ಕಾರಾಗೃಹದಲ್ಲಿ ಗಾಂಜಾ ಮೊಬೈಲ್ ಸಿಗರೇಟ ಮೊದಲಾದ ನಿಷೇಧ ವಸ್ತುವನ್ನ ಎಸೆದ ಪ್ರಕರಣ-ಐವರು ಅಂದರ್- Five arrested for throwing banned substances

 SUDDILIVE || SHIVAMOGGA

ಕಾರಾಗೃಹದಲ್ಲಿ ಗಾಂಜಾ ಮೊಬೈಲ್ ಸಿಗರೇಟ ಮೊದಲಾದ ನಿಷೇಧ ವಸ್ತುವನ್ನ ಎಸೆದ ಪ್ರಕರಣ-ಐವರು ಅಂದರ್-Five arrested for throwing banned substances like marijuana, mobile phones, cigarettes in prison

Jail, arrest


ಕಪ್ಪು ಬಣ್ಣದ ಟೇಪನಲ್ಲಿ ಗಾಂಜಾ, ಮೊಬೈಲ್, ಸಿಗರೇಟ್, ಸಿಗರೇಟ್ ಲೈಟರ್ ನ್ನ ಇಟ್ಟು ಪ್ಯಾಕ್ ಮಾಡಿ ಶಿವಮೊಗ್ಗ ಕಾರಾಗೃಹದ ಒಳಗೆ ಎಸೆದ ಪ್ರಕರಣವನ್ನ ತುಂಗ ನಗರ ಪೊಲೀಸರು ಬೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ದಿನಾಂಕ: 01/02/2026 ರಂದು ಶಿವಮೊಗ್ಗದ ಸೋಗಾನೆಯ ಕೇಂದ್ರ ಕಾರಾಗೃಹದ ಒಳಗಡೆ ಯಾರೋ ವ್ಯಕ್ತಿಗಳು ಗಾಂಜಾ, ಮೊಬೈಲ್, ಸಿಗರೇಟ್ ಹಾಗೂ ಲೈಟರನ್ನು ಕಪ್ಪು ಬಣ್ಣದ ಗಮ್ ಟೇಪ್ ನಿಂದ ಪ್ಯಾಕ್ ಮಾಡಿ ಬೆಳಗಿನ ಜಾವ ಕಾರಾಗೃದೊಳಗೆ ಎಸೆದಿದ್ದು ಈ ಸಂಬಂಧ ಕೇಂದ್ರ ಕಾರಾಗೃಹದ  ಅಧೀಕ್ಷಕರಾದ ಪರಮೇಶ್ ಎಚ್ ಎ ರವರು ನೀಡಿದ ದೂರಿನ ಮೇರೆಗೆ  ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಪ್ರಕರಣ ದಾಖಲಾಗಿತ್ತು.  ಈ ರೀತಿ ಎಸೆದಿದ್ದ ಮೊಬೈಲ್‌ ಫೋನ್‌, ಗಾಂಜಾ ಹಾಗೂ ಸಿಗರೇಟ್‌ ಅನ್ನು ವಶಪಡಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದರು. 

ಸದರಿ ಪರಕರಣದಲ್ಲಿ ಪೊಲೀಸ್ ಅಧೀಕ್ಷಕರಾದ  ನಿಖಿಲ್.ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಯುತ ಎ.ಜಿ. ಕಾರಿಯಪ್ಪ ಹಾಗೂ ಶ್ರೀಯುತ ರಮೇಶ್ ಕುಮಾರ್, ಪೊಲೀಸ್ ಉಪಾಧೀಕ್ಷಕರಾದ ಶ್ರೀಯುತ ಬಾಬು ಅಂಜನಪ್ಪರವರ ಮಾರ್ಗದರ್ಶನದಲ್ಲಿ ತುಂಗಾನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರವರಾದ  ಕೆ.ಟಿ.ಗುರುರಾಜ್, ಪಿಎಸ್ಐ ರವರಾದ ಗಾದಿಲಿಂಗಪ್ಪ ಗೌಡರ್,  ರಘುವೀರ, ಶ್ರೀಮತಿ ಮಂಜಮ್ಮ ಹಾಗೂ ಠಾಣಾ ಸಿಬ್ಬಂದಿಯವರಾದ ಕರಿಬಸಪ್ಪ, ಅರುಣ್ ಕುಮಾರ್, ಕಿರಣ್ ಕುಮಾರ್, ಹರೀಶ್ ನಾಯ್ಕ್, ತಮ್ಮಣ್ಣ ಜಂಬರಗಿ, ನಾಗಪ್ಪ ಅಡಿವೆಪ್ಪನವರ್,  ಬಸವರಾಜ ಪಾಳೇದ್ ರವರ ನಿರಂತರ ಶ್ರಮದಿಂದ ಇಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿತರಾದವನ್ನ ಬಂಧಿಸಲಾಗಿದೆ.



ಎ1) ಮೊಹ್ಮದ್ ಖಲಂದರ್ @ ಕಲ್ಲು ಬಿನ್ ಸರ್ದಾರ್ ಶರೀಫ್, 23 ವರ್ಷ,  ಸೂಳೆಬೈಲ್, ಶಿವಮೊಗ್ಗ, ಎ3) ಅಬ್ದುಲ್ ಮುನಾಫ್ @ ಮುನ್ನಾ ಬಿನ್ ಶೇಖ್ ಮುಸ್ತಾಫ್, 30 ವರ್ಷ,  ವಾಸ ಬೊಮ್ಮನಕಟ್ಟೆ ಶಿವಮೊಗ್ಗ ಎ4) ವಿಜಯ್ ಬಿನ್ ಶಂಕರ್, 19 ವರ್ಷ,  ವಾಸ  ಕೋಟೆಗಂಗೂರು  ಶಿವಮೊಗ್ಗ, ಎ5) ಪರಶುರಾಮ್ ಬಿನ್ ನಾಗೆಂದ್ರ, 19 ವರ್ಷ, ವಾಸ  ಬೊಮ್ಮನಕಟ್ಟೆ ಶಿವಮೊಗ್ಗ ರವರನ್ನು ದಸ್ತಗಿರಿ ಮಾಡಲಾಗಿದೆ.  

ಕೃತ್ಯಕ್ಕೆ ಉಪಯೋಗಿಸಿದ ಒಂದು ಬೈಕನ್ನು ಸಹ ವಶಕ್ಕೆ ಪಡಿಸಿಕೊಂಡು ಸದರಿ 04 ಜನ ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂದನಕ್ಕೆ ಆದೇಶಿಸಿರುತ್ತದೆ.

Five arrested for throwing banned substances

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close