ಲಯನ್ ಸಫಾರಿಯಲ್ಲಿದ್ದ ಚಿರತೆ ಅಸ್ವಸ್ಥ, ಎಂಆರ್ ಐಗಾಗಿ ನಂಜಪ್ಪ ಆಸ್ಪತ್ರೆಗೆ- Leopard in Lion Safari falls ill, taken to Nanjappa Hospital for MRI

 SUDDILIVE|| SHIVAMOGGA

ಲಯನ್ ಸಫಾರಿಯಲ್ಲಿದ್ದ  ಚಿರತೆ ಅಸ್ವಸ್ಥ, ಎಂಆರ್ ಐಗಾಗಿ ನಂಜಪ್ಪ ಆಸ್ಪತ್ರೆಗೆ- Leopard in Lion Safari falls ill, taken to Nanjappa Hospital for MRI    

Leopard, safari


ವಯೋ ಸಹಜ ಹಿನ್ನಲೆಯಲ್ಲಿ ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದ ಲಯನ್ ಸಫಾರಿಯಲ್ಲಿದ್ದ ಚಿರತೆಯೊಂದನ್ನ ನಂಜಪ್ಪ ಆಸ್ಪತ್ರೆಗೆ ಕರೆತಂದು ಎಂಆರ್ ಐ ಚಿಕಿತ್ಸೆಗೆ ಗಂಡು ಚಿರತೆಯನ್ನ ಕರೆತರಲಾಗಿತ್ತು. 

15 ವರ್ಷದ ಭದ್ರ ಎಂಬ ಚಿರತೆಯನ್ನ ಕರೆತಙದು ಚಿಕಿತ್ಸೆ ನೀಡಲಾಗಿದೆ. ಚಿರತೆಗಳು ಬದುಕಿನ ಆಯಸ್ಸೇ 15-16  ವರ್ಷವಾಗಿದೆ. 15 ವರ್ಷದ ಭದ್ರ ಚಿರತೆಗೆ ವಯಸ್ಸಾದ ಹಿನ್ನಲೆಯಲ್ಲಿ  ನಾಲ್ಕು ಕಾಲನ್ನ ಸ್ವಾಧೀನ ಕಳೆದುಕೊಂಡಿದೆಯಾ ಅಥವಾ ಬೇರೆ ಕಾರಣಕ್ಕೆ ಚಿರತೆ ಕಾಲು ಕಳೆದುಕೊಂಡಿದೆಯಾ ಎಂಬುದನ್ನ ಪತ್ತೆ ಮಾಡಲು ಎಂಆರ್ ಐಗೆ ಕರೆತರಲಾಗಿತ್ತು. 

ಈ ಕುರಿತು ಸುದ್ದಿಲೈವ್ ಗೆ ಮಾತನಾಡಿದ ಡಿಎಫ್ಒ ಅಮರಾಕ್ಷರ್ ಭದ್ರ ಚಿರತೆಗೆ ಎಂಆರ್ ಐ ಸ್ಕ್ಯಾನ್ ಮಾಡಿಸಲಾಗಿದೆ. ವರದಿ ಬರಬೇಕಿದೆ. ವಯಸ್ಸಾಗಿದೆ. 

ಅದಕ್ಕೆ ಚಿಕಿತ್ಸೆ ನೀಡಲಾಗಿತ್ತು. ವಯಸ್ಸಾಗಿರುವ ಕಾರಣಕ್ಕೆ ಚಿರತೆ ಕಾಲು ಕಳೆದುಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.  20 ದಿನಗಳಿಂದ ಈ ಚಿರತೆ ಕುಂಟುತಿತ್ತು. ನಿನ್ನೆಯಿಂದ ಚಿರತೆ ಏಳುತ್ತಿರಲಿಲ್ಲ. ಹಾಗಾಗಿ ಪಶುವೈದ್ಯರು ಸಹಯದಿಂದ ಎಂಆರ್ ಐಗೆ ಕರತರಲಾಗಿದೆ ಎಂದರು. 

ಸಫಾರಿಯಲ್ಲಿ ಭದ್ರ ಚಿರತೆಯೂ ಸೇರಿ  11 ಚಿರತೆಗಳಿವೆ. 6 ಗಂಡು 5 ಹೆಣ್ಣು ಚಿರತೆಗಳಿವೆ. ಭದ್ರ ಶಿವಮೊಗ್ಗದ ಸಫಾರಿಯಲ್ಲೇ ಜನಿಸಿದ ಚಿರತೆಯಾಗಿದೆ. 

Leopard in Lion Safari falls ill, taken to Nanjappa Hospital for MRI 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close