ಬಳ್ಳಾರಿ ವಿಚಾರದಲ್ಲಿ ಯಾರೂ ಈ ಹಂತಕ್ಕೆ ಹೋಗಬಾರದಿತ್ತು-ಮಧು ಬಂಗಾರಪ್ಪ- No one should have gone to this stage in the Bellary issue - Madhu Bangarappa

 SUDDILIVE || SHIVAMOGGA

ಬಳ್ಳಾರಿ ವಿಚಾರದಲ್ಲಿ ಯಾರೂ ಈ ಹಂತಕ್ಕೆ ಹೋಗಬಾರದಿತ್ತು-ಮಧು ಬಂಗಾರಪ್ಪ-   No one should have gone to this stage in the Bellary issue - Madhu Bangarappa  

Madhu, Bangarappa


ಬಳ್ಳಾರಿಯಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದು ಇಲ್ಲಿಗೆ ಬರುವಾಗ ಬಳ್ಳಾರಿಯಲ್ಲಿ ನಡೆದ ಘಟನೆ ಮಾಧ್ಯಮದಲ್ಲಿ ನೋಡ್ದೆ ನನಗೂ ಸರಿಯಾಗಿ ಗೊತ್ತಿಲ್ಲ ನಿನ್ನೆ ಸಂಜೆ ನಡೆದಿರೋ ಘಟನೆ ಇದು. ಬ್ಯಾನರ್ ಕಟೌಟ್ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸತ್ತಿದ್ದಾನೆ ಅಂತ ನೀವೆ ತೋರಿಸುತ್ತಿದ್ದೀರಾ ಯಾರೇ ಆದರೂ ಈ ಹಂತಕ್ಕೆ ಹೋಗಬಾರದು ಎಂದು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೊದಲಿಂದಲೂ ಆ ಪರಂಪರೆ, ಸ್ವಭಾವ ಇದೆ ಅಲ್ಲಿ. ನಾನು ಯಾರನ್ನು ದೂರಲು ಹೋಗುವುದಿಲ್ಲ. ಯಾರೇ ಆದರೂ ಕಾನೂನನ್ನ ಕೈ ತೆಗೆದುಕೊಂಡರೆ ಅವರಿಗೆ ಶಿಕ್ಷೆಯಾಗಬೇಕು. ಯಾವಾಗಲೂ ನ್ಯಾಯ ಗೆಲ್ಲಬೇಕು ಈ ರೀತಿ ಆಗಬಾರದು. ಅಮಾಯಕರಿಗೆ ತೊಂದರೆಯಾಗಬಾರದು. ಹೀಗಾದಾಗ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತೆ ಎಂದರು. 

ಬಹಳ ಸ್ಟ್ರೀಕ್ಟ್ ಆಗಿ ಕ್ರಮ ತೆಗೆದುಕೊಳ್ಳಬೇಕಿದೆ. ಈ ಸಂದರ್ಭದಲ್ಲಿ ನಾನು ಏನೇ ಹೇಳಿದ್ರೂ ತಪ್ಪಾಗಲಿದೆ. ಗುಂಡು ಸಿಕ್ಕಿದೆ ಫೈರಿಂಗ್ ಆಗಿದೆ ಅಂತ ಮಾಧ್ಯಮದಲ್ಲಿ ನೋಡ್ದೆ. ಖಾಸಗಿ ವ್ಯಕ್ತಿ ಯಾರೋ ಫೈರಿಂಗ್ ಮಾಡಿದ್ದಾನಂತೆ ತಿಳಿಯಲ್ಪಟ್ಟೆ ಎಂದರು. 

ಕೋಗಿಲು ಬಡಾವಣೆಯಲ್ಲಿ ಅಕ್ರಮ ವಲಸಿಗರಿಗೆ ಮನೆ ಹಂಚಿಕೆ ವಿಚಾರ

ಕೋಗಿಲು ಬಡಾವಣೆಯಲ್ಲಿ ಅಕ್ರಮ‌ಮನೆ ಧ್ವಂಸ ಮತ್ತು ಪರಿಹಾರವಾಗಿ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಎಂ, ಡಿಸಿಎಂ ಈ ವಿಚಾರದಲ್ಲಿ ಮಾತಾಡಿದ್ದಾರೆ. ಯಾರಿಗೆ ಅರ್ಹತೆ ಇದೆ ಅವರಿಗೆ ನಾವು ಸಹಕರಿಸುವುದು ನಮ್ಮ ಕರ್ತವ್ಯವಾಗಿದೆ. ಅವರು ಯಾವ ದೇಶದವರು, ರಾಜ್ಯದವರು ಆಗಿರಲಿ, ಕಾನೂನಿನಲ್ಲಿ ಅವಕಾಶ ಇದ್ದರೆ ಅರ್ಹತೆ ಇದ್ದರೆ ಕೊಡಬಹುದು ಎಂದರು. ಈ ಬಗ್ಗೆ ಸಿಎಂ ತೀರ್ಮಾನ ಮಾಡ್ತಾರೆ ಎಂದರು. 


ಇಂದು ಸಚಿವ ಸಂಪುಟ ಸಭೆ ಇದೆ

ಇಂದು ಕ್ಯಾಬಿನೆಟ್ ಸಭೆ ಇರುವುದರಿಂದ ನಾನು ಈಗ ಕಾಡಾ ಸಭೆ ಮುಗಿಸಿ ತೆರಳುತ್ತಿದ್ದೆನೆಕ್ಯಾಬಿನೆಟ್ ಪೂರಕವಾಗಿ ನೀವು ಕೇಳಬಾರದು ನಾನು ಹೇಳಬಾರದು ಆಮೇಲೆ ನಿಮಗೆ ಗೊತ್ತಾಗುತ್ತೆ ಎಂದು ಮಧು ಬಂಗಾರಪ್ಪ ತಿಳಿಸಿದರು.

No one should have gone to this stage in the Bellary issue - Madhu Bangarappa  


ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close