ಹಿಂದೂ ದೇವಾಲಯಗಳನ್ನ ಸರ್ಕಾರದ ಸುಪರ್ಧಿಯಿಂದ ಮುಕ್ತಗೋಳಿಸಬೇಕಿದೆ-ತೇಜಸ್ವಿ ಸೂರ್ಯ-Hindu temples need to be freed from government interference - Tejaswi Surya

 SUDDILIVE || SHIVAMOGGA

ಹಿಂದೂ ದೇವಾಲಯಗಳನ್ನ ಸರ್ಕಾರದ ಸುಪರ್ಧಿಯಿಂದ ಮುಕ್ತಗೋಳಿಸಬೇಕಿದೆ-ತೇಜಸ್ವಿ ಸೂರ್ಯ-Hindu temples need to be freed from government interference - Tejaswi Surya     

Hindu, temple

ಹಿಂದೂ ದೇವಸ್ಥಾನಗಳನ್ನ ಸರ್ಕಾರದ ಸುಪರ್ಧಿಯಿಂದ ಮುಕ್ತಗೊಳಿಸುವಂತೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

ಅವರು ನಗರದ ಗೋಪಿವೃತ್ತದಲ್ಲಿ RSS ನ 100 ವರ್ಷದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಹಮ್ಮಿಕೊಂಡ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಹಿಂದೂ ಸಂಸ್ಕೃತಿ ಉಳಿದಿರುವುದು ದೇವಸ್ಥಾನದಿಂದ. ಇತರೆ ಧರ್ಮೀಯರ ಪ್ರಾರ್ಥನಾ ಮಂದಿರಗಳು ಸರ್ಕಾರದ ಸುಪರ್ಧಿಯಲ್ಲಿ ಇಲ್ಲ. ಹಿಂದೂ ದೇವಾಲಯಗಳು ಸರ್ಕಾರದ ಸುಪರ್ಧಿಯಲ್ಲಿವೆ. 

ಹಾಗಾಗಿ ಇತರೆ ಧರ್ಮಿಯರಿಗೆ ಅವರ ಪ್ರಾರ್ಥನಾ ಮಂದಿರಗಳು ನಡೆಸಲು ಅವಕಾಶ ಇರುವುದಾದರೆ ಭಾರತದಲ್ಲಿ ಹಿಂದೂ ದೇವಾಲಯಗಳನ್ನ ಯಾಕೆ ಅದೇ ಧರ್ಮದವರು ನಡೆಸಬಾರದು ಎಂದು ಪ್ರಶ್ನಿಸಿದ ಅವರು ಈ ಕೆಲಸವನ್ನ ಬಿಜೆಪಿ ಅಥವಾ ಕಾಂಗ್ರೆಸ್ ಯಾವುದೇ ಸರ್ಕಾರವಿದ್ದರೂ ತೆಗೆಯಬೇಕು  ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದೂ ದೇವಾಲಯಗಳನ್ನ ಸರ್ಕಾರದ ಸುಪರ್ಧಿಯಿಂದ ಹಿಂತೆಗೆಯುತ್ತೇವೆ ಎಂದು ಶಪಥ ಮಾಡಿದರು. 

