ಗ್ರಾಪಂ ಎದುರು ಡಿಎಸ್ಎಸ್ ಅಂಬೇಡ್ಕರ್ ವಾದ ಅಹೋರಾತ್ರಿ ಧರಣಿ-All-night sit-in in front of Gram Panchayat demanding DSS Ambedkar vada

SUDDILIVE || BHADRAVATHI

ಗ್ರಾಪಂ ಎದುರು ಡಿಎಸ್ಎಸ್ ಅಂಬೇಡ್ಕರ್ ವಾದ ಅಹೋರಾತ್ರಿ ಧರಣಿ-All-night sit-in in front of Gram Panchayat demanding DSS Ambedkar vada    

Abedkar, vada


ತಾಲೂಕಿನ ಅರೇಬಿಳಿಸಿ ಗ್ರಾಮದಲ್ಲಿ ಕೆರೆಗೆ ಹೋಗುವ ರಸ್ತೆಗೆ ಅಕ್ರಮವಾಗಿ ಅಡ್ಡಗೋಡೆ ಕಟ್ಟಿ ಓಡಾಡಲು ರಸ್ತೆ ಇಲ್ಲದಂತೆ ಮಾಡಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ನಿರ್ಮಿಸಿರುವ ಅಡ್ಡಗೋಡೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಗ್ರಾಮ ಪಂಚಾಯತಿ ಎದುರೇ ಅಹೋರಾತ್ರಿ ಧರಣಿಗೆ ಕುಳಿತಿದೆ.

ಹೊಳೆ ಹೊನ್ನೂರು ಹೋಬಳಿ ಅರೆಬೆಳಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಜಾತಿ ಜನಾಂಗದ ಮೂರು ಬೀದಿಗಳಿದ್ದು ಸುಮಾರು 60 ಮನೆಗಳಿವೆ ಎರಡು ಬೀದಿಗಳಿಗೆ ಓಡಾಡಲು ರಸ್ತೆ ಇದ್ದು ಮೂರನೇ ಬೀದಿಗೆ ನಕಾಶ ಕಂಡಂತೆ ರಸ್ತೆ ಇದ್ದರೂ ಸಹ ಗ್ರಾಮದ ಮೇಲು ವರ್ಗದವರು ನಕಾಶ ಕಂಡ ರಸ್ತೆಗೆ ಅಡ್ಡಲಾಗಿ ಅಡ್ಡ ಬೇಲಿಗಳನ್ನು ಕಟ್ಟಿ ಪರಿಶಿಷ್ಟ ಜನಾಂಗದವರಿಗೆ ಓಡಾಡಲು ಬಿಡದೆ ದೌರ್ಜನ್ಯ ನಡೆಸಿದ್ದಾರೆ ಎಂದು ಸಂಘಟನೆ ಮನವಿಯಲ್ಲಿ ಆರೋಪಿಸಿದೆ.

ಹೆಣವುಡಲು ಓಡಾಡಲು ದಾರಿ ಬಿಡದ ಮೇಲೆ ವರ್ಗದವರ ನಿವೇಶನಗಳ ಅಳತೆಗೂ ಮೀರಿ ಪರಿಶುದ್ಧ ಜಾತಿಯವರು ದಾಖಲಖಂಡ ದಾರಿಗೆ ಅಡ್ಡಲಾಗಿ ಗೋಡೆ ಬಾತ್ರೂಮ್ ಕಟ್ಟಿ ದೌರ್ಜನ್ಯ ವಯಸ್ಸಿಗೆ ವಯಸ್ಸಾಗಿಲಾಗಿದೆ ಎಂದು ಸಂಘಟನೆ ಮನವಿಯಲ್ಲಿ ಆರೋಪಿಸಿದೆ.

ಸಾರ್ವಜನಿಕ ರಸ್ತೆಯಲ್ಲಿ ಅಡ್ಡಗೋಡೆ ಕಟ್ಟಿ ಶೌಚಾಲಯ ಬೇರುಗಳನ್ನು ಕಟ್ಟಿ ಓಡಾಡಲು ತೊಂದರೆ ನೀಡುತ್ತಿರುವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಗೋಡೆಯನ್ನು ತೆರವುಗೊಳಿಸಬೇಕು. ಗೋಡೆಕಟ್ಟಿದವರ ವಿರುದ್ಧ ಅರ್ಜಿಗಳನ್ನ ನೀಡಿದರೂ ಪಿಡಿಒ, ಗ್ರಾಪಂ ಕಾರ್ಯದರ್ಶಿ ವಿರುದ್ದ ಸೂಕ್ತ ಕ್ರಮ‌ಕೈಗೊಳ್ಳಬೇಕು. SCTP ಹಣವನ್ನ‌ ಮೇಲ್ವರ್ಗದವರ ತೋಟಕ್ಕೆ ಬಳಸಿ sc, stಗೆ ಅನುಕೂಲವಾಗಿದೆ ಎಂದು ವರದಿ ನೀಡಿದ ಸಮಾಜಕಲ್ಯಾಣ ಇಲಾಖೆ ಅಧಿಕಾರಿಯನ್ನ ಸೇವೆಯಿಂದ ಅಮಾನತ್ತುಗೊಳಿಸಬೇಕು.‌

ಅಡ್ಡಗೋಡೆ ಕಟ್ಟಿದ ಜಾಗದಲ್ಲಿ  scsp/TSP ಅನುದಾನದಲ್ಲಿ ತಕ್ಷಣ ಬ್ಲಾಕ್ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಿಸಬೇಕೆಂದು ಜಿಪಂ ಸಿಇಒಗೆ ನೀಡಿದ ಮನವಿಯಲ್ಲಿ ಆಗ್ರಹಿಸಲಾಗಿದೆ. ಧರಣಿಯಲ್ಲಿ ಶಿವಮೊಗ್ಗ ಗ್ರಾಮಾಂತರ ಸಂಚಾಲಕ ಟಿ ಹನುಮಂತಪ್ಪ ಕಲ್ಲಿಹಾಳ್ ಮೈಸೂರು ವಿಭಾಗೀಯ ಟಿ ಹೆಚ್ ಹಾಲೇಶಪ್ಪ ಜಿಲ್ಲಾ ಸಂಚಾಲಕ ಶೇಷಪ್ಪೋಡು ಗ್ರಾಮಾಂತರ ಸಹ ಸಂಚಾಲಕ ಹರೀಶ್ ಕಲ್ಲಿಹಾಳ್ ಮೊದಲಾದವರು  ಭಾಗಿಯಾಗಿದ್ದರು.

All-night sit-in in front of Gram Panchayat demanding DSS Ambedkar vada

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close