ಅಚ್ಚರಿ ಮೂಡಿಸಿದ ಸಂಸದರ ಸುದ್ದಿಗೋಷ್ಠಿ- MPs' surprising press conference

 SUDDILIVE || SHIVAMOGGA

ಅಚ್ಚರಿ ಮೂಡಿಸಿದ ಸಂಸದರ ಸುದ್ದಿಗೋಷ್ಠಿ- MPs' surprising press conference   

MP, pressmeet


ಸ್ಕಿಲ್ ಇಂಡಿಯಾ ಯೋಜನೆಯಲ್ಲಿ ಹಗರಣ ನಡೆದಿರುವುದನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಒಪ್ಪಿಕೊಂಡರೂ ಶಿವಮೊಗ್ಗದ ಸಂಸದರು ಮಾಹಿತಿ ಇಲ್ಲದೆ ಸುದ್ದಿಗೋಷ್ಠಿ ನಡೆಸಿರುವುದು ಅಚ್ಚರಿ ಮೂಡಿಸಿದೆ. 

ಒಂದು ವಾರದ ಹಿಂದಿನ ಬಜೆಟ್ ನ್ನ ಇಂದು ಸುದ್ದಿಗೋಷ್ಠಿ ನಡೆಸಿದ ಸಂಸದರಿಗೆ ಸ್ಕಿಲ್ ಇಂಡಿಯಾದ ಬಗ್ಗೆ ಸಿಎನ್ ಜಿ ವರದಿಯು 12 ಸಾವಿರ ಕೋಟಿ ಹಣ ಹಗರಣ ನಡೆದಿದೆ ಎಂದು ವರದಿ ನೀಡಿದ್ದು ಮಾಹಿತಿ ಇಲ್ಲವೆಂದು ಹೇಳುವ ಮೂಲಕ ಮಾಹಿತಿ ಇಲ್ಲದೆ ಸುದ್ದಿಗೋಷ್ಠಿ ನಡೆಸಿದ್ದಾರೆ. 

ಇಂತಹ ದುರಂತ ಹೊರತುಪಡಿಸಿ ಸಂಸದರು ಬಜೆಟ್ ನಲ್ಲಿ ರಾಜ್ಯಕ್ಕೆ ಚೊಂಬು ಎಂದಿರುವ ರಾಜ್ಯ ಸರ್ಕಾರದ ಬಗ್ಗೆನೋ ಅಥವಾ ಚೊಂಬು ಅಲ್ಲ ಯಾವುದೋ ಒಂದು ಯೋಜನೆ ಬಂದಿದೆ ಎಂದು ಹೇಳಲು ಸುದ್ದಿಗೋಷ್ಠಿ ನಡೆಸಲಾಗಿದೆ ಎಂಬ ಅನುಮಾನವೂ ಮೂಡಿಸಿದೆ. 

ಸೀಪ್ಲಾನ್ ಮೂಲಕ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು.  ಬಜೆಟ್ ನಲ್ಲಿ ಘೋಷಿಸಿರುವ ಸೀಪ್ಲಾನ್ ಸಿಗಂದೂರಿನಿಂದ ಆರಂಭವಾಗಲಿದೆ. ಅದಕ್ಕೆ   ಅನುಮೋದನೆ ನೀಡಲಾಗುವುದು ಎಂದು  ಹೇಳಿದರು. 

ಒಟ್ಟು ಬಜೆಟ್ ನಲ್ಲಿ ಮೂಲಭೂತ ಸೌಕರ್ಯಕ್ಕೆ ಹಣ ಇಡಲಾಗಿದೆ. ಯುಪಿಎ ಸರ್ಕಾರದ 6-7 ಪಟ್ಟು ಹೆಚ್ಚು ಇಡಲಾಗಿದೆ.  ಆರ್ಥಿಕವಾಗಿ ಬೆಳೆಯುತ್ತಿದೆ. ಬಯೋ ಫಾರ್ಮಸಿ ಮತ್ತು ವೈದ್ಯಕೀಯ ಪ್ರವಾಸಕ್ಕೆ ಒತ್ತು ನೀಡಲಾಗಿದೆ. ಐದು ಪ್ರಾದೇಶಿಕ ವೈದ್ಯಕೀಯ ಯುನಿಟ್ ಮಾಡಲು 10 ಸಾವಿರ ಕೋಟಿ ಹಣ ತೆಗೆದಿಡಲಾಗಿದೆ ಮಂಗಳೂರನ್ನ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.

