SUDDILIVE || SHIVAMOGGA
ಅಬಕಾರಿ ಸಚಿವರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು- BJP reacts strongly to Excise Minister's resignation
ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭ್ರಷ್ಠಾಚಾರದ ವಿರುದ್ಧ ಹಾಗೂ ಭ್ರಷ್ಠ ಸಚಿವರು ರಾಜೀನಾಮೆ ನೀಡುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಇಂದು ಶಿವಪ್ಪ ನಾಯಕನ ವೃತ್ತದಲ್ಲಿ ಪ್ರತಿಭಟನೆ ನಡೆಸಿದೆ.
ಶಾಸಕ ಡಾ.ಧನಂಜಯ ಸರ್ಜಿ ಅವರು ಮಾತನಾಡಿ ಕಾಂಗ್ರೆಸ್ ಎಂಬ ಪದ ಇಂಗ್ಲಿಷ್ ನಲ್ಲಿ ಸಿ ಎಂಬ ಪದದಿಂದ ಆರಂಭವಾಗುತ್ತದೆ. ಸಿ ಎಂದರೆ ಕಲೆಕ್ಷನ್ ಸಿ ಎಂದರೆ ಕರಪ್ಷನ್ ಮತ್ತೊಂದು ಸಿ ಎಂದರೆ ಕಮಿಷನ್ ಎಂದು ದೂರಿದರು.
ಪೇಸಿಎಂ ಎಂದು ಹಿಂದೆ ಬಸವರಾಜ್ ಬೊಮ್ಮಾಯಿ ವಿರುದ್ಧ ಹೇಳಿದಕಾಂಗ್ರೆಸ್ ಅವತ್ತು ದಾಖಲಾತಿ ಕೊಟ್ಟರಾ? ಈಶ್ವರಪ್ಪ ನವರ ವಿರುದ್ಧ ಹೇಳಿದಾಗ ರಾಜೀನಾಮೆ ಕೊಟ್ಟ್ರಲ್ಲ ದಾಖಲಾತಿ ಕೇಳುದ್ರಾ ಎಂದ ಶಾಸಕ ಚೆನ್ನಬಸಪ್ಪ ಈಗ ದಾಖಲಾತಿಯ ನೆನಪಾಯಿತಾ ಎಂದು ವ್ಯಂಗ್ಯವಾಡಿದರು.
ಗಾಂಧಿಜಿಯನ್ನ ದಿನನಿತ್ಯ ಕಗ್ಗೊಲೆ ಮಾಡುತ್ತಿರುವುದು ಕಾಂಗ್ರೆಸ್ ಹಾಗಾಗಿ ಅವರ ಆರಾಧ್ಯ ದೈವನ ಹೆಸರಿನಲ್ಲಿ ಯೋಜನೆಯನ್ನ ತರಲಾಗಿದೆ. ಅಂದು ಕಾಂಗ್ರೆಸ್ ನ್ನ ವಿಸರ್ಜಿಸಿ ಎಂದ ಕಾಂಗ್ರೆಸ್ ಪಕ್ಕಕ್ಕೆ ಸರಿಸಿದರು. ಇಂದು ಗಾಂಧಿಜಿಯ ಹೆಸರಿನಲ್ಲಿ ಬೊಂಬ್ಡ ಬಚಾಯಿಸಿದ್ದೀರಿ. ರಾಹುಲ್, ಪ್ರಿಯಾಕಾ, ಸೋನಿಯಾ ವಾದ್ರ ಹೆಸರಿನಲ್ಲಿರುವ ಇಂದು ಕಾಂಗ್ರೆಸ್ ಮಾಯವಾಗುತ್ತಿದೆ. ಮತದಾರ ನಿಮ್ಮ ಬಗ್ಗೆ ತೀರ್ಮಾನಿಸಿದ್ದಾನೆ. ಇಡೀ ಕಾಂಗ್ರೆಸ್ ರಾಜ್ಯಕ್ಕೆಅಪಮಾನ ಮಾಡುತ್ತಿದೆ. ತೀರ್ಮಾನ ಮಾಡಿರುವ ಮತದಾರ ಕಾಂಗ್ರೆಸ್ ವಿರುದ್ಧ ಒಂದು ನಿರ್ಣಯ ಮಾಡಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಗದೀಶ್, ಎಸ್ ಎಸ್ ಜ್ಯೋತಿ ಪ್ರಕಾಶ್, ಹರಿಕೃಷ್ಣ, ಎನ್ ಜೆ ನಾಗರಾಜ್, ಚಂದ್ರಶೇಖರ್, ಮಂಜು ಮೊದಲಾದವರು ಭಾಗಿಯಾಗಿದ್ದರು.
BJP reacts strongly to Excise Minister's resignation
