SUDDILIVE || SHIVAMOGGA
ಕೋಟೆ ಆಂಜನೇಯ ಸ್ವಾಮಿಯ ಬ್ರಹ್ಮರಥೋತ್ಸವ-Kote Anjaneya Swamy's Brahmarathotsava
ಶಿವಮೊಗ್ಗದ ಧಾರ್ಮಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿರುವ, ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಸೀತಾರಾಮಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮಾಘ ಶುದ್ಧ ಹುಣ್ಣಿಮೆಯ ಪವಿತ್ರ ದಿನದಂದು ಜರುಗಿದ ಭವ್ಯ ಬ್ರಹ್ಮ ರಥೋತ್ಸವ ಕಾರ್ಯಕ್ರಮ ನಡೆದಿದೆ.
ಸಹಸ್ರಾರು ಭಕ್ತರ ಸಮ್ಮುಖದಲ್ಲಿ, ವೇದಘೋಷಗಳ ನಡುವೆ ಅದ್ದೂರಿಯಾಗಿ ರಥವನ್ನ ಎಳೆಯಲಾಗಿದೆ. ಈ ರಥೋತ್ಸವವು ನಮ್ಮ ಮಲೆನಾಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸಿದೆ.
ಇದೇ ವೇಳೆ ಶಾಸಕ ಚೆನ್ನಬಸಪ್ಪ ರಥೋತ್ಸವದಲ್ಲಿ ಭಾಗಿಯಾಗಿದ್ದರು. ವಾಯು ದೇವರ ಕೃಪಾಶೀರ್ವಾದ ಕ್ಕೆ ಪಾತ್ರರಾಗಿದ್ದಾರೆ. ಸೀತಾರಾಮಚಂದ್ರನ ಅನುಗ್ರಹದಿಂದ ನಮ್ಮ ಶಿವಮೊಗ್ಗ ಜಿಲ್ಲೆ ಹಾಗೂ ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಸಿಗಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿದ್ದಾರೆ.
ನಮ್ಮ ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ಇಂತಹ ಧಾರ್ಮಿಕ ಉತ್ಸವಗಳು ಸಮಾಜದಲ್ಲಿ ಐಕ್ಯತೆಯನ್ನು ಮೂಡಿಸುತ್ತವೆ ಎಂದು ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Kote Anjaneya Swamy's Brahmarathotsava
