ನಾಲ್ಕು ಎಕರೆ ಅರಣ್ಯ ಒತ್ತುವರಿ ಜಾಗಕ್ಕೆ ಇಲಾಖೆ ನೋಟೀಸ್, ಬಿಲದೋಳ್ ಭೀಮಸೇನನಂತಾದ ಜನಪ್ರತಿನಿಧಿಗಳು-Department notices for forest encroachments, people's representatives. becane like a Biladol Bhima Sena

 SUDDILIVE || SHIVAMOGGA

ನಾಲ್ಕು ಎಕರೆ ಅರಣ್ಯ ಒತ್ತುವರಿ ಜಾಗಕ್ಕೆ ಇಲಾಖೆ ನೋಟೀಸ್, ಬಿಲದೋಳ್ ಭೀಮಸೇನನಂತಾದ ಜನಪ್ರತಿನಿಧಿಗಳು-Department notices for forest encroachments, people's representatives. becane like a Biladol Bhima Sena   

Forest, enchrochment

ಆಡಳಿತ ಮತ್ತು ವಿಪಕ್ಷಗಳ ನಾಯಕರ ಪುಂಖಾನುಪುಂಖದ ಬುರುಡೆ ಭಾಷಣಗಳ ನಡುವೆ ಎಸಿಎಫ್ ಕೋರ್ಟ್ ನಾಲ್ಕು ಎಕರೆ ಭೂಮಿಯನ್ನ ಊಳಿಸಿಕೊಂಡು ಬರುತ್ತಿದ್ದ ಕುಟುಂಬವನ್ನ ಒಕ್ಜಲೇಳಿಸುವಂತೆ ನೋಟೀಸ್ ನೀಡಿ ಆತಂಕ ಪಡಿಸಿದೆ.

ಒಂದು ಕಡೆ ಬಿಜೆಪಿಯ ಸಂಸದರ ಭರವಸೆ, ಮತ್ತೊಂದು ಕಡೆ ಸಚಿವ ಮಧು ಬಂಗಾರಪ್ಪನವರ ಭವಸೆ ಮಾತುಗಳು ಕೇಳಿ ಕೇಳಿ ಜನ ಇನ್ನೂ ಎಷ್ಟು ಮೋಸ ಹೋಗಬೇಕೊ ಗೊತ್ತಿಲ್ಲ. ಆದರೆ ಜನ ಮಾತ್ರ ಮನೆ, ಜಮೀನು ಖಾಲಿ ಮಾಡಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಸಿಗಂದೂರು ಸೇತುವೆ ನಿರ್ಮಾಣದ ವೇಳೆ ಅಡ್ಡಿ ಬಾರದ, ಪಂಪ್ಡ್ ಸ್ಟೋರೇಜ್ ನಲ್ಲಿ 16 ಸಾವಿರ ಮರಗಳ ಮಾರಣ ಹೋಮವಾಗಲಿದೆ ಎಂದು ಮಾಧ್ಯಮಗಳು ಹೇಳಿದರೂ ಪಿಚ್ಚರ್ ಗೆ ಬಾರದ,  ಬೆಕ್ಕೂಡು ಸೇತುವೆ ನಿರ್ಮಾಣ, ಆಗುಂಬೆಯ ಟನಲ್ ನಿರ್ಮಾಣಕ್ಕೆ ಅರಣ್ಯಗಳ ಮಾರಣ ಹೋಮ ನಡೆಯಲಿದೆ ಎಂದಾಗಲೂ ತಲೆಕೆಡೆಸಿಕೊಳ್ಳದ acf ನ್ಯಾಯಾಲಯಗಳು ಮತ್ತು ಕಾನೂನುಗಳು ಬಡ ರೈತನ ಗದಾಪ್ರಹಾರಕ್ಕೆ ಮುಂದಾಗಿವೆ.


