ರಾಜ್ಯದಲ್ಲಿ ಸರ್ಕಾರವೇ ಇಲವಾಗಿದೆ ಎಂದ್ರುಮಾಜಿ ಡಿಸಿಎಂ, ನಾಟಿಕೋಳಿ ತಿನ್ನುವುದರಲ್ಲಿ ಬ್ಯುಸಿ ಇದ್ದಾರೆ ಸಿಎಂ ಡಿಸಿಎಂ ಎಂದ ಪುತ್ರ ಕಾಂತೇಶ್- son Kantesh says ministers are busy eating nati chickens

 SUDDILIVE || SHIVAMOGGA

ರಾಜ್ಯದಲ್ಲಿ ಸರ್ಕಾರವೇ ಇಲವಾಗಿದೆ ಎಂದ್ರುಮಾಜಿ ಡಿಸಿಎಂ, ನಾಟಿಕೋಳಿ ತಿನ್ನುವುದರಲ್ಲಿ ಬ್ಯುಸಿ ಇದ್ದಾರೆ ಸಿಎಂ ಡಿಸಿಎಂ ಎಂದ ಪುತ್ರ ಕಾಂತೇಶ್-The state is in a state of disarray, says former DCM, Kantesh says ministers are busy eating nati chickens

Nati, koli


ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಹೈಕೋರ್ಟ್ ತಿಳಿಸಿದರೂ ಸಿಎಂ ಡಿಸಿಎಂ ನಾಟಿಕೋಳಿ ಸೇವನೆಯಲ್ಲಿ ಮುಳುಗಿದ್ದಾರೆ ಎಂದ ಕಾಂತೇಶ್ ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಕೆಂಡ್ ಲೈನ್ ಲೀಡರ್ ಗಳು ಸ್ಟೀಮ್ ಲೈನ್ ಗೆ ಬಂದು ಶಾಸಕರ ಸ್ಥಾನಕ್ಕೆ ಆಕಾಂಕ್ಷಿಗಳಾಗುವ ಭಯದಿಂದ ಚುನಾವಣೆ ನಡೆಸಲು ಮುಂದಾಗಿರಲಿಲ್ಲ. ಸರ್ಕಾರದಿಂದ ಮತ್ತು ಚುನಾವಣೆ ಆಯೋಗದಿಂದ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಜ.20 ರಂದು ಹೈಕೋರ್ಟ್ ಮೆಟ್ಟಿಲು ಏರಲಾಗಿತ್ತು. 

ರಿಟ್ ಪಿಟಿಷನ್ ಗೆ ಜಯಸಿಕ್ಕಿದೆ ಏ.21 ರ ಒಳಗೆ ಆಯೋಗ ಉತ್ತರಿಸಲು ತಿಳಿಸಿದೆ. ಇದು ರಾಷ್ಟ್ರಭಕ್ತರ ಬಳಗಕ್ಕೆ ಸಿಕ್ಕ ಜಯವಾಗಿದೆ. ಪಾಲಿಕೆ ತಕ್ಷಣ ನಡೆಸಿ. ಭ್ರಷ್ಠಾಚಾರ ತಡೆಯಲು ಚುನಾವಣೆ ನಡೆಸಲು ಕೇಳಿಕೊಂಡರು. ತಕ್ಷಣವೇ ನಡೆಸುವ ಸಾಧ್ಯತೆಯಿಲ್ಲ. ಬೆಂಗಳೂರಿನ ಪಾಲಿಕೆಗಳ ಚುನಾವಣೆ ನಡೆಸಲು 10 ವರ್ಷದ ಹಿಂದಿನ ಹೋರಾಟವಾಗಿದೆ ಎಂದು ಹೇಳಿದರು.

