ಪಿಎಸ್ಐ ಮೇಲೆನ ಹಲ್ಲೆ ಪ್ರಕರಣ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಕೋರ್ಟ್-Court sentences accused in PSI attack case

 SUDDILIVE || SHIVAMOGGA

ಪಿಎಸ್ಐ ಮೇಲೆನ ಹಲ್ಲೆ ಪ್ರಕರಣ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಕೋರ್ಟ್-Court sentences accused in PSI attack case

Court, sentenced



ಕುಂಸಿ ಪೊಲೀಸ್ ಠಾಣೆ ಪಿಎಸ್ಐ ನವೀನ್ ಕುಮಾರ್ ಮಠಪತಿ ಹಾಗೂ ಹೆಡ್ ಕಾನ್ ಸ್ಟೇಬಲ್ ಬಸಂತಪ್ಪನವರ ಮೇಲೆ ಹಲ್ಲೆ ನಡೆಸಿದ ಇಬ್ವರು ಆರೋಪಿಗಳಿಗೆ ಎರಡು ವರ್ಷ ಕಾರಾಗೃಹ ಶಿಕ್ಷೆ ಮತ್ತು ತಲಾ 17.5 ಸಾವಿರ ರೂ. ದಂಡವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. 

2020 ನೇ ಸಾಲಿನಲ್ಲಿ ಕುಂಸಿ ಪಿಎಸ್ಐ ಆಗಿದ್ದ ನವೀನ್ ಕುಮಾರ್ ಮಠಪತಿ ಹಾಗೂ ಅವರ ಸಿಬ್ಬಂದಿಗಳು ಹಣೆಗರ ಕಟ್ಟೆ ಪೆಟ್ರೋಲ್ ಬಂಕ್ ಬಳಿ ಗಾಂಜಾ ಮಾರಾಟ ಮಾಡಲಾಗುತ್ತಿರುವ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿದಾಗ ಮಧು ಎಂಬ ಆರೋಪಿಗಳನ್ನು ಹೊರತುಪಡಿಸಿ ಸುಮಾರು 11 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು  ಪ್ರಮುಖ ಆರೋಪಿಗಳಾಗಿದ್ದ ಮಧು  ಆ ವೇಳೆ ಪತ್ತೆಯಾಗಿರಲಿಲ್ಲ.

ಇವರನ್ನು ಬೆನ್ನು ಹತ್ತಿದ ಪೊಲೀಸರು ಮರುದಿನ ಮಂಡಗಟ್ಟದ ಮಧುಎಂಬ ಆರೋಪಿಯನ್ನು ಸೆರೆಹಿಡಿಯಲು ಹೋದಾಗ ಅವನ ಸಹೋದರ ಮನು ದೊಣ್ಣೆಗಳನ್ನ ಹಿಡಿದುಕೊಂಡು ಬಂದು ಪಿಎಸ್ಐ ಮಠಪತಿ ಹಾಗೂ ಸಿಬ್ಬಂದಿ ಬಸಂತ್ ಕುಮಾರ್ ಅವರನ್ನು ಅಲ್ಲೇ ನಡೆಸಿದ್ದನು ಈ ಪ್ರಕರಣದಲ್ಲಿ ಮಠಪತಿ ಹಾಗೂ ಬಸಂತ್ ಕುಮಾರ್ ಅವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಬಂದು ಚಿಕಿತ್ಸೆ ಪಡೆದಿದ್ದರು.

ಈ ಪ್ರಕರಣದಲ್ಲಿ ಸಂಬಂಧಿಸಿದ್ದಂತೆ ಮನು ಮತ್ತು ಮಧು ಇಬ್ಬರನ್ನು ಬಂಧಿಸಲಾಗಿತ್ತು ತನಖಾಧಿಕಾರಿಗಳಾದ ಡಿವೈಎಸ್ಪಿ ಸಂಜೀವ್  ಕುಮಾರ್ ಮಾನ್ಯ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಶಾಂತರಾಜ್ ಸರ್ಕಾರಿ ಅಭಿಯೋಜಕರಾಗಿ ವಾದ ಮಂಡಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಯಶವಂತ್ ಕುಮಾರ್ ಆರೋಪಿಗಳಾದ ಮನು ಕುಮಾರ್ ಮತ್ತು ಮಧುಕುಮಾರ್ ರವರಿಗೆ ಎರಡು ವರ್ಷ ಕಾರವಾಸ ಶಿಕ್ಷೆ ಹಾಗೂ ತಲಾ 17 ವರೆ ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Court sentences accused in PSI attack case 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close