ರೈತ ಸಂಘ ಹಾಗೂ ಹಿರಿಯ ನಾಗರಿಕರಿಂದ ಮುಖ್ಯಮಂತ್ರಿಗಳಿಗೆ ಮನವಿ: ಶಿರಾಳಕೊಪ್ಪ ಆಸ್ಪತ್ರೆ ಉಳಿಸಲು ಪಟ್ಟು- Farmers' association and senior citizens appeal to Chief Minister: Demand to save Shiralakoppa Hospital

SUDDILIVE || SHIRALKOPPA

ರೈತ ಸಂಘ ಹಾಗೂ ಹಿರಿಯ ನಾಗರಿಕರಿಂದ ಮುಖ್ಯಮಂತ್ರಿಗಳಿಗೆ ಮನವಿ: ಶಿರಾಳಕೊಪ್ಪ ಆಸ್ಪತ್ರೆ ಉಳಿಸಲು ಪಟ್ಟು- Farmers' association and senior citizens appeal to Chief Minister: Demand to save Shiralakoppa Hospital   

 

Farmer, association

ರಾಜ್ಯ ಸರ್ಕಾರವು ಇತ್ತೀಚೆಗೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಿಂಗಳಿಗೆ 30ಕ್ಕಿಂತ ಕಡಿಮೆ ಹೆರಿಗೆಯಾಗುವ ಆಸ್ಪತ್ರೆಗಳಿಂದ ಅರಿವಳಿಕೆ ತಜ್ಞರು, ಮಕ್ಕಳ ತಜ್ಞರು ಮತ್ತು ಪ್ರಸೂತಿ ತಜ್ಞರನ್ನು ತಾಲ್ಲೂಕು ಕೇಂದ್ರಗಳಿಗೆ ಸ್ಥಳಾಂತರಿಸಿ, ಇಲ್ಲಿ ಕೇವಲ ಸಾಮಾನ್ಯ ಚಿಕಿತ್ಸೆ ನೀಡಲು ಮುಂದಾಗಿರುವುದನ್ನು ಖಂಡಿಸಿ ತಾಲ್ಲೂಕು ರೈತ ಸಂಘಟನೆ ನೇತೃತ್ವ ದಲ್ಲಿ ಉಪ ತಹಸೀಲ್ದಾರ್ ನಾಡ ಕಚೇರಿ ಇವರ ಮೂಲಕ ಮುಖ್ಯ ಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು.

ರೈತ ಸಂಘ, ಅಲ್ಲಮ ಪ್ರಭು ಹಿರಿಯ ನಾಗರಿಕರ ಸಮಿತಿ ಹಾಗೂ ಪಟ್ಟಣದ ಸಾರ್ವಜನಿಕರೊಂದಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ಗೌರವಾಧ್ಯಕ್ಷ ಪ್ಯಾಟಿ ಈರಣ್ಣ ಬಡವರು ಕೂಲಿಕಾರ್ಮಿಕರು ಹಾಗೂ ಗ್ರಾಮೀಣ ಭಾಗದಿಂದ ಹೆಚ್ಚು ರೋಗಿಗಳು ಪಟ್ಟಣದ  ಸಮುದಾಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆ ಪಡೆಯಲು ಬರುತ್ತಿದ್ದು ಇಲ್ಲಿನ ವೈದ್ಯರನ್ನು ಬೇರೆ ಕಡೆಗೆ ಸ್ಥಳಾಂತರಿಸಿದರೆ ಈ ಭಾಗದ ಜನರಿಗೆ ಮಾಡುವ ಅನ್ಯಾಯವಾಗುತ್ತದೆ. ನಮ್ಮ ನ್ಯಾಯಯುತ  ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಸ್ವೀಕರಿಸಿ ವೈದ್ಯರ ಕೊರತೆಯನ್ನು ಕೊನೆಗಾಣಿಸಬೇಕು ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಸಾಮಾಜಿಕ ಹೋರಾಟಗಾರ ನವೀದ್ ಶಿರಾಳಕೊಪ್ಪ ಮಾತನಾಡಿ ಶಿಕಾರಿಪುರ ತಾಲ್ಲೂಕಿನ ಅರ್ಧದಷ್ಟು ಭೌಗೋಳಿಕ ವ್ಯಾಪ್ತಿ ಮತ್ತು ಜನಸಂಖ್ಯೆ ಶಿರಾಳಕೊಪ್ಪ ಭಾಗದಲ್ಲೇ ಇದೆ. ಇಲ್ಲಿನ ಕೆಲವು ಗಡಿ ಹಳ್ಳಿಗಳಿಂದ ತಾಲ್ಲೂಕು ಆಸ್ಪತ್ರೆಗೆ ಸುಮಾರು 50 ರಿಂದ 55 ಕಿ.ಮೀ ದೂರವಿದ್ದು, ತುರ್ತು ಸಂದರ್ಭಗಳಲ್ಲಿ ರೋಗಿಗಳು ಜೀವ ಕಳೆದುಕೊಳ್ಳುವ ಭೀತಿ ಎದುರಾಗುತ್ತದೆ. 

ಇತ್ತೀಚೆಗಷ್ಟೇ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರವನ್ನು  30 ಹಾಸಿಗೆಯಿಂದ 50 ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲಾಗಿದೆ.

ಇಲ್ಲಿ ಕೋಟಿಗಟ್ಟಲೆ ಹಣದ ವೆಚ್ಚದಲ್ಲಿ ಸುಸಜ್ಜಿತವಾದ ಮತ್ತು ಆಧುನಿಕ ಮಾದರಿಯ ಎರಡು ಶಸ್ತ್ರಚಿಕಿತ್ಸಾ ಕೊಠಡಿಗಳನ್ನು (Operation Theatres) ನಿರ್ಮಿಸಲಾಗಿದೆ. ವೈದ್ಯರ ಕೊರತೆಯಿಂದ ಶಸ್ತ್ರ ಚಿಕಿತ್ಸಾ ಕೊಠಡಿ ಗಳು ಧೋಳು ತಿನ್ನುತ್ತಿವೆ. ನಿಯಮದಂತೆ 50 ಹಾಸಿಗೆಗಳ ಆಸ್ಪತ್ರೆಗೆ ಅಗತ್ಯವಿರುವ ಹೆಚ್ಚುವರಿ ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಿಸುವ ಬದಲು, ಇರುವ ವೈದ್ಯರನ್ನೇ ಬೇರೆಡೆಗೆ ವರ್ಗಾಯಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಉಪ ತಹಸೀಲ್ದಾರ್ ಸಾಕಮ್ಮ ಮನವಿ ಸ್ವೀಕರಿಸಿದರು. ತಾಲ್ಲೂಕು ರೈತ ಸಂಘದ ಅಧ್ಯಕ್ಷ ರಾಜು ಮುಗಳಿಕೊಪ್ಪ, ಮಂಜಪ್ಪ, ರಾಜು ಹೊಸಮನಿ, ಫಾರೂಕ್ ಬೆಳ್ಳಿಗಾವಿ, ಬಸವರಾಜು ತಡಸನಹಳ್ಳಿ, ಶಿವಾನಂದಪ್ಪ ನ್ಯಾಮತಿ, ಸಿದ್ದವ್ವ, ಸುರೇಖಮ್ಮ, ರೇಣುಕಮ್ಮ ಮತ್ತಿತರರು ಇದ್ದರು.

Farmers' association and senior citizens appeal to Chief Minister: Demand to save Shiralakoppa Hospital

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು
Girl in a jacket
close