SUDDILIVE || SHIVAMOGGA
ಇಡಿ ಐಟಿ ಮೂಲಕ ಬಿಜೆಪಿಗೆ ಫಂಡಿಂಗ್-ದಿನೇಶ್ ಗುಂಡೂರಾವ್ ಗಂಭೀರ ಆರೋಪ- ED funds BJP through IT - Dinesh Gundu Rao makes serious allegations
ಇಡಿ ಮತ್ತು ಐಟಿ ದಾಳಿ ಮೂಲಕ ಬಿಜೆಪಿಗೆ ಫಂಡಿಂಗ್ ಆಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಗಂಭೀರ ಆರೋಪ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಸಚಿವರು, ಇಡಿ ಐಟಿಗಳ ಮೂಲಕ ದಾಳಿ ನಡೆಸುವ ಹಿಂದೆ ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ ಇದೆ. ತನಿಖಾ ಇಲಾಖೆಗಳ ಮೂಲಕ ಬೆದರಿಸಿ ಫಂಡ್ ಸಂಗ್ರಹಿಸಲಾಗುತ್ತದೆ. ಇದರ ಮೂಲಕ ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ ಎಂದರು.
ಕಾಫಿ ಡೇ ಸಿದ್ದಾರ್ಥ್ ಆತ್ಮಹತ್ಯೆ ಮತ್ತು ಸಿಜೆ ರಾಯ್ ಆತ್ಮಹತ್ಯೆಯ ಹಿಂದೆ ಐಟಿ ದಾಳಿಯ ಭಯವಿದೆ. ಇವರು ಯಾರೂ ಕಾಂಗ್ರೆಸ್ ಪಕ್ಷದವರಲ್ಲ. ಹಾಗಾಗಿ ಎಸ್ಐಟಿಯಿಂದ ತನಿಖೆ ನಡೆಸಲಾಗುತ್ತಿದೆ. ಇದನ್ನ ಯಾವುದೇ ಇನ್ ಸ್ಪೆಕ್ಟರ್ ಮೂಲಕ ತನಿಖೆ ನಡೆಸಲು ಆಗೋದಿಲ್ಲ ಎಂದರು.
ಎಸ್ಐಟಿ ರಚನೆಯನ್ನ ಸಮರ್ಥಿಸಿಕೊಂಡ ಆರೋಗ್ಯ ಸಚಿವರು ಸಾಮಾನ್ಯ ಜನರಲ್ಲೂ ಐಟಿ ಮತ್ತು ಇಡಿ ದಾಳಿ ಬಗ್ಗೆ ಭಯವಿದೆ. ಹಾಗಾಗಿ ತನಿಖೆ ನಡೆಸಬೇಕಿದೆ ಎಂದ ಸಚಿವರು ಮಲೆನಾಡಭಾಗದಲ್ಲಿ ಕೆಎಫ್ ಡಿ ಗೆ ಒಂದು ಬಲಿಯಾಗಿದ್ದಾರೆ. ಈ ಕಾಯಿಲೆ ಬಗ್ಗೆ ಎಸ್ ಒಪಿಯನ್ನ ಹೊರಡಿಸಿ ಯಾವ ಒಬ್ಬನೂ ಸಾಯ ಬಾರದು ಎಂದು ಆದೇಶಿಸಲಾಗಿದೆ.
ಈ ನಡುವೆ ಒಬ್ಬನ ಸಾವಾಗಿದೆ. ಮುಂದಿನ ದಿನಗಳಲ್ಲಿ ಇದು ಆಗದಂತೆ ನೋಡಿಕೊಳ್ಳುವ ಎಚ್ಚರಿಕೆ ವಹಿಸಲು ಸೂಚಿಸಿರುವೆ. ವ್ಯಾಕ್ಸಿನ್ ಲಭ್ಯತೆಯೂ ಮುಂದಿನ ದಿನಗಳಲ್ಲಿ ಸಿಗುವ ಸಾಧಗಯತೆಯಿದೆ. ಇದಕ್ಕೆ ದಿನ ಫಿಕ್ಸ್ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ಮುಂದಿನ ವರ್ಷ ಲಸಿಕೆ ಸಿಗುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
ED funds BJP through IT - Dinesh Gundu Rao makes serious allegations
