SUDDILIVE || SHIVAMOGGA
ಸೂಡದಿಂದ ನಡೆದಿರುವ 91 ಕಾಮಗಾರಿಗಳ ಬಗ್ಗೆ ತನಿಖೆಗೆ ಜೆಡಿಎಸ್ ಒತ್ತಾಯ- JDS demands investigation into 91 works carried out by Suda
ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಸೃಜನ ಪಕ್ಷಪಾತದಿಂದಾಗಿ ಸಾರ್ವಜನಿಕ ಸಂಪನ್ಮೂಲ ಲೂಟಿ ಯಾಗಿರುವ ಕುರಿತು ಸೂಕ್ತ ಹಾಗೂ ನಿಷ್ಪಕ್ಷಪಾತವಾದ ತನಿಖೆ ನಡೆಸಬೇಕೆಂದು ಆಗ್ರಹಿಸಿ ಇಂದು ಜಾತ್ಯತೀತ ನಗರ ಜನತಾದಳ ಕೆಬಿ ಪ್ರಸನ್ನ ಕುಮಾರ್ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಶಿವಮೊಗ್ಗ ಮತ್ತು ಭದ್ರಾವತಿ ನಗರಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸಬೇಕಾದ ಭದ್ರಾವತಿ ಶಿವಮೊಗ್ಗ ನಗರ ಅಭಿವೃದ್ಧಿ ಪ್ರಾಧಿಕಾರದ ಆಡಳಿತ ವ್ಯವಸ್ಥೆಯು ಭ್ರಷ್ಟಾಚಾರ ಸ್ವಜನ ಪಕ್ಷಪಾತ ಹಾಗೂ ಅಕ್ರಮ ವ್ಯವಹಾರಗಳಲ್ಲಿ ತೊಡಗಿದ್ದು 2023 ರಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಅಂದಿನಿಂದ ಇಂದಿನವರೆಗೆ ಪ್ರಾಧಿಕಾರದ ಕಾಮಗಾರಿಗಳ ಕುರಿತು ನಿಷ್ಪಕ್ಷವಾದ ತನಿಖೆ ನಡೆಸಬೇಕೆಂದು ಪಕ್ಷವು ಮನವಿಯಲ್ಲಿ ಒತ್ತಾಯಿಸಿದೆ.
ಇಂದೇ ಪ್ರಾಧಿಕಾರವೇ ನಿರ್ಮಿಸಿರುವ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆ ಸಂದರ್ಭದಲ್ಲಿ ಅಕ್ರಮಗಳು ನಡೆದಿದ್ದು ಅಂದಿನ ಜಿಲ್ಲಾಧಿಕಾರಿಗಳಿಂದ ತನಿಖೆ ನಡೆದಿದ್ದು ನಿವೃತ್ತ ನ್ಯಾಯಮೂರ್ತಿ ರವೀಂದ್ರನಾಥ್ ರವರು ನಿವೇಶನ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರ ಸ್ವಜನ ಪಕ್ಷಪಾತ ದ ಕುರಿತು ವರದಿ ನೀಡಿದ್ದರು. ಲೋಕಾಯುಕ್ತದ ತನಿಕೆಯೂ ನಡೆದಿತ್ತು ಇದೆಲ್ಲದರಿಂದಾಗಿ ಅರ್ಹ ನಿವೇಶನದಾರರಿಗೆ ನಿವೇಶನ ಪಡೆದುಕೊಳ್ಳಲು ಇದ್ದ ತೊಂದರೆಯೂ ನಿವಾರಣೆ ಆಗಿತ್ತು. ಈಗ ವಾಜಪೇಯಿ ಬಡಾವಣೆ ಊರುಗಡೂರು ಬಡಾವಣೆ ಸೇರಿದಂತೆ ಪ್ರಾಧಿಕಾರ ನಿರ್ಮಿಸುತ್ತಿರುವ ಬಡಾವಣೆಗಳ ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದು ಮುಂದೆ ಅಲ್ಲಿ ನಿವೇಶನ ಪಡೆಯುವ ನಾಗರಿಕರಿಗೆ ತೊಂದರೆಯಾಗಲಿದೆ ಬಡಾವಣೆಗಳ ರಸ್ತೆ ನಿರ್ಮಾಣಕ್ಕೆ ನಿವೇಶನದ ಜಾಗದಿಂದ ಮಣ್ಣು ತೆಗೆದು ಬಳಸುತ್ತಿರುವುದು ಮತ್ತು ಮಣ್ಣು ತೆಗೆದ ನಿವೇಶನದ ಗುಂಡಿಗಳಿಗೆ ನಗರದ ಕಸ ತಂದು ತುಂಬುವ ಕೆಲಸ ನಡೆಯುತ್ತಿರುವ ಆಘಾತಕಾರಿ ಅಂಶವು ಕೂಡ ಬೆಳಕಿಗೆ ಬಂದಿದೆ
