ನಗರದ ವಕ್ಫ್ ಸಂಸ್ಥೆಗಳಿಗೆ ಆಡಿಟ್ ಮಾಡಿಸುವಂತೆ ಹಾಗೂ ಮುಸ್ಲೀಂ ಹಾಸ್ಟೆಲ್ ನ ಚುನಾವಣೆ ನಡೆಸುವಂತೆ ಪ್ರಜಾ ವೇದಿಕೆ ಸಂಘ ಆಗ್ರಹ- Praja Vedike Sangha demands

SUDDILIVE || SHIVVAMOGGA

ನಗರದ ವಕ್ಫ್ ಸಂಸ್ಥೆಗಳಿಗೆ ಆಡಿಟ್ ಮಾಡಿಸುವಂತೆ ಹಾಗೂ ಮುಸ್ಲೀಂ ಹಾಸ್ಟೆಲ್ ನ ಚುನಾವಣೆ ನಡೆಸುವಂತೆ ಪ್ರಜಾ ವೇದಿಕೆ ಸಂಘ ಆಗ್ರಹ-Praja Vedike Sangha demands audit of city's waqf institutions and election of Muslim hostel


ಶಿವಮೊಗ್ಗ ನಗರದಲ್ಲಿರುವ ವಕ್ಫ್ ಸಂಸ್ಥೆಗಳಿಗೆ ಆಡಿಟ್ ಮಾಡಲು, ಲೆಕ್ಕಾ ಪಡೆಯಲು, ಹಾಗೂ ಮುಸ್ಲಿಂ ಹಾಸ್ಟೆಲ್ ಚುನಾವಣೆ ನಡೆಸುವಂತೆ ಒತ್ತಾಯಿಸಿ ಇಂದು ಪ್ರಜಾ ವೇಇಕೆ ಸಂಘ ಜಿಲ್ಲಾ ವಕ್ಫ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. 

ಶಿವಮೊಗ್ಗ ನಗರದಲ್ಲಿರುವ ಬಹಳಷ್ಟು ಸಂಸ್ಥೆಗಳಿಗೆ ವಕ್ಫ್ ವತಿಯಿಂದ ಆಡಿಟ್ ಮಾಡದೇ ಇರುವುದು ಅಪಾಯಕಾರಿ ವಿಷಯವಾಗಿದೆ. ಈ ಹಿಂದೆಯೂ ಬಹಳಷ್ಟು ಸಮಿತಿಗಳ ಅವಧಿ ಮುಗಿದು ನಂತರದ ಸಮಿತಿ ಚುನಾಯಿತರಾಗಿ ಅವರ ಆಡಿಟ್ ಆದರೂ ಕೆಲ ಅವಧಿಯಲ್ಲಿ ಸಮಿತಿಗಳ ಒಂದು ರೂಪಾಯಿ ಆಡಿಟ್ ಕೂಡ ಆಗಿಲ್ಲ. "ದರ್ಗಾ ಹಜ್ರತ್ ಬದ್ರುದ್ದೀನ್ ಶಾ ಮಸ್ಜಿದ್ ಮತ್ತು ಸುನ್ನೀ ಖಬರಿಸ್ತಾನ್, ಇಸ್ಲಾಪುರ ಇವುಗಳಲ್ಲಿ ಹಳೆಯ ಸಮಿತಿಗಳ ಆಡಿಟ್ ಆಗಿಲ್ಲವೆಂದು ಸಂಘ ಆರೋಪಿಸಿದೆ. 

ಈ ಸಮತಿಯ 08/06/2012 ರಿಂದ 07/06/2015 ರವರೆಗಿನ ಸಾಲಿನಲ್ಲಿ ಸಮಿತಿಯವರಿಂದ ಯಾವುದೇ ಲೆಕ್ಕಾಚಾರ, ಆಡಿಟ್ ಆಗಿರುವುದಿಲ್ಲ ಇವತ್ತಿನ ವರೆಗೂ ವಕ್ಫ್ ಬೋರ್ಡ್ ನಿಂದ ಯಾವುದೇ ಕ್ರಮವಾಗಲಿ, ಪ್ರಕರಣ ದಾಖಲಿಸುವುದಾಗಲಿ ಆಗಿಲ್ಲ ಎಂಬುದು ಜೀವಂತ ಉದಾಹರಣೆಯಾಗಿದೆ. ಇಂತಹ ಬಹಳಷ್ಟು ವಕ್ಫ್ ಸಂಸ್ಥೆಗಳಿಗೆ ಆಡಿಟ್ ಆಗಿರಲಿಲ್ಲ ಇವತ್ತಿನ ವರೆಗೂ ವಕ್ಫ್ ಬೋರ್ಡ್ ನಿಂದ ಇವರ ಆಡಿಟ್ ಆಗಲಿ ಅಥವ ಈ ಸಮಿತಿಯಲ್ಲಿ ದುರುಪಯೋಗವಾಗಿದ್ದರೆ ಅಂತಹವರ ಮೇಲೆ ಕ್ರಿಮಿನಲ್ ಮುಕದ್ದಮೆ ಆಗಲಿ ಆಗಿರುವುದಿಲ್ಲ, ಈ ನಿರ್ಲಕ್ಷ್ಯ ಜಿಲ್ಲಾ ವಕ್ಫ್ ಸಲಹಾ ಸಮಿತಿ ಹಾಗೂ ಜಿಲ್ಲಾ ವಕ್ಫ್ ಅಧಿಕಾರಿಗಳ ಮೇಲೆ ಬಹಳಷ್ಟು ಅನುಮಾನಗಳು ಇವೆ ಹಾಗಾಗಿ ಮೊದಲು ಆಡಿಟ್ ಮಾಡಿಸುವಂತೆ ಸಂಘಟನೆ ದೂರಿದೆ.

