SUDDILIVE || SHIVAMOGGA
ಶಿವಮೊಗ್ಗ-ಶಾದಿ ಮಹಲ್ ಬಳಿ ಯುವಕನಮೇಲೆ ಮಚ್ಚಿನಿಂದ ಹಲ್ಲೆ-Shivamogga-Young man attacked with machete near Shadi Mahal
ನಗರದ ಇಲಿಯಾಜ್ ನಗರದ ನ್ಯಾಮತಿ ಶಾದಿ ಮಹಲ್ ನಲ್ಲಿ ಬೈಕ್ ನಲ್ಲಿ ಬಂದ ನಾಲ್ವರಿಂದ ಐದು ಜನ ಓರ್ವ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಥಳಿಸಿರುವ ಘಟನೆ ನಿನ್ನೆ ಮಧ್ಯಾಹ್ನ ನಡೆದಿದೆ. ಮಾರಕಾಸ್ತ್ರಗಳಿಂದ ಹಲ್ಲೆಯಾದವನು ಸಧ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದು ಬಂದಿದೆ.
ಇಲಿಯಾಜ್ ನಗರದಲ್ಲಿ ಇಬ್ರಾಹಿಂ ಎಂಬ ಯುವಕ ನಮಾಜ್ ಮುಗಿಸಿಕೊಂಡು ಶಾದಿ ಮಹಲ್ ಬಳಿ ನಡೆದುಕೊಂಡು ಹೋಗುವಾಗ ಬೈಕಿನಲ್ಲಿ ಬಂದ ನಾಲ್ಕೈದು ಜನ ಯುವಕರು ನಮ್ಮ ಮೇಲೆ ಕಂಪ್ಲೇಂಟ್ ಕೊಡ್ತೀಯಾ ಎಂದು ಅಡ್ಡಹಾಕಿದೆ. ಇದಕ್ಕೆ ಇಬ್ರಾಹಿಂ ನಾವು ನಿಮ್ಮ ವಿರುದ್ಧ ದೂರು ನೀಡಿಲ್ಲ ನಮಗೆ ಯಾಕೆ ಬೈಯುತ್ತೀರಿ ಎಂದು ಕೇಳಿದ್ದಾನೆ.
ಇಷ್ಟಕ್ಕೆ ಮಾರಕಾಸ್ತಗಳೊಡನೆ ಬಂದಿದ್ದ ತಂಡ ಇಬ್ರಾಹಿಂನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದೆ. ಇಬ್ರಾಹಿಂ ರಕ್ತ ಸಿಕ್ತನಾಗಿದ್ದಾನೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದಸ್ತಗಿರಿ, ನಿಹಾಲ್, ಬಚ್ಚಾ ಫೈಸಲ್, ವಸಿಉಲ್ಲಾ ಮತ್ತಿತರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದರಲ್ಲಿ ಒಬ್ಬನನ್ನ ಪೊಲೀಸರು ಬಂಧಿಸಿದ್ದಾರೆ.
ಅಜರ್ ಮತ್ತು ನಿಹಾಲ್ ನಡುವಿನ ತಿಕ್ಕಾಟದಿಂದ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಹಿಂದೆ ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡೂ ಗ್ಯಾಂಗ್ ನಡುವೆ ಗಲಾಟೆಯಾಗಿತ್ತು. ಈ ಗಲಾಟೆಯಿಂದಲೇ ನಿನ್ನೆ ಇಬ್ರಾಹಿಂ ಮೇಲೆ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.
Shivamogga-Young man attacked with machete near Shadi Mahal

