ಗೋಪಾಳದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಈಜುಕೊಳದಲ್ಲಿ ಆಸ್ಕ್ ಎಲ್ 3 ತರಬೇತಿದಾರರನ್ನ‌ ನೇಮಿಸಲು ಆಗ್ರಹ-Demand to appoint Ask L3 trainers at Gopala Sports Complex swimming pool

 SUDDILIVE || SHIVAMOGGA

ಗೋಪಾಳದ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಈಜುಕೊಳದಲ್ಲಿ ಆಸ್ಕ್ ಎಲ್ 3 ತರಬೇತಿದಾರರನ್ನ‌ ನೇಮಿಸಲು ಆಗ್ರಹ-Demand to appoint Ask L3 trainers at Gopala Sports Complex swimming pool   

Demand, appoint


ಗೋಪಾಲದಲ್ಲಿರುವ ಈಜುಕೊಳದಲ್ಲಿ ಆಸ್ಕ್ ಎಲ್ ತ್ರಿ ಕೋಚ್ ಹಾಗೂ ಲೈಫ್ ಕಾರ್ಡ್ ಇಲ್ಲದೆ ಈಜುಕೊಳದ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳ ಪೋಷಕರು ಇಂದು ಶಾಸಕ ಚನ್ನಬಸಪ್ಪ ಅವರನ್ನು ಭೇಟಿ ಮಾಡಲು ಪ್ರತಿಭಟನ ಸ್ಥಳಕ್ಕೆ ಆಗಮಿಸಿದ್ದರು.

ಈ ಕೊಳದಲ್ಲಿ ಕಳೆದ ಸುಮಾರು 7-8 ವರ್ಷಗಳಿಂದ ಹಿಂದಿನ ಕೋಚ್ ಗಳು ತರಬೇತಿ ನೀಡಿದಂತಹ ಮಕ್ಕಳು ಶಿವಮೊಗ್ಗಕ್ಕೆ ಹೆಸರು ತಂದು ಕೊಟ್ಟಿರುತ್ತಾರೆ. ಇಲ್ಲಿ ತರಬೇತಿ ಪಡೆದ ಸಾಮರ್ಥ್ಯವುಳ್ಳ ಕೋಚ್ ಗಳನ್ನೇ ನೇಮಿಸಬೇಕೆಂದು ಪೋಷಕರು ಶಾಸಕರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದರು‌. 

ಹಿಂದೆ ಅಖಿಲ ಏಜೆನ್ಸಿ ಮಾಲೀಕರಾದ ಸುರೇಶ್ ಬಾಳಿಗುಂಡಿ ರವರ ಬಳಿ ಎಲ್ಲಾ ಪೋಷಕರು ಹೋಗಿ ಸಮಸ್ಯೆಯನ್ನು ಬಗೆಹರಿಸುವಂತೆ ಬೇಡಿಕೊಂಡಿದ್ದೆವು. ಆದರೂ ಸಹ ಅವರು ತರಾತುರಿಯಲ್ಲಿ ಯಾವುದೇ ಕೋಚ್ಗಳ ನೇಮಕ ಮಾಡಿಕೊಳ್ಳದೆ ಕಾರ್ಯನಿರ್ವಹಿಸುತ್ತಿದ್ದ ಕೋಚ್ ಗಳನ್ನು ತೆಗೆದು ಆ ಸ್ಕೇಲ್ ತ್ರೀ ಅಲ್ಲದ ಕೋಚುಗಳನ್ನು ಕಳುಹಿಸಿದ್ದು ಇದರಿಂದ ಅವ್ಯವಸ್ಥೆ ಹೆಚ್ಚಾಗಿತ್ತು ಸಮಸ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಮಕ್ಕಳಿಗೆ ತರಬೇತಿ ಇಲ್ಲದೆ ಅವರ ಮೇಲೆ ದುಷ್ಪರಿಣಾಮ ಬೀರಿದ್ದು ಫೆಬ್ರವರಿ 8ನೇ ತರಗತಿ ತಾರೀಕಿನಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ನಾನ್ ಮೆಡಲಿಸ್ಟ್ ಈಜು ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲವೆಂದು ಪೋಷಕರು ದೂರಿದ್ದಾರೆ.

ಒಂದು ವಾರದಿಂದ ನೀರಿನ ಗುಣಮಟ್ಟ ಹಾಳಾಗುತ್ತಿದ್ದು ನಿರ್ವಹಣೆ ಇಲ್ಲದೆ ಬಾಗಿಲು ಜಡಿಯುವ ಸ್ಥಿತಿ ಬಂದರೂ ಬರಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿರುವ ಪೋಷಕರು ಈ ಹಿಂದೆ ಡಿಸಿ ಅವರಿಗೆ ಮನವಿ ನೀಡಲಾಗಿದೆ ನಮ್ಮ ಮನವಿಗೆ ಬೆಲೆ ಇಲ್ಲದಂತಾಗಿದೆ ಆದ್ದರಿಂದ ತಾವುಗಳು ದಯಮಾಡಿ ಮಕ್ಕಳ ಕ್ರೀಡಾ ಬೆಳವಣಿಗೆ ಹಾಗೂ ಕ್ರೀಡಾ ಭವಿಷ್ಯದ ದೃಷ್ಟಿಯಿಂದ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೋರಿಕೊಂಡರು. 

ಮನವಿ ನೀಡುವ ಸಮಯದಲ್ಲಿ ಸನತ್ ಕುಮಾರ್, ವಿಜಯಕುಮಾರ್ ಜಯಲಕ್ಷ್ಮಿ ರೇಖಾ ಲತಾ ರೇಷ್ಮಾ ವಾಣಿ ಪೂಜಾ ಮೊದಲಾದವರು ಉಪಸ್ಥಿತರಿದ್ದರು.

Demand to appoint Ask L3 trainers at Gopala Sports Complex swimming pool 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close