SUDDILIVE || SHIVAMOGGA
ಕರ್ತವ್ಯಕ್ಕೆ ತೆರಳಿದ್ದ ಪೊಲೀಸಪ್ಪ ದಿಡೀರ್ ನಾಪತ್ತೆ- Policeman goes missing while in uniform
ಬಂದೋಬಸ್ತ್ ಗೆ ತೆರಳಿದ್ದ ಮಹಿಳಾ ಠಾಣೆಯ ಕಾನ್ ಸ್ಟೇಬಲ್ ದಿಡೀರ್ ಎಂದು ನಾಪತ್ತೆಯಾಗಿರುವುದಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿದೆ. ಅವರ ನಾಪತ್ತೆಗೆ ಹುಡುಗಿಯೊಬ್ಬರ ಮಾನಸಿಕ ಒತ್ತಡ ಕಾರಣವಿರಬಹುದು ಎಂದು ಅವರ ಪತ್ನಿ ದೂರಿನಲ್ಲಿ ಅನುಮಾನಿಸಿದ್ದಾರೆ.
ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಪತ್ನಿ WPC ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇವರಿಗೆ ಐದು ವರ್ಷದ ಹಿಂದೆ ಯಾದಗಿರಿ ಜಿಲ್ಲೆಯ ಯರಗೋಳು ಗ್ರಾಮದ ನಿವಾಸಿಯಾದ ನಿಂಗೇಶ್ ರವರೊಂದಿಗೆ ಮದುವೆಯಾಗಿದ್ದಾರೆ. ಇಬ್ಬರಿಗೂ ಮುದ್ದಾದ ಹೆಣ್ಣು ಮಗುವಿತ್ತು. ಕಳೆದ ಮೂರು ವರ್ಷದಿಂದ ಮಹಿಳಾ ಠಾಣೆಯಲ್ಲಿ ನಿಂಗೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೊನ್ನೆ ಫೆ.10 ರಂದು ಮಹಿಳಾ ಠಾಣೆಯ ಪಹರೆ ಕರ್ತವ್ಯ ನಿರ್ವಹಿಸಿ ನಂತರ ರಾತ್ರಿ 9 ಗಂಟೆಗೆ ತುಂಗ ನಗರ ಪೊಲೀಸ್ ಠಾಣೆಯ ಸರಹದ್ದಿನಲ್ಲಿ ಕರ್ತವ್ಯಕ್ಕೆ ತೆರಳಿದ್ದ ನಿಂಗೇಶ್ ಮರಳಿ ಮನೆಗೆ ಬಂದಿಲ್ಲ. ಅಂದು ರಾತ್ರಿ ಅವರ ಪತ್ನಿ ಅವರ ಮೊಬೈಲ್ ಗೆ ಕರೆ ಮಾಡಿದಾಗ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಬಂದಿದೆ. ಮರುದಿನ 11 ಗಂಟೆಯ ವರೆಗೂ ಅವರ ಕರೆಯೂ ಬಂದಿಲ್ಲ ಮತ್ತು ಪತ್ನಿ ಕರೆ ಮಾಡಿದಾಗಲೆಲ್ಲ ಮೊಬೈಲ್ ಸ್ವಿಚ್ ಆಫ್ ಬಂದಿರುವುದು ಪತ್ನಿಗೆ ದಿಗಿಲಾಗಿದೆ.
ಈ ಪ್ರಕರಣದಲ್ಲಿ ಹುಡುಗಿಯೊಬ್ಬಳ ಎಂಟ್ರಿಯ ಶಂಕೆ ವ್ಯಕ್ತವಾಗುತ್ತಿದೆ. ಎರಡು ಮೂರು ತಿಂಗಳ ಹಿಂದೆ ನಿಂಗೇಶ್ ಗೆ ( ಹುಡುಗಿಯ ಹೆಸರು ಗುಪ್ತವಾಗಿಡಲಾಗಿದೆ) ಪರಿಚಯವಾಗಿ ಆಕೆ ತನ್ನ ಕಷ್ಟಗಳನ್ನ ಹೇಳಿಕೊಳ್ಳುತ್ತಿದ್ದಳು. ಈ ಬಗ್ಗೆ ಸ್ವತಃ ನಿಂಗೇಶ್ ಪತ್ನಿಯ ಬಳಿ ಹೇಳಿಕೊಂಡಿದ್ದರು. ಈ ಯುವತಿಯ ಒತ್ತಡದಿಂದ ಪತಿ ನಾಪತ್ತೆಯಾಗಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗುತ್ತಿದೆ. ನಾಪತ್ತೆಯಾಗಿರುವ ನಿಂಗೇಶ್ 5.6' ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣ ಮೈಕಟ್ಟು, ಅರ್ಧ ಅರ್ಧ ಬೋಳು ತಲೆ, ಮನೆಯಿಂದ ಹೋಗುವಾಗ ನಿಂಗೇಶ್ ಪೊಲೀಸ್ ಸಮವಸ್ತ್ರದಲ್ಲಿಯೇ ನಾಪತ್ತೆಯಾಗಿದ್ದಾರೆ. ಯಾರಿಗಾದರೂ ಕಂಡು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ.
Policeman goes missing while in uniform
