SUDDILIVE || SHIVAMOGGA
ಊರಗಡೂರಿನ ಸೂಡಾ ನಿವೇಶನಗಳ ಕಾಮಗಾರಿಯಲ್ಲಿ ಭ್ರಷ್ಠಾಚಾರ-ಗುತ್ತಿಗೆದಾರರಿಂದ ಲೋಕಾಯುಕ್ತಕ್ಕೆ ಅಫಿಡೆವಿಟ್-ಕೆಬಿಪಿ- Corruption in the construction of Sooda sites in - Affidavit from the contractor to the Lokayukta - KBP
ಅನಾದಿಕಾಲದಿಂದ ನಿವೇಶನ ಇಲ್ಲದವರಿಗೆ ಕಡಿಮೆ ದರದಲ್ಲಿ ಸ್ವಂತ ಮನೆ ನಿರ್ಮಿಸಲು ರಾಜ್ಯ ಸರ್ಕಾರ ಕರ್ನಾಟಕ ಗೃಹ ಮಂಡಳಿ, ಆಶ್ರಯ, ನಗರಾಭಿವೃಧ್ದಿ ಪ್ರಾಧಿಕಾರ(ಸೂಡ) ಮೊದಲಾದ ಸಂಸ್ಥೆಗಳಿಂದ ಮನೆ ನಿರ್ಮಿಸಿ ಸರ್ಕಾರ ಕೊಡುತ್ತಿದೆ. ಆದರೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡ) ರಿಯಲ್ ಎಸ್ಟೇಟ್ ದಂಧೆಗಳ ಅಡ್ಡವಾಗಿದೆ. ಕಾಮಗಾರಿಯಲ್ಲಿ ಭ್ರಷ್ಠಾಚಾರ ನಡೆದಿದೆ ಎಂದು ಮಾಜಿ ಶಾಸಕ ಕೆ.ಬಿ ಪ್ರಸನ್ನ ಕುಮಾರ್ ಆರೋಪಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೂಡಾದಲ್ಲಿ ಭಯಾನಕ ಸತ್ಯಗಳು ಹೊರಬಿದ್ದಿದೆ. ಹೆಚ್ ಎಸ್ ಸುಂದರೇಶ್ 2023 ರಲ್ಲಿ ಸೂಡ ಅಧ್ಯಕ್ಷರಾದ ನಂತರ ಅನೇಕ ಕಾಮಗಾರಿ ನಡೆದಿದೆ. ಇದರಲ್ಲಿ 13 ಕಾಮಗಾರಿಗಳು 40 ಕೋಟಿ ಕಾಮಗಾರಿಯಾಗಿದೆ. ಅದರಲ್ಲಿ 30 ಕೋಟಿ ಪೇಮೆಂಟ್ ಆಗಿದೆ. ಇದರಲ್ಲಿ 8-10 ಕೋಟಿ ಬೋಗಸ್ ಬಿಲ್ ಆಗಿದೆ ಎಂದು ದೂರಿದರು.
ಇದನ್ನ ಅಲ್ಲಿಯೇ ಕೆಲಸ ಮಾಡುವ ಗುತ್ತಿಗೆದಾರರು ಅಫಿಡೆವಿಟ್ ನ್ನ ಲೋಕಾಯುಕ್ತಕ್ಕೆ ಸಲ್ಲಿಸಿದ್ದಾರೆ. ಗುರುಸಾಯಿ ಮತ್ತು ಬಸವರಾಜ್ ಇಬ್ಬರು ಗುತ್ತಿಗೆದಾರರು ಕೇವಲ 13 ಕಾಮಗಾರಿ ಬಗ್ಗೆ ಸಂಪೂರ್ಣವಾಗಿ ಇಂಚು ಇಂಚಲ್ಲೂ ಕಾಮಗಾರಿಗಳಲ್ಲಿ ಲೋಪ ಆಗಿರುವ ಬಗ್ಗೆ ಮೊದಲು ಆಯುಕ್ತರಿಗೆ ದೂರು ನೀಡಿದ್ದರು. ನಂತರ ಪಿಡಬ್ಲೂಡಿ ಎಕ್ಸಿಕ್ಯೂಟಿವ್, ಜಿಲ್ಲಾಧಿಕಾರಿ ಕಚೇರಿಯ ಪ್ರಾಧಿಕಾರದ ಮೇಲ್ವಿಚರಿಕರಿಗೆ, ಪಿಡಬ್ಲೂಡಿ ಚೀಫ್ ಇಂಜಿನಿಯರ್ ಗಮನಕ್ಕೆ ತಂದರೂ ಸಹ ಪ್ರಯಾಜನವಾಗಿಲ್ಲ ಎಂದು ಹೇಳಿದರು.