ಮತಾಂತರವನ್ನ ವಿರೋಧಿಸಬೇಕಿದೆ. ಹೆಣ್ಣುಮಕ್ಕಳನ್ನ ಟಾರ್ಗೆಟ್ ಮಾಡಿ ಮತಾಂತರ ಮಾಡಲಾಗುತ್ತಿದೆ. ಅದರ ಬಗ್ಗೆ ಮಹಿಳೆಯರಿಗೆ ವಿವರಿಸಬೇಕಿದೆ. ದೇವಸ್ಥಾನ ಉಳಿಯೋದು ಭಕ್ತನಿಂದ ಆದರೆ ಧರ್ಮ ಉಳಿದಿರುವುದು ಅನುನಾಯಿಯಿಂದ ಹಾಗಾಗಿ ಹಿಂದೂ ಧರ್ಮವನ್ನ ಬಿಟ್ಟು ಹೋದವರನ್ನ ಸಮಾಜಕ್ಕೆ ಕರೆತರಬೇಕಿದೆ. ಹಿಂದೂ ಪರವಾಗಿ ಇರುವವರನ್ನ  ಮಾತ್ರ ಮತದಾನ ಮಾಡಿ ಗೆಲ್ಲಿಸುವಂತೆ ಕರೆ ನೀಡಿದ ತೇಜಸ್ವಿ ಸೂರ್ಯ ಬೇರೆ ಧರ್ಮದಲ್ಲಿ ಇದು ಇದೆ. ನಮ್ಮಲ್ಲಿ ಇಲ್ಲ. ಅದನ್ನ ರೂಢಿಗೆ ತರಬೇಕಿದೆ ಎಂದರು. 

ಪ್ರಮುಖ ಸಂಕಲ್ಪ ಹಿಂದೂ ನಾವೆಲ್ಲಾ ಒಂದು ಎಂಬ ಭಾವನೆ ಬರಬೇಕಿದೆ.ಹಿಂದೂವನ್ನ ಒಡೆಯುವ ಷಡ್ಯಂತರ ನಡೆದಿದೆ. ಮೇಲೆಕೆಳಗಿನ ತಾರತಮ್ಯವನ್ನ ತೆಗೆದು ಸಂಘಟಿತರಾಗಬೇಕು.

ಶೋಕಾಚರಣೆಯ ಧರ್ಮವಲ್ಲ

ಭಾಷೆ ಕೇವಲ ಸಂಪರ್ಕಸಾಧಕವಾಗಿ ಮಾತ್ರವಿಲ್ಲ ಸಂಸ್ಕೃತಿಯನ್ನ ಬೆಳೆಸಲು ಭಾಷೆ ಪ್ತಮುಖಪಾತ್ರವಹುಸುತ್ತದೆ. ಹಾಗಾಗಿ ಮಾತೃಭಾಷೆಯನ್ನ ಮನೆಯಲ್ಲಿ ಮಕ್ಕಳಿಗೆ ಖಡ್ಡಾಯವಾಗಿ ಹೇಳಿಕೊಡಬೇಕು ಹಾಗೂ ಮನೆಯಲ್ಲಿ ಪ್ರತಿ ಹಿಂದೂ ಹಬ್ಬಗಳನ್ನ ಆಚರಿಸಬೇಕು. ಸಂಭ್ರಮದಿಂದ ಇದ್ದ ಧರ್ಮವಿದು. ಪ್ರತಿದಿನ ಹಬ್ಬವನ್ನ ಆಚರಿಸುತ್ತಿದ್ದೆವು. ಶೋಕಾಚರಣೆಯ ಸಂಸ್ಕೃತಿ ನಮ್ಮದಲ್ಲ. ಭಕ್ತಿ ಸಾಹಿತ್ಯದಿಂದ ಸಮುದಾಯವನ್ನ ಜಾಗೃತಿ ಮಾಡಿದ ಸಂತರಿದ್ದಾರೆ. ನಮ್ಮ‌ಮಕ್ಕಳಿಗೆ ಸಾಹಿತ್ಯವನ್ನೋ ಅಥವಾ ಸಂಸ್ಕೃತಿಯನ್ನ ಕಲಿಯುವುದನ್ನ ಕಲಿಸಿಕೊಡಬೇಕು. ಮನೆಯ ಹಿರಿಯನಾದವನು ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಗೌರವ ಹಾಕಿಕೊಡುವ ಮೇಲ್ಪಂಕ್ತಿ ಹಾಕಿಕೊಡುವಂತಾಗಲಿ ಎಂದರು. 

Hindu temples need to be freed from government interference - Tejaswi Surya

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close