SUDDILIVE || SHIVAMOGGA
ಮತ್ತೊಮ್ಮೆ ಬೀದಿಗಿಳಿದು ಪ್ರತಿಭಟಿಸುತ್ತಿರುವ ಬಂಗಾರಮಕ್ಕಿ ಶ್ರೀಗಳು- Bangaramakki Sris once again took to the streets to fight against Sharavathi Pumped Storage
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವಿರುದ್ಧ ಪರಿಸರಕ್ಕಾಗಿ ನಾವು ಮತ್ತು ರಾಷ್ಟ್ರಭಕ್ತರ ಬಳಗದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಗೋಪಿ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಪ್ರತಿಭಟನೆ ಮೆರವಣಿಗೆಯನ್ನು ನಡೆಸಲಾಗಿದೆ
ಆರಂಭದಿಂದಲೂ ಶರಾವತಿ ಪಂಪುಡ್ ಸ್ಟೋರೇಜ್ ಯೋಜನೆಯನ್ನು ವಿರೋಧಿಸಿಕೊಂಡಿಬಂದಿದ್ದ ಬಂಗಾರಮ್ಮಕ್ಕೆ ಶ್ರೀ ಮಾರುತಿ ಸ್ವಾಮಿಗಳು ಸಹ ಈ ಪ್ರತಿಭಟನೆಯಲ್ಲಿ ಭಾಗಿಯಾಗಿರುವುದು ಪ್ರತಿಭಟನೆಗೆ ಹೆಚ್ಚು ಶಕ್ತಿತುಂಬಿತ್ತು. ಮಾಜಿ ಡಿಸಿಎಂ ಈಶ್ವರಪ್ಪ ಮತ್ತು ಪುತ್ರ ಕಾಂತೇಶ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆ ಹೆಚ್ಚಿನ ಗಮನ ಸೆಳೆದಿದೆ.
ಪರಿಸರ ಕಾಳಜಿ ಇಲ್ಲದೆ ವೈಜ್ಞಾನಿಕವಾಗಿ ಕಾರ್ಯಗೊಳಿತಗೊಳಿಸಲು ಹೊರಟಿರುವ ಶರಾವತಿ ಪಂಪ್ಡು ಸ್ಟೋರೇಜ್ ಯೋಜನೆಯ ಪಶ್ಚಿಮ ಘಟ್ಟ ಪ್ರದೇಶಕ್ಕೆ ಆಳಿವಂಚಿನಲ್ಲಿರುವ ಅಪರೂಪದ ಪ್ರಾಣಿ ಸಂಕುಲಕ್ಕೆ, ಕೃಷಿಯನ್ನೇ ಆಶ್ರಯಿಸಿರುವ ರೈತರಿಗೆ, ಮರಣ ಶಾಸನವಾಗಿರುವುದರಲ್ಲಿ ಅನುಮಾನವಿಲ್ಲ ಯೋಜನೆಯು ಸಾರ್ವಜನಿಕರಲ್ಲಿ ಪರಿಸರ ಆಸಕ್ತರಲ್ಲಿ ಹಲವು ಅನುಮಾನಗಳು ಮತ್ತು ಆತಂಕಗಳನ್ನು ಹುಟ್ಟಿ ಹಾಕಿದೆ ಈ ಆತಂಕಗಳಿಗೆ ಸಂಬಂಧಿಸಿದವರು ಸೂಕ್ತ ಉತ್ತರಗಳನ್ನು ಕೊಡಬೇಕಾಗಿ ಪ್ರತಿಭಟನಾಕಾರರು ಆಗ್ರಹಿಸಿದದರು.
ಯೋಜನೆಯಲ್ಲಿ 16,000 ಮರಗಳು ಕಡಿಯುವ ಪ್ರಸ್ತಾವನೆ ಇದೆ ವನ್ಯಜೀವಿಗಳ ಆವಾಸ ಸ್ಥಾನಕ್ಕೆ ಧಕ್ಕೆ ಬರುತ್ತಿದೆ 18,000ಗಳ ಬ್ಲಾಸ್ಟರ್ ಬಳಿಕೆ ನಡೆಯಲಿದೆ ಜಲ ಮಾಲಿನ್ಯ ಭೂಕುಸಿತ ನದಿ ಅಧಿಕ ಹೂಳು ತುಂಬುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಯೋಜನೆಯು ಘೋಷಿತ ಸಿಂಹಬಾಲದ ಸಿಂಗಳಿಕ ಅಭಯಾರಣ್ಯದ ಹೃದಯ ಭಾಗದಲ್ಲಿ ಜಾರಿಯಾಗುತ್ತಿರುವುದು ಅನ್ಯಜೀವಿ ಕಾಯ್ದೆಯ 1972ರ ಆಶಯಕ್ಕೆ ವಿರುದ್ಧವಾಗಿದೆ.
ಯೋಜನೆ ಪ್ರದೇಶದಲ್ಲಿರುವ ಐತಿಹಾಸಿಕ ಸ್ಮಾರಕಗಳನ್ನು ಮತ್ತು ಸ್ಥಳಗಳನ್ನು ಯೋಜನೆ ನಾಶ ಮಾಡುತ್ತಿದೆ ಇನ್ನು ಅನೇಕ ಕಾರಣಗಳಿಂದ ಯೋಜನೆಯು ಪರಿಸರ ವಿರೋಧಿ ಅವಾಗ್ ಜ್ಞಾನಿಕ ಮತ್ತು ಆರ್ಥಿಕವಾಗಿ ಹೊರೆಯಾಗುವಂತಾಗಿದ್ದು ಪರಿಸರ ಆಸಕ್ತರ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವ ಯೋಜನೆಯನ್ನು ಸರ್ಕಾರ ತಕ್ಷಣವೇ ಕೈಬಿಡಬೇಕಾಗಿ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
Bangaramakki Sris once again took to the streets to fight against Sharavathi Pumped Storage

