SUDDILIVE || SHIKARIPURA
ಬಸ್ ಮತ್ತು ಬೈಕ್ ಗೆ ಡಿಕ್ಕಿ, ಬೈಕ್ ಸವಾರ ಸಾವು- Bus and bike collide, bike rider dies
ಖಾಸಗಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆ ಶಿಕಾರಿಪುರ ತಾಲ್ಲೂಕಿನ ಮಳಲಿಕೊಪ್ಪ ಕ್ರಾಸ್ ಬಳಿ ಸಂಭವಿಸಿದೆ. ಶಿಕಾರಿಪುರ
ತಾಲ್ಲೂಕಿನ ಹಿರೇಮಾಗಡಿ ಮಣ್ಣೊಡ್ಡಿಗೆರೆ ಗ್ರಾಮದ ವಾಸಿ ಮಂಜಪ್ಪ (38) ಮೃತಪಟ್ಟ ಬೈಕ್ ಸವಾರ. ಮಳಲಿಕೊಪ್ಪ ಕ್ರಾಸ್ ಬಳಿ ಪೆಟ್ರೋಲ್ ಬಂಕ್‌ನಿಂದ ಶಿಕಾರಿಪುರ ಕಡೆಗೆ ಬೈಕ್ ನಲ್ಲಿ ಬರುವಾಗ ಶಿರಾಳಕೊಪ್ಪ ಕಡೆಯಿಂದ ಆಗಮಿಸುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ತೀವ್ರಗಾಯಗೊಂಡ ಬೈಕ್ ಸವಾರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಹೋಗುವಾಗ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಮೃತ ಸಹೋದರ ಶಿವಮೂರ್ತಿ ಪತ್ನಿ ಮಾಲಾ ತೀವ್ರಗಾಯಗೊಂಡಿದ್ದು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಕೂಲಿ ಕೆಲಸಕ್ಕಾಗಿ ತೆರಳುತ್ತಿರುವಾಗ ಘಟನೆ ನಡೆದಿದೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Bus and bike collide, bike rider dies
