SUDDILIVE || SHIVAMOGGA
ಸಾಗರದಲ್ಲಿ ಚರ್ಚೆಗೆ ಕಾರಣವಾದ 'ಬಾವಿ' ರಾಜಕಾರಣ-'Well' politics that caused debate in Sagar
ಒಂದು ಬಾವಿ ಶಾಸಕ ಬೇಳೂರು ಗೋಪಾಲಕೃಷ್ಣರಿಗೆ ಮಂತ್ರಿ ಸ್ಥಾನದಿಂದ ದೂರ ವಿಡುತ್ತಿದೆಯಾ ಎಂಬ ಅನುಮಾನಗಳು ಶುರುವಾಗಿದೆ. ಇಂಥಹದ್ದೊಂದು ಚರ್ಚೆಗೆ ಸಾಗರ ಜನಸಾಕ್ಷಿ ಸಹ ಆಗಿದ್ದಾರೆ. ಜೋತಿಷಿ ಮಾತಿಗೆ ಮನೆಯ ಪಕ್ಕದಲ್ಲೇ ಇದ್ದ ಭಾವಿಯನ್ನೇ ಮುಚ್ಚಿಸಲು ಶಾಸಕರು ಮುಂದಾಗಿದ್ದಕ್ಕೆ ಈ ಆರೋಪ ಸಾಗರದಲ್ಲಿ ಬುಗಿಲೆದ್ದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಕಾಂಗ್ರೇಸ್ ಶಾಸಕ ಬೇಳೂರುಗೋಪಾಲಕೃಷ್ಣತಮ್ಮ ಮನೆಯ ಸನಿಹದಲ್ಲೇ ತೆರದ ಬಾವಿಯಿದೆ. ಜೋತಿಷಿಯೊಬ್ಬರು ಬಾವಿಯನ್ನು ಮುಚ್ಚಿಸಲು ಹೇಳಿದ್ದಕ್ಕೆ ಶಾಸಕರು ಮುಚ್ಚಿಸಲು ಹೊರಟಿದ್ದಾರೆ ಎಂಬ ಆರೋಪವನ್ನ ಸಾಮಾಜಿಕ ಕಾರ್ಯಕರ್ತ ನಾರಾಯಣ್ ಮೂರ್ತಿ ಹೇಳಿದ್ದಾರೆ.
ಶಾಸಕರಿಗೆ ಕಂಟಕಪ್ರಾಯವಾಗಿರುವ ಈ ಬಾವಿ ಇಡೀ ವಿಜಯನಗರ ವಾರ್ಡ್ ಗೆ ನೀರು ಉಣಿಸುವ ಜೀವನಾಡಿಯಾಗಿದೆ. ಜೋತಿಷಿಯ ಗೀಳಿಗೆ ಬಿದ್ದಿರುವ ಶಾಸಕರು ಜೀವನಾಡಿಯಾಗಿರುವ ಬಾವಿಯನ್ನ ಮುಚ್ಚಿಸಲು ಕೆಲಸಗಾರರನ್ನ ಕಳುಹಿಸಿದ್ದಾರೆ. ಇದನ್ನ ತಾನು ತಡೆದಿರುವುದಾಗಿ ಆರೋಪಿಸಿದ್ದಾರೆ.
ಸಾಗರದ 18 ನೇ ವಾರ್ಡ್ ನಲ್ಲಿ ಇರುವ ವಿವೇಂಕನಂದ ಗ್ರಂಥಾಲಯಕ್ಕೆಈ ಬಾವಿ ಸೇರಿದೆ. ಖಾಸಗಿ ಜಾಗದಲ್ಲಿ ಇರುವ ಕುಡಿಯುವ ನೀರಿನ ಭಾವಿ ಸುತ್ತ ಮುತ್ತಲಿನ ಜನರಿಗೆ ಕುಡಿಯುವ ನೀರಿನ ಮೂಲವಾಗಿದೆ. ಸಾರ್ವಜನಿಕರ ವಿರೋಧ ವ್ಯಕ್ತ ವಾದಾಗ ಬಾವಿ ಮುಚ್ಚಲು ಬಂದ ಕಾರ್ಮಿಕರು ಸಧ್ಯಕ್ಕೆ ವಾಪಾಸ್ ಆಗಿದ್ದಾರೆ.
ಶಾಸಕ ಬೇಳೂರು ಗೋಪಾಲಕೃಷ್ಣ ಮನೆಯ ಈಶಾನ್ಯ ದಿಕ್ಕಿಗೆ ಬಾವಿ ಇರುವುದರಿಂದ ಅವರಿಗೆ ಸಚಿವ ಸ್ಥಾನಕ್ಕೆ ಅಡ್ಡಿಆಗಿದೆ ಎಂದು ಬಾವಿ ಮುಚ್ಚಲು ಮುಂದಾಗಿದ್ದಾರೆ ಎಂಬ ಆರೋಪ ಸಾಗರದ ಇಡಿ ಚರ್ಚೆಗೆ ಗ್ರಾಸವಾಗಿದೆ. ಈಶಾನ್ಯ ದಿಕ್ಕಿನಲ್ಲಿ ಬಾವಿಯ ಮೇಲೆ ಶಾಸಕರ ರಾಜಕೀಯ ನಿರ್ಣಯವಾಗುತ್ತಾ ಎಂಬ ಅನುಮಾನ ಶುರುವಾಗಿದೆ.
'Well' politics that caused debate in Sagar