ಇವರು 16/7/2025 ರಂದು ಲೋಕಾಯುಕ್ತಕ್ಕೆ ಪ್ರಾಧಿಕಾರದ ಆಯುಕ್ತರು, ವಿಶ್ವನಾಥ ಪಿ ಮುತ್ತಜ್ಜ, ನದಾಫ್, ಬಸವರಾಜಪ್ಪ ಎಂ,ಆರ್ ಎಇಇ, ವೀರಗಂಗಾದರ ಸ್ವಾಮಿ, ಜೆಇ ದಿನೇಶ್ ವಿರುದ್ಧ ದೂರು ನೀಡಲಾಗಿದೆ. ದೂರು ದಾರರು ನೀಡಿದ ನಂತರ ಬೆದರಿಕೆ ಡೀಲ್ ಎಲ್ಲವೂ ನಡೆದಿದೆ. ಗುತ್ತಿಗೆದಾರ ಇವೆಲ್ಲವನ್ನೂ ತಿರಸ್ಕರಿಸಿದ್ದಾರೆ. ಸೂಡಾದಲ್ಲಿ ಪರ್ಸೆಂಟೇಜ್ ಮಿಗಿಲು ಮೀರಿದೆ. ಜೆಇ ದಿನೇಶ್ ಪಾತ್ರ ದೊಡ್ಡದಾಗಿತ್ತು. ದಾವಣಗೆರೆಯಿಂದ ಕರೆಯಿಸಿ ಕೆಲಸ ಮಾಡಿದ್ದಾರೆ.
ಅಟಲ್ ಬಿಹಾರಿ ವಾಜಪೇಯಿ ಬಡಾವಣೆಯಲ್ಲಿ ಪಾರ್ಕ್ ನಲ್ಲಿ ಕರ್ಬ್ ಸ್ಟೋನ್ ಹಾಕಬೇಕಿದೆ. 1441 ಮೀಟರ್ ಹಾಕಬೇಕಿದ್ದ ಜಾಗದಲ್ಲಿ 518 ಮೀಟರ್ ಹಾಕಲಾಗಿದೆ. 920 ಮೀಟರ್ ಸ್ಟೋನ್ ಹಾಕಿರುವುದನ್ನ ತೋರಿಸಿ ಹಣ ಪ್ರಾಡ್ ಆಗಿದೆ. ಬಿಲ್ ಪೂರ್ಣ ಪ್ರಮಾಣದಲ್ಲಿ ಕ್ಲೈಮ್ ಮಾಡಲಾಗಿದೆ. ಯಾವ ಸಂಸ್ಥೆಗಳಿಂದ ನಾಗರೀಕರಿಗೆ ಅನುಕೂಲವಾಗಬೇಕಿತ್ತು. ಅದು ಸಾರ್ಥಕವಾಗಿಲ್ಲ. ಊರಗಡೂರಿನ ರಸ್ತೆಯನ್ನ ನೋಡಬೇಕಿದೆ. ರಸ್ತೆಗೆ ಮಣ್ಣನ್ನ ಅದೇ ಲೇ ಔಟ್ ನಿಂದ ಮಣ್ಣು ತೆಗೆದು ರಸ್ತೆಗೆ ಬಳಸಲಾಗಿದೆ.
ಸಿಎ ಸೈಟ್ ನಲ್ಲಿ ಗುಂಡಿ ತೆಗೆದು ರಸ್ತೆಗೆ ಮಣ್ಣು ತೆಗೆಯಲಾಗಿದೆ. ರಸ್ತೆಗೆ ಬಳಸಿದ ಮಣ್ಣಿಗೆ ಪ್ರತ್ಯೇಕ ಹಣ ನೀಡಿದರೂ ಸೈಟ್ ನಿಂದ ಮಣ್ಣು ತೆಗೆಯಲಾಗಿದೆ. ಈ ರೀತಿಯ ಅವ್ಯವಹಾರ ನಡೆದಿದೆ. ನೂತನ ಜಿಲ್ಲಾಧಿಕಾರಿಗಳು 13 ಕಾಮಗಾರಿಗಳಷ್ಟೆ ಅಲ್ಲ. ಸುಂದರೇಶ್ ಅಧ್ಯಕ್ಷರಾದಾಗಿನಿಂದ ಇದುವರೆಗೆ ನಡೆದ ಕಾಮಗಾರಿ ತನಿಖೆ ನಡೆಸಬೇಕು. ದುರ್ಬಳಕೆಯಾದ ಹಣವನ್ನ ಪ್ರಾಧಿಕಾರಕ್ಕೆ ಕಟ್ಟಿಸಬೇಕೆಂದರು.
ಪ್ರಾಧಿಕಾರದ ಕಚೇರಿಯನ್ನ ನವೀಕರಣ ಮಾಡಲಾಗಿದೆ 1 ಕೋಟಿ ಹಣ ವ್ಯಚ್ಚ ಆಗಿದೆ. ಅಡಿಷನಲ್ ವರ್ಕ್ ಗೆ 18.45 ಲಕ್ಷ ಹಣಕ್ಕೆ ಪತ್ರಬರೆಯಲಾಗಿದೆ ಇದೆಲ್ಲಾ ಬಹಿರಂಗವಾದಾಗ ತಡೆಹಿಡಿಯಲಾಗಿದೆ. ನಿವೇಶನ ಹಂಚಿ ಇನ್ನೇನಾಗಲಿದೆ ಕಾದು ನೋಡಬೇಕಿದೆ ಎಂದರು.
Corruption in the construction of Sooda sites in Uragadur


