ಫೆಬ್ರವರಿ 13ರಂದು ಮರ್ಕಾಜ್ ಸಆದಃ 9ನೇ ವರ್ಷದ ಕಾನ್ಫರೆನ್ಸ್-Markaz Saadah 9th Annual Conference on February 13th

SUDDILIVE || SHIVAMOGGA

ಫೆಬ್ರವರಿ 13ರಂದು ಮರ್ಕಾಜ್ ಸಆದಃ 9ನೇ ವರ್ಷದ ಕಾನ್ಫರೆನ್ಸ್-Markaz Saadah 9th Annual Conference on February 13th     

Markaz, saadah

ನಗರದ ಮರ್ಕಾಜ್ ಸಆದಃ ಧಾರ್ಮಿಕ ಮತ್ತು ಲೌಕಿಕ ಸಮನ್ವಯ ವಿದ್ಯಾಭ್ಯಾಸ ಸಂಸ್ಥೆಯ 9ನೇ ವರ್ಷದ ಕಾನ್ಫರೆನ್ಸ್ ಇದೇ  ಫೆಬ್ರವರಿ 13ರಂದು ನಗರದ ಮರ್ಕಾಜ್ ಸಆದಃ ಮಸೀದಿಯಲ್ಲಿ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಶಾಹುಲ್ ಹಮೀದ್ ಮದದಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಳೆದ 9 ವರ್ಷಗಳಿಂದ ಈ ಸಂಸ್ಥೆಯು ವಿಶೇಷವಾಗಿ ಕನ್ನಡ ಭಾಷೆಯಲ್ಲಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡುವ ಮೂಲಕ ಕನ್ನಡದ ಮಹತ್ವ ಮತ್ತು ಗೌರವವನ್ನು ಯುವ ಸಮೂಹದಲ್ಲಿ ಬೆಳೆಸುತ್ತಿದೆ. ಇದರ ಭಾಗವಾಗಿ ವರ್ಷಕ್ಕೊಮ್ಮೆ ಆಯೋಜಿಸುವ ವಿದ್ಯಾರ್ಥಿಗಳ ಕಲಾ ಮತ್ತು ಸಾಂಸ್ಕೃತಿಕ ಉತ್ಸವ 'ಮೆಘಾಲಿಯೋ' ಫೆಬ್ರವರಿ 11 ಮತ್ತು 12ರಂದು ನಡೆಯಲಿದೆ. ಈ ಉತ್ಸವದಲ್ಲಿ 100ಕ್ಕೂ ಹೆಚ್ಚು ಸ್ಪರ್ಧೆಗಳು ಎರಡು ತಂಡಗಳ ನಡುವೆ ಒಟ್ಟು ಆರು ಭಾಷೆಗಳಲ್ಲಿ ಜರುಗಲಿವೆ ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಸಮಾಜಮುಖಿ ಕಾರ್ಯದ ಬಗ್ಗೆ ಮಾತನಾಡಿದ ಅವರು, ಶಿವಮೊಗ್ಗದ ವಿವಿಧ ಭಾಗಗಳಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಸೇವನೆಯ ವಿರುದ್ಧ ಸಂಸ್ಥೆಯ ವಿದ್ಯಾರ್ಥಿಗಳು ಈಗಾಗಲೇ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ನಗರದ ಪ್ರತಿ ಗಲ್ಲಿಗಳಲ್ಲಿಯೂ ಈ ಜಾಗೃತಿ ಅಭಿಯಾನವನ್ನು ತೀವ್ರಗೊಳಿಸಲಾಗುವುದು ಎಂದು ತಿಳಿಸಿದರು.

ಫೆಬ್ರವರಿ 13ರಂದು ನಡೆಯಲಿರುವ ಮುಖ್ಯ ಕಾನ್ಫರೆನ್ಸ್‌ನಲ್ಲಿ ಪ್ರತಿಷ್ಠಿತ 'ಸಆದಃ ಎಕ್ಸಲೆನ್ಸಿ ಅವಾರ್ಡ್' ಪ್ರದಾನ ಮಾಡಲಾಗುವುದು. ಪ್ರಖ್ಯಾತ ಉದ್ಯಮಿ ಹಾಜಿ ಇಕ್ಬಾಲ್ ಹಬೀಬ್ ಸೇಠ್ ಅವರ ತಂದೆ ಮರ್ಹೂಂ ಹಬೀಬ್ ದಾದಾ ಸೇಠ್ ಅವರ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಯ 4ನೇ ಆವೃತ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುತ್ತಿರುವ ಕೇರಳದ ಖಾಝಿ ಮುಹಮ್ಮದ್ ಸ್ವಾಲಿಹ್ ಸಆದಿ ಅವರಿಗೆ ನೀಡಿ ಗೌರವಿಸಲಾಗುವುದು.

ಈ ಸಮಾವೇಶವು ಸಂಸ್ಥೆಯ ಚೇರ್ಮನ್ ಸಯ್ಯದ್ ಶಹೀದುದ್ದೀನ್ ಅಲ್ ಬುಖಾರಿ ಮತ್ತು ಸಯ್ಯದ್ ಅಬೂಬಕ್ಕರ್ ಸಿದ್ದೀಖ್ ಅಲ್ ಹಾದಿ ತೀರ್ಥಹಳ್ಳಿ ಅವರ ನೇತೃತ್ವದಲ್ಲಿ ನಡೆಯಲಿದ್ದು, ಕರ್ನಾಟಕ ವಕ್ಫ್ ಮಂಡಳಿಯ ಉಪಾಧ್ಯಕ್ಷ ಎನ್.ಕೆ.ಎಂ. ಶಾಫಿ ಸಅದಿ ಬೆಂಗಳೂರು ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಾಮಿಯಾ ಮಸೀದಿಯ ಮೌಲಾನ ಮುಫ್ತಿ ಹಜರತ್ ಗುಲಾಮ್ ರಝಾ ಬರ್ಕಾತಿ ಸೇರಿದಂತೆ ಹಲವಾರು ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

Markaz Saadah 9th Annual Conference on February 13th

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close