ಅಂಗನವಾಡಿ ಕಾರ್ಯಕರ್ತೆಯ ಕೊಲೆಯೋ, ಅನುಮಾನಸ್ಪದ ಸಾವೋ?Anganwadi worker's murder or suspicious death?

 SUDDILIVE || SHIRALKOPPA

ಅಂಗನವಾಡಿ ಕಾರ್ಯಕರ್ತೆಯ ಕೊಲೆಯೋ, ಅನುಮಾನಸ್ಪದ ಸಾವೋ?Anganwadi worker's murder or suspicious death?      

Anganawadi, suspiciousdeath


ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯ ಸಾವಾಗಿದ್ದು, ಈ ಸಾವು ಅನುಮಾನಸ್ಪದವಾಗಿದೆ. ಕುಟುಂಬಸ್ಥರು ನೀಡಿದ ದೂರಿನ ಆಧಾರದ‌ಮೇರೆಗೆ ಕೊಲೆ ಎಂದು ದೂರು ದಾಖಲಾಗಿದೆ. 

ಶಿರಾಳಕೊಪ್ಪ ಗ್ರಾಮದ ಬಿಳಕಿ ಗ್ರಾಮದಲ್ಲಿ ಪ್ರೇಮ ಮಡಿವಾಳ (53) ಎಂಬುವರ ಸಾವಾಗಿದೆ. ಖಾಸಗಿ ಭಾಗದ ಬಳಿ ರಕ್ತ ಹೆಪ್ಪುಕಟ್ಟಿದ್ದು ಇದು ಕೊಲೆಯೋ ಅಥವಾ  ಹೃದಯಾಘಾತವಾಗಿಯೋ, ಅಥವಾ ಮತ್ತೆಯಾವುದೋ ಆರೋಗ್ಯ ಏರುಪೇರಿಂದ ಸಾವಾಗಿದೆಯಾ ಎಂಬ ಅನುಮಾನ ವ್ಯಕ್ತವಾಗಿದೆ. 

Anganawadi, suspiciousdeath

ಆದರೆ ಮನೆಯ ಬಾಗಿಲು ಮುರಿದು ರಾಬರಿಗೂ ಕೊಲೆಯಾಗಿರುವ ಬಗ್ಗೆಯೂ ಮಾಹಿತಿ ತಿಳಿಯುತ್ತಿಲ್ಲ. ಹಾಗಾಗಿ ಇದೊಂದು ಅನುಮಾನಸ್ಪದ ಸಾವಾಗಿರಬಹುದೆಂದು ಶಂಕಿಸಲಾಗಿದೆ. ಪ್ರೇಮಾರವರ ಪತಿ ಸಾವಾಗಿ 8 ವರ್ಷ ಕಳೆದಿದೆ. ಇವರಿಗೆ ನಾಲ್ಕು ಜನ ಮಕ್ಕಳಿದ್ದು,  ಮೂವರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಮಗ ಸಾಗರದಲ್ಲಿ ಕೆಲಸ ಮಾಡಿಕೊಂಡು ಇದ್ದಾನೆ.


ಮನೆಯ ಬಾಗಿಲು ಮುಚ್ಚಿದ ಹಾಗೆಯಿದೆ.  ಪ್ರೇಮ ಮಡಿವಾಳರವರು ಮೈಮೇಲೆ ಧರಿಸಿದ್ದ ಚಿನ್ನಾಭರಣಗಳು ಹಾಗೆಯಿರುವುದರಿಂದ ಇದು ರಾಬರಿ ಪ್ರಕರಣದಲ್ಲಿ ಕೊಲೆಯಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ಮೈಮೇಲಿನ ಖಾಸಗಿ ಅಂಗದಲ್ಲಿ ರಕ್ತ ಹೆಪ್ಪುಗಟ್ಟಿರುವುದರಿಂದ ಇದೊಂದು ಕೊಲೆಯಿರಬಹುದು ಎಂಬ ಅನುಮಾನಕ್ಕೆ ಈ ಘಟನೆ ಎಡಮಾಡಿಕೊಟ್ಟಿದೆ. 

ಈ ಘಟನೆ ನಿನ್ನೆ ರಾತ್ರಿ ನಡೆದಿದೆ. ಸ್ಥಳಕ್ಕೆ ಎಸ್ಪಿ ನಿಖಿಲ್ ಭೇಟಿ ನೀಡಿ ಆರೋಪಿತರ ಪತ್ತೆ ಹಾಗೂ ದಾಖಲಾತಿ ಸಂಗ್ರಹಕ್ಕೆ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.

Anganwadi worker's murder or suspicious death?

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Join Telegram Group
close