ವಾಜಪೇಯಿ ಬಡಾವಣೆ ಹಾಗೂ ಊರ್ಗದೂರು ಬಡಾವಣೆ ಸೇರಿದಂತೆ ಪ್ರಾಧಿಕಾರದಿಂದ ನಿರ್ಮಾಣಗೊಂಡಿರುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳಾದ ರಸ್ತೆ ಬಾಕ್ಸ್ ಚರಂಡಿ ಮೋರಿಗಳು ಪಾರ್ಕ್ಗಳ ನಿರ್ಮಾಣದ ಟೆಂಡರ್ ಪ್ರಕ್ರಿಯೆಯಲ್ಲಿ ಭಾರಿಮಟ್ಟದ ಭ್ರಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ ಕಾಮಗಾರಿ ನಡೆಸುವ ಸಂದರ್ಭದಲ್ಲಿ ಎಲ್ಲಾ ಅವ್ಯವಹಾರಗಳ ವಿರುದ್ಧ ಗುತ್ತಿಗೆದಾರರಾದ ಗುರು ಸಾಯಿ ಹಾಗೂ ಬಸವರಾಜ್ ಎಂಬುವರು ಪ್ರಾಧಿಕಾರದ 13 ಕಾಮಗಾರಿಗಳನ್ನು ಗುರುತಿಸಿ ಲೋಕಾಯುಕ್ತರಲ್ಲಿ ದೂರು ಸಲ್ಲಿಸಿದ್ದಾರೆ ಗುತ್ತಿಗೆದಾರರು ಲೋಕಾಯುಕ್ತರಿಗೆ ಸಲ್ಲಿಸಿರುವ ದೂರಿನಲ್ಲಿ ಗುರುತರವಾದ ಆರೋಪಗಳಿದ್ದು ಜೊತೆಗೆ ಸಲ್ಲಿಸಿರುವ ಸಾಕ್ಷಾಧಾರಗಳಿಂದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿದೆ.
2023 ರಿಂದ ಇಲ್ಲಿಯವರೆಗೂ ಕೈಗೊಳ್ಳಲಾಗಿರುವ 91 ಭದ್ರಾವತಿ ಶಿವಮೊಗ್ಗ ನಗರ ಅಭಿವೃದ್ಧಿ ಪ್ರಾಧಿಕಾರದ ಕಾಮಗಾರಿಗಳಲ್ಲಿಯೂ ವ್ಯಾಪಕ ಮೋಸ ಅವ್ಯವಾರ ಭ್ರಷ್ಟಾಚಾರ ಸೃಜನ ಪಕ್ಷಪಾತ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅನುಮಾನ ಮೂಡಿಸುತ್ತಿದೆ ಎರಡು ಬಡಾವಣೆಗಳಲ್ಲಿ ನಡೆದಿರುವ 13 ಕಾಮಗಾರಿಗಳು ಸೇರಿದಂತೆ 2023 ರಿಂದ 2026 ಫೆಬ್ರವರಿವರೆಗೂ ನಡೆದಿರುವ 91 ಕಾಮಗಾರಿಗಳಲ್ಲೂ ಸಹ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆಯನ್ನು ಕೊಡಿಸಿ ದುರುಪಯೋಗವಾದ ಹಣವನ್ನು ತಪ್ಪಿತಸ್ಥರಿಂದ ಪ್ರಾಧಿಕಾರಕ್ಕೆ ಮರುಪಾವತಿಸುವಂತೆ ಕ್ರಮಕೈಗೊಳ್ಳಬೇಕೆಂದು ಜೆಡಿಎಸ್ ಪಕ್ಷ ಸಾರ್ವಜನಿಕ ಹಿತದೃಷ್ಟಿಯಿಂದ ಡಿಸಿ ಅವರಿಗೆ ಮನವಿಯಲ್ಲಿ ಆಗ್ರಹಿಸಿದೆ.
JDS demands investigation into 91 works carried out by Suda
