SUDDILIVE || SHIVAMOGGA
ಗುಟ್ಕಾ ಜಾಹೀರಾತು ತೆರವುಗೊಳಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಸಂಘಟನೆ- Organization congratulates government for issuing gutka
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಮೇಲೆ ಗುಟ್ಕಾ ಜಾಹೀರಾತು ತೆರವುಗೊಳಿಸಿದ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೇನೆ ಸದಸ್ಯರು ಇಂದು ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ರವಿಪ್ರಸಾದ್ ಎಂ ಡಿಸೆಂಬರ್ ತಿಂಗಳಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಮೇಲೆ ಇರುವ ಸಾರ್ವಜನಿಕರಿಗೆ ಮಾರಕವಾದ ವಿಮಲ್ ಗುಟ್ಕಾ ಇನ್ನಿತರ ಮಾದಕ ವಸ್ತುಗಳ ಜಾಹೀರಾತನ್ನು ಹಾಗೂ ಇಂಗ್ಲಿಷ್ ಭಾಷೆಯ ಜಾಹೀರಾತನ್ನು ತೆಗೆಯ ಬೇಕೆಂದು ಹೋರಾಟವನ್ನು ಶಿವಮೊಗ್ಗದಿಂದ ಪ್ರಾರಂಭಿಸಿದ್ದೆವು. ಅದಕ್ಕೆ ಪ್ರಜ್ಞಾವಂತ ನಾಗರಿಕರಿಂದ ರಾಜ್ಯ ದಾದ್ಯಂತ ವಿಶೇಷ ಬೆಂಬಲ ಸಿಕ್ಕಿದ್ದು ಬೆಂಗಳೂರಿನಲ್ಲೂ ಹೋರಾಟ ಮುಂದುವರಿದಿತ್ತು ಸಾರಿಗೆ ಸಚಿವರಿಗೂ ಸಂಘಟನೆಯಿಂದ ಮನವಿ ನೀಡಿದ್ದೆವು ಇದರಿಂದ ಸರ್ಕಾರ ಎಚ್ಚೆತ್ತುಕೊಂಡು ಸಾರಿಗೆ ಸಚಿವರು ಕೂಡಲೇ ಆದೇಶ ಹೊರಡಿಸಿ ಸರ್ಕಾರಿ ಬಸ್ಸಿನ ಮೇಲಿರುವ ಮಾದಕ ವಸ್ತುಗಳ ಜಾಹೀರಾತುಗೆಯುವಂತೆ ಹಾಗೂ ಇಂಗ್ಲಿಷ್ ಬರಗಳು ಚಡ್ಡಿ ಹಾಗೂ ಒಳ ಉಡುಪುಗಳ ಜಾಹೀರಾತನ್ನು ತೆಗೆಯುವಂತೆ ಸೂಚನೆ ನೀಡಿದ್ದರು. ಇದಕ್ಕಾಗಿ ನಾವು ಸರ್ಕಾರವನ್ನು ನಾಗರಿಕರ ಪರವಾಗಿ ಅಭಿನಂದಿಸುತ್ತೇವೆ ಮತ್ತು ಇಂದು ಕೂಡ ಕೆಲವು ಬಸ್ಸುಗಳಲ್ಲಿ ಅದೇ ಜಾಹೀರಾತುಗಳು ಇರುವುದನ್ನು ಗಮನಿಸಿ ಅದನ್ನು ಕೂಡ ಕಿತ್ತು ಬಿಸಾಡಿದ್ದೇವೆ ಸರ್ಕಾರ ಕೂಡಲೇ ಇನ್ನು ಯಾವುದಾದರೂ ಬಸ್ಸಿನ ಮೇಲೆ ಈ ಗುಟ್ಕಾ ಜಾಹೀರಾತುಗಳಿದ್ದರೆ ತೆರವುಗೊಳಿಸಲು ಆಗ್ರಹಿಸಿದರು. ಹಾಗೂ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗೆ ಉಚಿತ ಅವಕಾಶವಿದ್ದರೂ ಹಿಂದೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಸೂಚನೆ ನೀಡಿದ್ದರೂ ಸಹ ಮತ್ತೆ ಯಥಾಸ್ಥಿತಿ ಮುಂದುವರಿದಿದ್ದು ಅದನ್ನು ಕೂಡ ಸಂಘಟನೆಯ ಸದಸ್ಯರು ವಿರೋಧಿಸಿ ಎಚ್ಚರಿಕೆ ನೀಡಿದ್ದಾರೆ
ಈ ಸಂಬಂಧ ಕೂಡಲೇ ಕೂಡಲೇ ಕೆಎಸ್ಆರ್ಟಿಸಿ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸಿಂಹಾಸೇನೆಯ ಪ್ರಮುಖರಾದ ಪ್ರಮುಖರಾದ ಮಧುಸೂದನ್, ನೂರುಲ್ಲಾ ಅಭಿಜಿತ್ ನವಲೆ. ರಫೀಕ್ ಮೊದಲಾದವರಿದ್ದರು ಉಪಸ್ಥಿತರಿದ್ದರು
