ಆತ್ಮಹತ್ಯೆಗೆ ಯತ್ನಿಸಿದ ಗ್ರಾಮ ಆಡಳಿತಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭದ್ರಾವತಿಯಲ್ಲಿ ಪ್ರತಿಭಟನೆ-Protest in Bhadravati demanding action against village administrator who attempted suicide

ಆತ್ಮಹತ್ಯೆಗೆ ಯತ್ನಿಸಿದ ಗ್ರಾಮ ಆಡಳಿತಧಿಕಾರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭದ್ರಾವತಿಯಲ್ಲಿ ಪ್ರತಿಭಟನೆ-Protest in Bhadravati demanding action against village administrator who attempted suicide     

Protest, Bhadravathi

ತಹಶೀಲ್ದಾರ್ ವಿರುದ್ಧ ಪತ್ರ ಬರೆದು ಆತ್ಮಹತ್ಯೆಗೆ ಯತ್ನಿಸಿದ ಗ್ರಾಮ ಆಡಳಿತಾಧಿಕಾರಿಯ ವಿರುದ್ಧವೇ ಸಂಘಟನೆಯೊಂದು ಬೀದಿಗಿಳಿದು ಹೋರಾಟನೆಡಸಿದೆ. ಇವರ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಪಕ್ಷಾತೀತವಾಗಿ ಇಂದು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗಿದೆ. 

ತಹಶೀಲ್ದಾರ್ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿರುವ ಗ್ರಾಮ ಆಡಳಿತಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಸರ್ಕಾರಿ ಸೇವೆಯಿಂದ ವಜಗೊಳಿಸುವಂತೆ ಆಗ್ರಹಿಸಲಾಗಿದೆ. ಗ್ರಾಮ ಆಡಳಿತಧಿಕಾರಿ  ಆರ್ ಜಿ ಅಭಿಷೇಕ್ ತಹಸಿಲ್ದಾರ್ ಪರಸಪ್ಪ ಕುರುಬರ ವಿರುದ್ಧ  ಇಲ್ಲಸಲ್ಲದ ಆರೋಪ ಮಾಡಿ ಕೆಲಸದ ಒತ್ತಡ ಹೇರಿ ಕರ್ತವ್ಯ ನಿರ್ವಹಿಸಲು ಪದೇ ಪದೇ ತೊಂದರೆ ನೀಡುತ್ತಿದ್ದಾರೆ ಎಂದು  ಆರೋಪಿಸಿ ಸಿದ್ದಾಪುರ ಚಾನೆಲ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆವೊಡ್ಡಿ ಪತ್ರ ಬರೆದಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 


ತಾಲೂಕು ಕಚೇರಿಯಲ್ಲಿ ಗ್ರಾಮಾ ಅಡಳಿತಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಗ್ರಾಮಾ ಅಡಳಿತಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಯೋಗೀಶ್ ನಾಯಕ ರವರು ಮುನ್ಸೂಚನೆ ಇಲ್ಲದೆ ಸಭೆ ನಡೆಸಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿ ಯೋಗೀಶ್ ನಾಯಕರ ವಿರುದ್ಧ ಕ್ರಮ ಜರಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ 

ಆಡಳಿತ ನಡೆಸುತ್ತಿರುವ ತಹಶೀಲ್ದಾರ್ ಪರಸಪ್ಪ ಕುರುಬರ ಹಲವು ವರ್ಷಗಳ ನಂತರ ಭದ್ರಾವತಿಗೆ ಉತ್ತಮ ಸೇವೆ ನೀಡಲು ಆಗಮಿಸಿರುವ ದಕ್ಷ ಅಧಿಕಾರಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಇಂತಹ ಅಧಿಕಾರಿಗಳನ್ನು ಭದ್ರಾವತಿಯಲ್ಲಿ ಕೇವಲ ರಾಜಕೀಯ ಹೋರಾಟಗಳಲ್ಲ ಉಳಿಸಿಕೊಳ್ಳಲು  ಭದ್ರಾವತಿಯಲ್ಲಿ ಹೋರಾಟಕ್ಕೆ ಸದಾ ಸಿದ್ಧವಿರುವುದಾಗಿ ಪ್ರತಿಭಟನಾ ಕಾರರು ತಮ್ಮ ಪ್ರತಿಭಟನಾ ಭಾಷಣದಲ್ಲಿ ತಿಳಿಸಿದರು.

ಪ್ರತಿಭಟನೆಯಲ್ಲಿ  ಮುಖಂಡರಾದ ಮುರುಗೇಶ್ ಸೈಯದ್ ರಿಯಾಜ್ ಕುಬೇರಪ್ಪ ನದೀಮ್ ಭಾಷಾ ನಾಗರಾಜರಾವ್ ಅಂಬೋರೆ ಜನ್ನಾಪುರ ಮಂಜುನಾಥ್ ಜಿಂಕ್ ಲೈನ್ ಮಣಿ ಸುರೇಶ್ ಶಶಿಕುಮಾರ್ ಸಂತೋಷ್ ಕುಪೇಂದ್ರ ಎಸ್ ಶಿವಪ್ಪ ಭಾಷಾ  ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಉಪ ತಾಶಿಲ್ದಾರ್ ಮಂಜ ನಾಯಕ ರವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Protest in Bhadravati demanding action against village administrator who attempted suicide 

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close