ಶಾಲಾ ಆವರಣದಲ್ಲಿ ಯುವಕನ ಆತ್ಮಹತ್ಯೆ: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ-Youth commits suicide on school premises: Found hanging

SUDDILIVE || HOSANAGARA

ಶಾಲಾ ಆವರಣದಲ್ಲಿ ಯುವಕನ ಆತ್ಮಹತ್ಯೆ: ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ-Youth commits suicide on school premises: Found hanging     

School, premises


ಸರ್ಕಾರಿ ಶಾಲೆಯ ಕಾರಿಡಾರ್ ನಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಸಮೀಪದ ಬೈಸೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇಂದು ಬೆಳಿಗ್ಗೆ ದುರ್ಘಟನೆ ಸಂಭವಿಸಿದೆ. 

28 ವರ್ಷದ ರಾಕೇಶ್ ಜೋಗಿ ಎಂಬ ಯುವಕ ಶಾಲೆಯ ಮುಂಭಾಗದ ಜಗುಲಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶಾಲೆಯ ಕಾರಿಡಾರ್‌ನಲ್ಲಿ ಯುವಕನೊಬ್ಬ ನೇಣು ಹಾಕಿಕೊಂಡಿರುವುದನ್ನು ಸ್ಥಳೀಯರು ಗಮನಿಸಿದ ಬಳಿಕ ವಿಷಯ ಪೊಲೀಸರಿಗೆ ತಿಳಿಸಲಾಗಿದೆ. ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Youth commits suicide on school premises: Found hanging

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close