ಕ್ಯಾನ್ಸರ್ ಜನರನ್ನ ಕಂಗೆಡಿಸಿದೆ. ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧ ಪಟ್ಟ 17 ಅಂಶಗಳಿಗೆ ರಿಯಾಯ್ತಿಗೆ ಕೊಡಲಾಗಿದೆ. ಆಯುರ್ವೇದಿಕ್ ಗೆ ಹೆಚ್ಚಿನ ಒತ್ತನ್ನ ನೀಡಲಾಗಿದೆ. ಮಹಿಳಾ ಸಬಲೀಕರಣಕ್ಕೆ ವಿಶೇಷ ಒತ್ತುನೀಡಲಾಗಿದೆ ಶೀ ಮಾರ್ಟ್ ನ್ನ ಬಜೆಟ್ ನಲ್ಲಿ ಘೋಷಿಸಲಾಗಿದೆ. 

ಪ್ರಧಾನಿ ಖುರ್ಚಿ ಬಳಿ ಪ್ರತಿಭಟನೆ ಖಂಡನೀಯ, ವಂದನ ನಿರ್ಣಯದ ಮೇಲೆ ಪ್ರಧಾನಿ ಮಾತನಾಡಲಿದ್ದರು. ವಿಪಕ್ಷ ನಾಯಕರ ವಿಚಾರ ಬೇರೆಯಿತ್ತು. ನರವಾನಿ ಅವರ ಪುಸ್ತಕವನ್ನ‌ ಪಬ್ಲಿಶ್ ಮಾಡಿ ಭಾರತ ಮತ್ತು ಚೈನದ ನಡುವಿನ ಸಂಬಂಧ ಹಾಳಾಗಿಸಲು ರಾಹುಲ್ ಗಾಂಧಿ ಬಯಸಿದ್ದರಾ ಎಂಬ ಅನುಮಾನ ಹುಟ್ಟಿದೆ. 

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಧಾನಿ ಹೆಸರು ಹಾಳುಮಾಡಲಾಗಿತ್ತು. ಮಹಿಳಾ ಸಂಸದರು ಪ್ರಧಾನಿ ಅವರ ಕುರ್ಚಿ ಬಳಿ ಬಂದು ಫ್ಲೆಕ್ಸ್ ತೋರಿಸಿ ದಾರ್ಷನಿಕವಾಗಿ ವರ್ತಿಸಲಿಲ್ಲ. ಪ್ರಧಾನಿ ವೀಕ್ ಎಂದಿರುವ ಬಿಕೆ ಹರಿಪ್ರಸಾದ್ ಅವರ ಹೇಳಿಕೆಗೆ ತಿರುಗೇಟು ನೀಡಿದ ಸಂಸದರು ಇವರಿಂದ ಪಾಠ ಕಲಿಯಬೇಕಿಲ್ಲ ಎಂದರು. 

ರಾಜ್ಯ ಸರ್ಕಾರ ಮುಂದೆ ಸಾಗುವ ಯೋಚನೆಯಿಲ್ಲ. ವಿಬಿಜಿ ರಾಮ್ ಜಿಯಲ್ಲಿ 40% ಹಣ ವಿನಿಯೋಗಿಸಬೇಕಿದೆ. ದುಡಿಯುತ್ತಿದ್ದ ಮನೆಯ ಹಿರಿಯನ ಜೇಬು ಖಾಲಿಯಾದಾಗ ಆತನ ಮನಸ್ಥಿತಿ ಹೇಗಿರುತ್ತೆ ಅದೇ ರೀತಿ ಈ ಸರ್ಕಾರ ನಡೆಸುವರನ್ನ ನೋಡಿದರೆ ಗೊತ್ತಾಗುತ್ತದೆ ಎಂದರು.  

MPs' surprising press conference

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close