ನಂತರ ಮಾತನಾಡಿದ ಮಾಜಿ ಡಿಸಿಎಂ ಈಶ್ವರಪ್ಪ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ. ಎಲ್ಲರೂ ತಮ್ಮ ಹಿಂಬಾಲಕರ ಮೂಲಕ ಹೇಳಿಕೆ ನೀಡಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಯತೀಂದ್ರರವರು ನಮ್ಮಪ್ಪನೇ ಮುಂದಿನ 5 ವರ್ಷದ ಸಿಎಂ ಎಂದರೆ ಡಿಸಿಎಂ ಡಿಜೆಶಿ ಯತೀಂದ್ರನೇ ನಮ್ಮ ಹೈಕಮಾಂಡ್ ಎಂದು ಹೇಳುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ಆಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಕೈಎತ್ತಿದ್ದಾರೆ. 

ಖರ್ಗೆ ಅವರೆ ಕೈ ಎತ್ತಿದರೆ ಹಾಗದರೆ ಹೈಕಮಾಂಡ್ ಯಾರು? ಈ ಆಟವನ್ನ ನಿಲ್ಲಿಸಿ ಕಾಂಗ್ರೆಸ್ ಯಾರನ್ನಾದರೂ ಸಿಎಂ ಮಾಡಲಿ ಆದರೆ ಈ ರೀತಿಯ ಗೊಂದಲ ಹೇಳಿಕೆ ನಿಲ್ಲಿಸಿ ಅಧಿಕಾರಿಗಳು ಕೆಲಸ ಮಾಡುವಂತೆ ಮಾಡಿ ಎಂದು ಆಗ್ರಹಿಸಿದರು. 

ಗುತ್ತಿಗೆದಾರರು ಸರ್ಕಾರದ ಮೇಲೆ ಭರವಸೆ ಕಳೆದುಕೊಂಡಿದ್ದಾರೆ. ಹಾಗಾಗಿ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಸರ್ಕಾರದ ಸೂಚನೆ ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಸಂಪೂರ್ಣ ಹರಾಜುಕಥೆ ಉಂಟಾಗಿದೆ ಎಂದರು. 

ವಿಶೇಷ ಅಧಿವೇಶನವನ್ನ ನಾನು ಸರ್ಕಾರದ ವಿವಿಧ ಇಲಾಖೆ ಸಚಿವನಾಗಿದ್ದೇನೆ. ಡಿಸಿಎಂ ಆಗಿದ್ದೆ, ಇಂತಹ ಅಧಿವೇಶನ ನೋಡಿಲ್ಲ. ಪದ ಬಳಕೆಯಲ್ಲೂ ಶಾಸಕರು ಮೌಲ್ಯ ಕಳೆದುಕೊಂಡಿದ್ದಾರೆ. ವಿಧಾನ ಸಭೆ ಮತ್ತು ಪರಿಷತ್ ದೇಶಕ್ಕೇ ಮಾದರಿಯಾದ ಸಭೆಗಳಾಗಿವೆ ನಸೀರ್ ಅಹಮದ್, ಶಿವಲಿಂಗೇ ಗೌಡರಂತದ ಸದಸ್ಯರ ಪದ ಬಳಕೆ ನೋಡಿದರೆ ನಾಚಿಕೆಯಾಗುತ್ತದೆ. ಇದನ್ನ ನೋಡಿಕೊಂಡು ಸರ್ಕಾರದ ಸಚಿವರು ಸುಮ್ಮನಿರುವುದು ಅಚ್ಚರಿ ಮೂಡಿಸಿದೆ. ಇಂತಹ ಶಾಸಕರು ಸಭೆಗಳಲ್ಲಿ ಇದ್ದಾರಲ್ಲ ಎಂಬ ನೋವಿದೆ ಎಂದರು. 

ರಾಜ್ಯದ ಜನರ ಮರ್ಯಾದೆ ಉಳಿಸಿ. ಇನ್ನು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಬರಲು ಸಾಧ್ಯವಿಲ್ಲ. 

Kantesh says ministers are busy eating nati chickens

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close