SUDDILIVE || SHIVAMOGGA
ಕಾರು ಅಪಹರಿಸಿಕೊಂಡು ಹೋದ ಅಪರಿಚಿತರು-Strangers who stole a car
ರಸ್ತೆ ಅಪಘಾತದ ಹಿನ್ನಲೆಯಲ್ಲಿ ಯುವಕನೋರ್ವನ ಮೇಲೆ ಹಲ್ಲೆ ನಡೆಸಿ ಕಾರೊಂದನ್ನ ಅಪಹರಿಸಿಕೊಂಡು ಹೋದ ಘಟನೆ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು ಇಂದು ಜೈಲ್ ರಸ್ತೆಯಲ್ಲಿ ಪೊಲೀಸರು ಮಹಜರ್ ನಡೆಸಿದ್ದಾರೆ.
ಹೊಳೆ ನರಸೀಪುರದಿಂದ ಬಂದಿದ್ದ ಶಮಂತ್ ಎಂಬುವರು ಶಿವಮೊಗ್ಗದ ವಿನೋಬ ನಗರದ 60 ಅಡಿ ರಸ್ತೆಯಲ್ಲಿರುವ ಸಂಜೀವಿನಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಬಂದಿದ್ದರು. ಇವರು ಜೈಲ್ ರಸ್ತೆಯಲ್ಲಿ ಸ್ವಿಫ್ಟ್ ಡಿಸೇರ್ ಕಾರಿನಲ್ಲಿ ಹೋಗುವಾಗ ರಸ್ತೆ ಅಪಘಾತ ಸಂಭವಿಸಿದೆ. ದ್ವಿಚಕ್ರ ವಾಹನಕ್ಕೂ ಹಾಗೂ ಕಾರಿಗೂ ಡಿಕ್ಕಿ ಉಂಟಾದ ಪರಿಣಾಮ ದ್ವಿಚಕ್ರ ವಾಹನದ ಸವಾರರರೊಂದಿಗೆ ಮಾತಿಗೆ ಮಾತು ನಡೆದು ಗಲಾಟೆಯಾಗಿದೆ.
ಈ ವೇಳೆ ಅಪರಿಚಿತ ದ್ವಿಚಕ್ರವಾಹನ ಸವಾರರು ಶಮಂತ್ ಮೇಲೆ ಹಲ್ಲೆ ನಡೆಸಿ ಅವರ ಕಾರನ್ನ ಕದ್ದುಕೊಂಡು ಹೋಗಿರುವುದಾಗಿ ಶಿವಮೊಗ್ಗ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಘಟನೆ ನಡೆದ ಜೈಲ್ ರಸ್ತೆಯಲ್ಲಿ ಮಹಜರ್ ನಡೆಸಿದ್ದಾರೆ.
ಅಪರಿಚಿತರಿಂದ ಸ್ವಿಫ್ಟ್ ಕಾರು ಅಪಹರಣಕ್ಕೊಳಗಾಗಿದೆ ಎಂದು ಶಮಂತ್ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರದ ಊರಿನಿಂದ ಸಂಭ್ರಮದಿಂದ ಇರಬೇಕಿದ್ದ ಶಮಂತ್ ಪೊಲೀಸ್ ಠಾಣೆ ಮತ್ತು ಕೋರ್ಟು ಕಚೇರಿ ಅಲೆಯುವಂತಾಗಿದೆ. ಇದೂ ಸಹ ರೋಡ್ ರೇಜ್ ಗೆ ಕಾರಣವಾಯಿತಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.
Strangers who stole a car

