ಲೋಕಾಯುಕ್ತರ ಹೆಸರಿನಲ್ಲಿ ಬೆದರಿಕೆ ಕರೆ ಪ್ರಕರಣ ಮುಚ್ಚಿಹಾಕಲು 50 ಸಾವಿರ ರೂ.ಹಣಕ್ಕೆ ಬೇಡಿಕೆ-Demand for Rs 50,000 to cover up, threat call case in Lokayukta's name

 SUDDILIVE || SHIVAMOGGA

ಲೋಕಾಯುಕ್ತರ ಹೆಸರಿನಲ್ಲಿ ಬೆದರಿಕೆ ಕರೆ ಪ್ರಕರಣ ಮುಚ್ಚಿಹಾಕಲು 50 ಸಾವಿರ ರೂ.ಹಣಕ್ಕೆ ಬೇಡಿಕೆ-Demand for Rs 50,000 to cover up, threat call case in Lokayukta's name    

Demand, lokayukta

ಲೋಕಾಯುಕ್ತರ ಹೆಸರಿನಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗೆ ಕರೆ ಮಾಡಿ ನಿಮ್ಮ ವಿರುದ್ಧ ಭ್ರಷ್ಠಾಚಾರದ ದೂರು ಬಙದಿದೆ ಮುಚ್ಚಿ ಹಾಕಲು 50 ಸಾವಿರ ರೂ ಹಣದ ಬೇಡಿಕೆಯಿಟ್ಟ ಘಟನೆಯೊಂದು ಕೋಟೆ ಪೊಲೀಸ್ ಠಾಣೆಯಲ್ಲಿ ದೂರಾಗಿ ದಾಖಲಾಗಿದೆ.

ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸಹಾಯಕ ಕಂದಾಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್.ಕೆ. ರಂಗಸ್ವಾಮಿ ಅವರಿಗೆ ಫೆಬ್ರವರಿ 2 ರಂದು ಅಪರಿಚಿತ ನಂಬರ್‌ನಿಂದ ವಾಟ್ಸ್‌ಆ್ಯಪ್ ಕರೆ ಬಂದಿತ್ತು.

ಕರೆ ಮಾಡಿದ ವ್ಯಕ್ತಿಯು ತಾನು ಲೋಕಾಯುಕ್ತ ಇನ್‌ಸ್ಪೆಕ್ಟರ್ ರವಿಪ್ರಕಾಶ್ ಎಂದು ಪರಿಚಯಿಸಿಕೊಂಡಿದ್ದನು. ರಂಗಸ್ವಾಮಿ ಅವರ ವಿರುದ್ಧ ಭ್ರಷ್ಟಾಚಾರದ ದೂರುಗಳಿದ್ದು, ಆ ಪ್ರಕರಣವನ್ನು ಮುಕ್ತಾಯಗೊಳಿಸಲು 50,000 ರೂಪಾಯಿ ನೀಡುವಂತೆ ಬೇಡಿಕೆಯಿಟ್ಟಿದ್ದನು. ಒಂದು ವೇಳೆ ಹಣ ನೀಡದಿದ್ದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸುವುದಾಗಿ ಅಧಿಕಾರಿ ರಂಗಸ್ವಾಮಿ ಅವರಿಗೆ ಬೆದರಿಕೆ ಹಾಕಲಾಗಿತ್ತು.

ಈ ಕರೆ ಬಂದ ತಕ್ಷಣ ರಂಗಸ್ವಾಮಿ ಅವರು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಕೂಡಲೇ ಎಚ್ಚೆತ್ತ ಲೋಕಾಯುಕ್ತ ಅಧಿಕಾರಿಗಳು ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿಯೊಂದಿಗೆ ತೆರಳಿ ಕೋಟೆ ಠಾಣೆಗೆ ದೂರು ನೀಡಿದ್ದಾರೆ.

Demand for Rs 50,000 to cover up, threat call case in Lokayukta's name 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close