ವಕ್ಫ್ ಬೋರ್ಡ್ ಅನ್ನುವುದು ಸರ್ಕಾರ ಸಚಿವಾಲಯದ ಒಂದು ಬೋರ್ಡ್ ಅಷ್ಟೇ ಆದರೆ ಇದಕ್ಕೆ ದೇಣಿಗೆ ರೂಪದಲ್ಲಿ ತಮ್ಮ ಅಮೂಲ್ಯವಾದ ಸ್ವತ್ತನ್ನು ನಮ್ಮ ಪೂರ್ವಜರು ನೀಡಿದ್ದಾರೆ, ಇದರ ರಕ್ಷಣೆಗೆ ವಕ್ಫ್ ಬೋರ್ಡ್ ಇರುವಂತಹದ್ದು.ಜಿಲ್ಲಾ ವಕ್ಫ್ ಕಮಿಟಿ ಮೂಲಾಜಿ ಇಲ್ಲದೆ ನಿರ್ಲಕ್ಷ್ಯವನ್ನು ಬಿಟ್ಟು ಇಂತಹ ವಕ್ಫ್ ಸಂಸ್ಥೆಗಳಿಗೆ ಆಡಿಟ್ ಮಾಡಬೇಕು, ದುರುಪಯೋಗ ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಸಂಘ ಒತ್ತಾಯಿಸಿದೆ. 

ಕರ್ನಾಟಕ ಸರ್ಕಾರದಿಂದ ನೀಡಿರುವ ಹೊಸ ಆಂಬುಲೆನ್ಸ್ ಓಡಾಡದೇ ನಿಂತು ನಿಂತು ಧೂಳು ಹಿಡಿದು ಹಾಳಾಗುತ್ತಿದೆ. ಜಿಲ್ಲೆಯಲ್ಲಿ ಆಂಬುಲೆನ್ಸ್ ಯಾವ ಯಾವ ಸಂಸ್ಥೆಗಳಿಗೆ ನೀಡಿದ್ದೀರಿ ಅದನ್ನು ಕೂಡಲೇ ಚಾಲ್ತಿಯಲ್ಲಿ ಬರುವ ಕ್ರಮ ಆಗಬೇಕು ಹಾಗೂ ಇದರ ಲಾಭ ಬಡವರಿಗೆ ತಲುಪಬೇಕು.

ಜಿಲ್ಲೆಯಲ್ಲಿ ಬಹಳಷ್ಟು ವಕ್ಫ್ ಸಂಸ್ಥೆಗಳ ಸಮಿತಿಯ ಅವಧಿ ಮುಗಿದು 2 ರಿಂದ 3 ವರ್ಷವಾದರೂ ಅಲ್ಲಿ ನೂತನ ಸಮಿತಿ ರಚಿಸುವ ಯಾವ ಕ್ರಮವು ನಡೆದಿಲ್ಲ ಇದಕ್ಕೆ ಶಿವಮೊಗ್ಗ ನಗರದ ಹೃದಯ ಭಾಗದಲ್ಲಿರುವ "ಮುಸ್ಲಿಂ ಹಾಸ್ಟೆಲ್" ಜೀವಂತ ಉದಾಹರಣೆ. ಇಂತಹ ಸಂಸ್ಥೆಗಳಿಗೆ ಕೂಡಲೆ ನೂತನ ಸಮಿತಿ ನಿರ್ಮಿಸಲು ಚುನಾವಣೆ ನಡೆಸಲು ಸಂಘ ಆಗ್ರಹಿಸಿದೆ.

Praja Vedike Sangha demands

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close