SUDDILIVE || SHIVAMOGGA
ಜೈಲಿನಲ್ಲಿ ಹೆಚ್ಚಾದ ನಿಷೇಧಿತ ವಸ್ತುಗಳ ಹಾವಳಿ-ಸಮರ್ಪಕವಾಗಿ ಎದುರಿಸುತ್ತಿರುವ ಜೈಲಿನ ಅಧೀಕ್ಷಕ ರಂಗನಾಥ್- Increase in prohibited items in prison - Jail Superintendent Ranganath dealing with it appropriately
ಶಿವಮೊಗ್ಗದ ಕಾರಾಗೃಹದಲ್ಲಿ ರಂಗನಾಥ್ ಜೈಲಿನ ಅಧೀಕ್ಷಕರಾಗಿ ಬಂದ ನಂತರ ಸುಧಾರಣೆಯ ಪ್ರಯತ್ನ ಮುಂದುವರೆದಿದೆ. ಇದರ ಭಾಗವಾಗಿ ಜೈಲಿನಲ್ಲಿ ನಡೆಯುವ ಕಾನೂನ ಬಾಹಿರ ಚಟುವಟಿಕೆಗಳು ದೂರಾಗಿ ದಾಖಲಾಗುತ್ತಿದೆ.
ಇದರ ಮುಂದುವರೆದ ಭಾಗವಾಗಿ ಜೈಲಿನಲ್ಲಿ ಜ.30 ರಂದು ಬೀಗಮುದ್ರೆಯ ಸಮಯದಲ್ಲಿ ಭದ್ರ ವಿಭಾಗದ ಒಳ ಆವರಣದಲ್ಲಿ ಕಾರ್ಗ್ರಹದ ಹೊರಗೋಡೆಯಿಂದ ಎಸೆಯಲ್ಪಟ್ಟ ಕಪ್ಪು ಬಣ್ಣದ ಗಮ್ ಟೇಪ್ ನಿಂದ ಸುತ್ತಿರುವ ಅನುಮಾನಸ್ಪದ ವಸ್ತುವನ್ನು ವೀಕ್ಷಕರಾಗಿ ಕರ್ತವ್ಯದಲ್ಲಿದ್ದ ಪ್ರಕಾಶ್ ಹೊಸಕೋಟೆ ಅವರ ಮುಂದೆ ಬಂದು ಬಿದ್ದಿದೆ ತಕ್ಷಣವೇ ಅದನ್ನು ಜೈಲರ್ ರಂಗನಾಥ್ ಅವರ ಗಮನಕ್ಕೆ ತರಲಾಗಿದೆ.
ಇದನ್ನು ಮುಖ್ಯ ಅಧೀಕ್ಷಕರ ಕಚೇರಿಯಲ್ಲಿ ಕೆ ಎಸ್ ಐ ಎಸ್ ಎಫ್ ಸಬ್ ಇನ್ಸ್ಪೆಕ್ಟರ್ ವೀರೇಂದ್ರ ಪಿ ಮೋಹನ್ ಕುಮಾರ್ ಸಂಸ್ಥೆಯ ಕಾರ್ಯನಿರ್ವಾಹಕ ಜೈಲರ್ ಎಸ್ ಎಸ್ ಕಟ್ಟಿಮನಿ ಕಾರ್ಯನಿರ್ವಾಹಕ ಜೈಲರ್ ಸಿದ್ದಪ್ಪ ಟೀ ಕುರಿ ರವರ ಸಮಕ್ಷಮದಲ್ಲಿ ಅಪರಿಚಿತರು ಎಸೆದಿರುವ ಬಾಕ್ಸ್ ಅನ್ನು ತೆರೆಯಲಾಗಿದೆ ಬಾಕ್ಸ್ ನಲ್ಲಿ ಒಂದು ನೀಲಿ ಬಣ್ಣದ ಆಂಡ್ರಾಯ್ಡ್ ಪೋಕೋ ಫೋನ್ ಎರಡು ಸಿಮ್ ಗಳು ಮೂರು ಕಟ್ಟು 93 ಬ್ರಾಂಡ್ ಬಿಡಿಗಳು ಕ್ಲಾಸಿಕ್ ಕನೆಕ್ಟ್ ಸಿಗರೇಟ್ ಪ್ಯಾಕ್ ಗಳು 2, ಒಂದು ಪ್ಯಾಕ್ ಕಿಂಗ ಸೈಜ್ ಲೈಟ್ ಸಿಗರೇಟ್ ಪ್ಯಾಕ್ ಒಂದು ಚಾರ್ಜರ್ ಪ್ಯಾಕ್ ಪತ್ತೆಯಾಗಿದೆ.
ನಿನ್ನೆ ಸಹ ಇದೇ ರೀತಿ 400 ಗ್ರಾಂ ಗಾಂಜಾವನ್ನ ಕಪ್ಪು ಪಟ್ಟಿಯಲ್ಲಿ ಸುತ್ತಿರುವ ಪಾಕೆಟ್ ನಲ್ಲಿ ಪತ್ತೆಯಾಗಿದೆ. ಹೀಗೆ ಜೈಲಿನಲ್ಲಿ ಸುಧಾರಣೆಗಾಗಿ ಬರುವವರು ಹಾವಳಿಯಿಡುತ್ತಿದ್ದು, ಸಮರ್ಪಕವಾಗಿ ಜೈಲರ್ ರಂಗನಾಥ್ ಎದುರಿಸುತ್ತಿದ್ದಾರೆ. ಇವೆಲ್ಲವೂ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Increase in prohibited items in prison - Jail Superintendent Ranganath dealing with it appropriately