ಯಾರಿಗೂ ಒಕ್ಕಲೆಬ್ಬಿಸಲು ಬಿಡಲ್ಲ ಎನ್ನುವ ಈ ಎರಡೂ ಪಕ್ಷದ ನಾಯಕರು ಈಗ ಯಾವ ಬಿಲದಲ್ಲಿ ಅಡಗಿಕುಳಿತಿದ್ದಾರೆ ಎಂಬುದನ್ನ‌ ದುರಬಿನ್ ಹಾಕಿ ಹುಡುಕುವಂತಾಗಿದೆ. ಮೀಸಲು ಅರಣ್ಯದಲ್ಲಿ ಎರಡೂವರೆ ದಶಕದ ಹಿಂದೆ ದಾಖಲಾದ ಮೊಕದ್ದಮೆ ACF ಕೋರ್ಟ್ ಆದೇಶ ಹಿನ್ನೆಲೆಯಲ್ಲಿ  ಶರಾವತಿ ಕಣಿವೆ ಅಭಯಾರಣ್ಯ, ಕಾರ್ಗಲ್ ವನ್ಯಜೀವಿ ವಿಭಾಗವು ಕಟ್ಟಿನಕಾರು ಗ್ರಾಮದ ಹೂವಯ್ಯ ಬಿನ್ ಮುಗಲನಾಯ್ಕ ಎಂಬುವರಿಗೆ ಒಕ್ಕಲೇಳುವಂತೆ ನೋಟೀಸ್ ನೀಡಿದೆ. ನಾಲ್ಕು ಎಕರೆ ಒತ್ತುವರಿ ತೆರವಿಗೆ ನೋಟೀಸ್ ನೀಡಲಾಗಿದ್ದು ಗ್ರಾಮಸ್ಥರ ತೀವ್ರತರನಾದ ಪ್ರತಿರೋಧದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ವಾಪಾಸ್ ಹೋಗಿದ್ದಾರೆ. ಇದು ಮುಂದಿನ ದಿನಗಳಲ್ಲಿ ಆತಂಕವನ್ನೇ ಸೃಷ್ಠಿಸಿದೆ.

ಕಟ್ಟಿನಕಾರು ಗ್ರಾಮದಲ್ಲಿ 14 ಮನೆಗಳಿವೆ. ಇವರಿಗೆ ವಾರಕ್ಕೊಮ್ಮೆ ಒಂದು ಮನೆಗೆ ನೋಟೀಸ್ ನೀಡಿ ರೈತರನ್ನೇ ಒಡೆದು ಆಳುವ ನೀತಿಗೆ ಅರಣ್ಯ ಇಲಾಖೆ ಮುಂದಾಗಿದೆ. ಇದನ್ನ ಕೇಳುದ್ರೆ ಸಂಸದರು, ಸಚಿವರು ಅರಣ್ಯ ಇಲಾಖೆ ಸಚಿವರು ಯಾರಿಗೂ ಏಳಿಸುವ ನೋಟೀಸ್ ನೀಡಲ್ಲ ಎಂದು ಬುರುಡೆ ಬಿಡ್ಕೊಂಡು ಓಡಾಡುತ್ತಿದ್ದಾರೆ.  


ಅರಣ್ಯಾಧಿಕಾರಿಗಳ ನೋಟಿಸ್ ವಿವರ ಹೀಗಿದೆ.


ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿಂತೆ, ಶರಾವತಿ ವನ್ಯಜೀವಿ ವಲಯ, ಕೋಗಾರ್‌ನಲ್ಲಿ ದಾಖಲಾದ ಅರಣ್ಯ ಮೊಕದ್ದಮೆ ಸಂಖ್ಯೆ:17/1998-99, ದಿನಾಂಕ:12.08.1998ರಲ್ಲಿ ಶಿವಮೊಗ್ಗ ಜಿಲ್ಲೆ, ನಾಗರ ತಾಲ್ಲೂಕು, ಕರೂರು ಹೋಬಳಿ, ಕಟ್ಟಿನಕಾರು ಗ್ರಾಮ, ಕೋರ್ಗಾ ಅಂಚೆ, ಶಿವಮೊಗ್ಗ ಜಿಲ್ಲೆ ವಾಸಿಯಾದ ಹೂವಯ್ಯ ಬಿನ್ ಮುಗಲನಾಯ್ಕ ಆದ ನೀವು ಕಟ್ಟಿನಕಾರು ಗ್ರಾಮ ಸ.ನಂ 265 ರ ಕಾರಣಿ ಮೀಸಲು ಅರಣ್ಯದಲ್ಲಿ 4 ಎಕರೆ ) ಗುಂಟೆ ಪ್ರದೇಶವನ್ನು ಒತ್ತುವರಿ ಮಾಡಿರುವ ಬಗ್ಗೆ ನಿಮ್ಮ ವಿರುದ್ಧ ಈ ಮೇಲ್ಕಂಡ ಪ್ರಕರಣವು ದಾಖಲಾಗಿದ್ದು, ಮಾನ್ಯ ಅಧಿಕೃತ ಅಧಿಕಾರಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಶರಾವತಿ ಕಣಿವೆ ಅಭಯಾರಣ್ಯ, ಕಾರ್ಗಲ್ ವನ್ಯಜೀವಿ ವಿಭಾಗ, ಶಿವಮೊಗ್ಗರವರ ಇವರ ನ್ಯಾಯಾಲಯವು ವಿಚಾರಣೆ ನಡೆಸಿ, ಉಲ್ಲೇಖ(1)ರ ನ್ಯಾಯಾಲಯದ ಆದೇಶದಂತೆ ಸದರಿ ಒತ್ತುವರಿ ಪ್ರದೇಶವನ್ನು, ಅದರಲ್ಲಿನ ಕಟ್ಟಡ, ಸಾಮಾಗ್ರಿ ಇತ್ಯಾದಿ ಎಲ್ಲಾ ರಚನೆಯನ್ನು ಸ್ವಂತ ಖರ್ಚಿನಲ್ಲಿ ಖುಲ್ಲಾ ಪಡಿಸಿ, ಸದರಿ ಭೂಮಿಯನ್ನು ಅರಣ್ಯ ಇಲಾಖೆಗೆ ಅಂದರೆ ವಲಯ ಅರಣ್ಯಾಧಿಕಾರಿ, ಕೋಗಾರು ವನ್ಯಜೀವಿ ವಲಯ ಇವರಿಗೆ ವಹಿಸಿಕೊಡಲು ಆದೇಶಿಸಿರುತ್ತದೆ. 

ಅದ್ದರಿಂದ ಸದರಿ ಒತ್ತುವರಿಯನ್ನು ನ್ಯಾಯಾಲಯದ ಆದೇಶದಂತೆ ದಿನಾಂಕ: 06/02/2026 ರಂದು ಬೆಳಗ್ಗೆ 11:00 ಗಂಟೆಗೆ ತೆರವುಗೊಳಿಸಲು ಸಮಯ ನಿಗಧಿಪಡಿಸಿದ್ದು, ಆ ಸಮಯದ ಒಳಗೆ ಈ ಮೇಲ್ಕಂಡ ಸ್ಥಳದಲ್ಲಿ ತಮಗೆ ಸೇರಿದ ಬೆಲೆಬಾಳುವ ವಸ್ತು ಹಾಗೂ ಇನ್ನಿತರ ವಸ್ತುಗಳನ್ನು ತೆಗೆದುಕೊಂಡು ಜಾಗವನ್ನು ತೆರವುಗೊಳಿಸಲು ಸಹಕರಿಸಿಸಬೇಕೆಂದು ಈ ಮೂಲಕ ತಿಳಿಸಲಾಗಿದೆ. 

ಅರಣ್ಯದಲ್ಲಿ ಮನುಷ್ಯನ ವಾಸದಿಂದ ಅರಣ್ಯ ನಾಶವಾಗಿದೆಯಾ ಅಥವಾ ರಸ್ತೆ, ಸೇತುವೆ, ಜಲಾಶಯಗಳ ನಿರ್ಮಾಣದಿಂದ ಅರಣ್ಯ ನಾಶವಾಗಿದೆಯಾ ಎಂಬುದು ಅರಿಯುವ ಅಗತ್ಯವಿದೆ.

Department notices for forest encroachments, people's representatives. becane like a Biladol Bhima Sena

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close