ಕೊಂಚ ಬದಲಾವಣೆಯೊಂದಿಗೆ ನೂತನ ಜಿಲ್ಲಾ ರಕ್ಷಣಾಧಿಕಾರಿಗಳ ಅಧಿಕಾರ ಸ್ವೀಕಾರ- New Superintendent of police of Shivamogga assume office with minor changes

SUDDILIVE || SHIVAMOGGA

ಕೊಂಚ ಬದಲಾವಣೆಯೊಂದಿಗೆ ನೂತನ ಜಿಲ್ಲಾ ರಕ್ಷಣಾಧಿಕಾರಿಗಳ ಅಧಿಕಾರ ಸ್ವೀಕಾರ- New Superintendent of police of Shivamogga assume office with minor changes

  

New, Superintendent

ನೂತನ ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್ ವರ್ಗಾವಣೆ ಗೊಂಡ ಬೆನ್ನಲ್ಲೇ ಇಂದು ಅವರು ಶಿವಮೊಗ್ಗಕ್ಕೆ ಬಂದು ಅಧಿಕಾರ ಸ್ವೀಕರಿಸಿದ್ದಾರೆ. ಇಷ್ಟು ದಿನ ಎಸ್ಪಿಗಳ  ವರ್ಗಾವಣೆ ಆದಾಗ ನಿರ್ಗಮಿತ ಎಸ್ಪಿಗಳೆ ಅಧಿಕಾರ ಹಸ್ತಾಂತರಿಸಿ ತಮಗೆ ಸೂಚಿಸಿದ ಸ್ಥಾನಕ್ಕೆ ವರ್ಗವಾಗಿ ಹೋಗುತ್ತಿದ್ದಿದ್ದು ಸಂಪ್ರದಾಯವಾಗಿತ್ತು. 

ಆದರೆ ಆ ಸಂಪ್ರದಾಯ ಈ ಬಾರಿ ಬದಲಾಗಿದೆ. ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಕಾರ್ಯಪ್ಪನವರಿಗೆ ನಿರ್ಗಮಿತ ಎಸ್ಪಿ ಮಿಥುನ್ ಕುಮಾರ್ ಅಧಿಕಾರ ಹಸ್ತಾಂತರಿಸಿದ್ದು, ನಂತರ ನೂತನ ಎಸ್ಪಿ ಆಗಿ ಬಂದ ನಿಖಿಲ್ ಬಿ ಅವರು Adnl Sp ಮೂಲಕ ಅಧಿಕಾರ ಸ್ವೀಕರಿಸಿದ್ದಾರೆ. ಆದೇಶದಲ್ಲಿಯೇ ಈ ರೀತಿ ಅಧಿಕರ ಹಸ್ತಾಂತರಿಸಲು ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. 



ಶಿವಮೊಗ್ಗ ಜಿಲ್ಲೆಗೆ ನೂತನವಾಗಿ ವರ್ಗಾವಣೆಯಾಗಿರುವ  ಬಿ. ನಿಖಿಲ್ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರವರು ಈ ದಿನ ದಿನಾಂಕಃ 01-01-2026 ರಂದು ಸಂಜೆ ಶಿವಮೊಗ್ಗ ಜಿಲ್ಲೆಗೆ ಬಂದು ವರದಿ ಮಾಡಿಕೊಂಡಿದ್ದು,  ಎ ಜಿ ಕಾರ್ಯಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು 1 ರವರಿಂದ ಶಿವಮೊಗ್ಗ ಜಿಲ್ಲೆಯ ಪ್ರಭಾರವನ್ನು ವಹಿಸಿಕೊಂಡಿರುತ್ತಾರೆ. 

ಆ ನಂತರ ಶಿವಮೊಗ್ಗ ನಗರದ ಪಿಐ ದರ್ಜೆಯ ಮೇಲ್ಪಟ್ಟ ಪೊಲೀಸ್ ಅಧಿಕಾರಿಗಳಿಗೆ ಉತ್ತಮ ಕರ್ತವ್ಯ ನಿರ್ವಹಿಸುವ ಸಂಬಂಧ ಸೂಕ್ತ ಸೂಚನೆ ಮತ್ತು ಸಲಹೆಗಳನ್ನು ನೀಡಿರುತ್ತಾರೆ.

New Superintendent of police of Shivamogga assume office with minor changes

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close