆ ಎಂದರು. 

ಅರಮಲೆನಾಡಿನಲ್ಲಿ ವೈದ್ಯರ, ಅಂಬ್ಯುಲೆನ್ಸ್ ಕೊರತೆಯಿದೆ. ಆಕುಕ ಕಮಿಷನರ್ ಆಗಿ ಇಲ್ಲಿಗೆ ಬರುವೆ ಕೆಎಓ್ ಡಿ ಬಗ್ಗೆ ಗಮನಹರಿಸುವೆ ಎಂದರು.

heartfelt words of the outgoing DC


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close